ಪಕ್ಷ ರಾಜಕೀಯ ಮರೆತು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು – ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು : ದೆಹಲಿಗೆ ತೆರಲಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು 08 ಗಂಟೆಯ ವಿಮಾನದಲ್ಲಿ ಕೆಐಎಬಿ ಗೆ ಆಗಮಿಸಿದ್ದಾರೆ.

ಇನ್ನೂ ಈ ವೇಳೆ ಕೆಂಪೇಗೌಡ ಏರ್ಪೋಟ್ ನಲ್ಲಿ ಡಿಕೆ ಶಿವಕುಮಾರ್ ಮಾದ್ಯಮದವರೊಂದಿಗೆ ಮಾತನಾಡಿದ್ದು  ನೂತನವಾಗಿ ಆಯ್ಕೆಯಾದ ಸಂಸದರು ಕೇಂದ್ರ ಮಂತ್ರಿಗಳನ್ನ ಬೇಟಿಯಾಗಿದ್ವಿ.ರಾಜ್ಯಕ್ಕೆ  ಆಗಬೇಕಾದ ನ್ಯಾಯಗಳು ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿದ್ವಿ ಎಂದರು

ಇನ್ನೂ ಚುನಾವಣೆ ಮುಗಿದಿದೆ ಪಕ್ಷ ರಾಜಕೀಯ ವನ್ನ ಮರೆತು ಎಲ್ಲರೂ ಸಹಾಯ ಮಾಡ್ತೀವಿ ಅಂತ ಎಲ್ಲಾ ಸಂಸತ್ ಸದಸ್ಯರು ಹೇಳಿದ್ದಾರೆ.

ಕುಮಾರಸ್ವಾಮಿ,ನಿರ್ಮಲಾ ಸೀತಾರಾಮನ್,‌ಜೋಶಿ, ಸೋಮಣ್ಣ ಎಲ್ಲರೂ ಏನೆ‌ ಇದ್ರು ತಿಳಿಸಿ ಸಹಕಾರ ಕೊಡ್ತಿವಿ ಅಂತ ಹೇಳಿದ್ದಾರೆ. ಎಲ್ಲರೂ ಒಟ್ಟಾಗಿ ಊಟ ಮಾಡಿ ಸೌಹಾರ್ದತ ಸಭೆ ನಡೆಸಿದ್ದೇವೆ ನಮ್ಮ ಅಧಿಕಾರಿಗಳಿಗೂ ಅವರ ಜೊತೆ ಸಂಪರ್ಕದಲ್ಲಿರಿ ಅಂತ ಹೇಳಿದ್ದೇವೆ.

ನಿತಿನ್ ಗಡ್ಕರಿ ಅವರ ಸಹ ಇಂದು ಬೇಟಿ ಮಾಡಿದ್ವಿ ರಾತ್ರಿ ಹೋಂ ಮಿನಿಸ್ಟರ್ ಬೇಟಿ ರಾತ್ರಿ ಇತ್ತು.ನನಗೆ ಬೇರೆ ಕೆಲಸವಿದ್ದ ಕಾರಣ ವಾಪಸ್ ಬಂದಿದ್ದೀನಿ.

ನಾಳೆ ರಾತ್ರಿ ಪಿಎಂ ಬೇಟಿಯಿದೆ ಮತ್ತೆ ವಾಪಸ್ ಹೋಗ್ತೀನಿ ಯಾವೆಲ್ಲ ವಿಚಾರಗಳಿವೆ ಅವು ಅವರ ಗಮನಕ್ಕೂ ತರ್ತಿನಿ. ಕರ್ನಾಟಕವನ್ನ ಅಭಿವೃದ್ಧಿ ಕಡೆ ನೆಲ ಜಲದ ಸಹಾಯದ ಬಗ್ಗೆ ಒಟ್ಟಾಗಿ ಹೋರಾಟ ಮಾಡಲಿಕ್ಕೆ ಎಂಪಿಗಳಿಗೆ ಮನಃವಿ ಮಾಡ್ತೀವಿ.

ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ ವಿಚಾರ.

ರಾಜಕಾರಣದಲ್ಲಿ ಬಿಜೆಪಿ ಯವರು ಬದುಕಬೇಕು ಅದಿಕ್ಕೆ ಅವರು ಮಾತನಾಡ್ತಾರೆ ಅಷ್ಟೆ. ನಮ್ಮಿಂದ ಯಾವುದೇ ಬೆಲೆ ಏರಿಕೆಯಾಗಿಲ್ಲ ಎಲ್ಲಿ ಆಗಿದೆ ಬೆಲೆ ಏರಿಕೆ.ಹಾಲು 50 ಗ್ರಾಂ ಇನ್ನೂ ಜ್ಯಾಸ್ತಿ ಸಿಗ್ತಿದೆ.

ರೈತರು ಪರಿಸ್ಥಿತಿ ಏನು ಅಂತ ಅರ್ಥ ಮಾಡ್ಕೋಬೇಕು ಅಂತ ನಾನು ಅವರಿಗೆ ಮನಃವಿ ಮಾಡ್ತೀನಿ ಎಂದು ಕೆಂಪೇಗೌಡ ಏರ್ಪೋಟ್ ನಲ್ಲಿ ದೆಹಲಿಯಿಂದ ಆಗಮಿಸಿ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು

Leave a Reply

Your email address will not be published. Required fields are marked *