ಯುವಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ: ಸೂರಜ್​ ರೇವಣ್ಣಗೆ ವೈದ್ಯಕೀಯ ಪರೀಕ್ಷೆ ಮುಕ್ತಾಯ

ಹಾಸನ: ಜೆಡಿಎಸ್​​ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಬಂಧಿಯಾಗಿರುವ ವಿಧಾನ ಪರಿಷತ್​ ಸದಸ್ಯ ಸೂರಜ್ ರೇವಣ್ಣಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸೂರಜ್ ರೇವಣ್ಣನಿಗೆ ಬೆಂಗಳೂರು ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಹಾಗೇ ಸಂತ್ರಸ್ತನ ವೈದ್ಯಕೀಯ ಪರೀಕ್ಷೆಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ಪೊಲೀಸರು ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ

ಶನಿವಾರ ರಾತ್ರಿ 7.30ರ ಸಮಯದಲ್ಲಿ ಸಿಇಎನ್​ ಪೊಲೀಸ್​ ಠಾಣೆಗೆ ಡಾ. ಸೂರಜ್‌ ರೇವಣ್ಣ ಅವರನ್ನು ಕರೆ ತಂದಿದ್ದ ಪೊಲೀಸರು ಸಂತ್ರಸ್ತ ನೀಡಿರುವ ದೂರು ಹಾಗೂ ಸೂರಜ್ ಆಪ್ತ ನೀಡಿರುವ ದೂರುಗಳ ಪ್ರತ್ಯೇಕ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದರು. ಪೊಲೀಸ್ ಠಾಣೆಗೆ ಹಾಸನ ಜಿಲ್ಲಾ ಎಸ್ಪಿ ಮಹಮದ್ ಸುಜೀತಾ ಭೇಟಿ ನೀಡಿ ಚರ್ಚಿಸಿದ ನಂತರ ಅಧಿಕಾರಿಗಳಿಗೆ ಸೂಚನೆ ನೀಡಿ ತೆರಳಿದ್ದರು

ನಿನ್ನೆ ರಾತ್ರಿಯಿಂದ ಸಿಇಎನ್ ಠಾಣೆಯಲ್ಲಿ ಸೂರಜ್ ಅವರನ್ನು ವಿಚಾರಣೆಗೊಳಪಡಿಸಿದ್ದ ತನಿಖಾಧಿಕಾರಿ ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.

ಸೂರಜ್​ ರೇವಣ್ಣ ಮಾಜಿ ಸಚಿವರ ಪುತ್ರ ಆಗಿರುವುದರಿಂದ ಪೊಲೀಸ್​ ಠಾಣೆ ಸುತ್ತಾ ಬಿಗಿ ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ಠಾಣೆ ಬಳಿಯೇ ಸೂರಜ್ ಅವರ ಕಾರು ಇದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗ ಸಾಧ್ಯತೆ ಇದೆ. ನಗರದ ಎನ್.ಆರ್. ವೃತ್ತದ ಬಳಿ ಇರುವ ಸೆಇಎನ್​ ಠಾಣೆಗೆ ಸೂರಜ್​​ನನ್ನು ವಾಪಸ್ ಕರೆ ತಂದಿದ್ದಾರೆ. ಈ ವೇಳೆ ಪೊಲೀಸರು ಠಾಣೆಗೆ ಬಂದ ಸೂರಜ್ ಪರ ವಕೀಲ ಪೂರ್ಣಚಂದ್ರ ಕೆಲ ಸಮಯ ಚರ್ಚೆ ನಡೆಸಿದರು.

Leave a Reply

Your email address will not be published. Required fields are marked *