ಬಾಂಬ್‌ಗಳು ಸ್ಫೋಟಗೊಳ್ಳುತ್ತವೆ, ನೀವೆಲ್ಲರೂ ಸಾಯುತ್ತೀರಿ : 41 ವಿಮಾನ ನಿಲ್ದಾಣಗಳಿಗೆ ನಕಲಿ ಬಾಂಬ್ ಬೆದರಿಕೆ

ಹಳೇ ಮೈಸೂರು ಭಾಗದಲ್ಲಿ 2ನೇ ವಿಮಾನ ನಿಲ್ದಾಣಕ್ಕೆ ಹೆಚ್ಚಿದ ಬೇಡಿಕೆ, ಒತ್ತಡ

ನವದೆಹಲಿ: ದೇಶದ 41 ವಿಮಾನ ನಿಲ್ದಾಣಗಳಿಗೆ ಬಾಂಬ್​ ಬೆದರಿಕೆ ಹಾಕಿದ ಘಟನೆ ಮಂಗಳವಾರ ನಡೆದಿದೆ. ಇದರಿಂದ ಕೆಲವೆಡೆ ವಿಮಾನಗಳ ಹಾರಾಟ ವಿಳಂಬವಾಗಿದೆ. ಎಲ್ಲ ವಿಮಾನಗಳ ತಪಾಸಣೆಯ ಬಳಿಕ ಇದೊಂದು ಹುಸಿ ಬೆದರಿಕೆ ಎಂದು ಗೊತ್ತಾಗಿದೆ. ಬಳಿಕ ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ವಾರಾಣಸಿ, ಚೆನ್ನೈ, ಪಾಟ್ನಾ ಮತ್ತು ಜೈಪುರ ಸೇರಿದಂತೆ ನಲವತ್ತೊಂದು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಹಾಕಿದ ಇಮೇಲ್‌ಗಳನ್ನು ಆಯಾ ವಿಮಾನ ನಿಲ್ದಾಣದ ಕಂಟ್ರೋಲ್​ ರೂಮ್​ಗೆ ಕಳುಹಿಸಲಾಗಿದೆ. ಇದರಿಂದ ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಗಂಟೆಗಟ್ಟಲೆ ಶೋಧ ಕಾರ್ಯಾಚರಣೆ ನಡೆಸಿದರು. ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

exhumedyou888@gmail.com ಇಮೇಲ್​ ಐಡಿಯಿಂದ ಮಧ್ಯಾಹ್ನ 12.40 ರ ಸುಮಾರಿಗೆ ಸಂದೇಶ ರವಾನಿಸಲಾಗಿದೆ. ಇದರಲ್ಲಿ ಹಲೋ, ವಿಮಾನ ನಿಲ್ದಾಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ. ಬಾಂಬ್‌ಗಳು ಶೀಘ್ರದಲ್ಲೇ ಸ್ಫೋಟಗೊಳ್ಳುತ್ತವೆ. ನೀವೆಲ್ಲರೂ ಸಾಯುತ್ತೀರಿ ಎಂದು ಬರೆಯಲಾಗಿತ್ತು. ಈ ಸಂದೇಶವುಳ್ಳ ಇಮೇಲ್ ಎಲ್ಲ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿದೆ.

ಕೆಎನ್​ಆರ್​ ಗುಂಪಿನಿಂದ ಬೆದರಿಕೆ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮೊದಲ ಬಾರಿಗೆ ವಾರಾಣಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿ ನೀಡಿದ್ದರು. ಇದರ ಬೆನ್ನಲ್ಲೆ, ಬಾಂಬ್​ ಸ್ಫೋಟ ಬೆದರಿಕೆ ಹಾಕಲಾಗಿತ್ತು. “KNR” ಎಂಬ ಆನ್‌ಲೈನ್ ಗುಂಪು ಈ ಹುಸಿ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದೇ ಗುಂಪು ಮೇ 1 ರಂದು ದೆಹಲಿಯ ಹಲವಾರು ಶಾಲೆಗಳಿಗೆ ಇಮೇಲ್‌ ಮಾಡಿ ಸ್ಫೋಟದ ಬೆದರಿಕೆ ಹಾಕಿತ್ತು

Leave a Reply

Your email address will not be published. Required fields are marked *