ಸಿನಿಮಾ ಟಿಕೆಟ್‌, OTT ಸಬ್‌ಸ್ಕ್ರಿಪ್ಶನ್ ಮೇಲೆ ಶೇ. 2 ರಷ್ಟು ಸೆಸ್ ವಿಧಿಸಲು ಸರ್ಕಾರ ಮುಂದು

ಬೆಂಗಳೂರು: ರಾಜ್ಯ ಸರ್ಕಾರವು ಸಿನಿಮಾ, ಸಾಂಸ್ಕೃತಿಕ ಕಲಾವಿದರ ಅನುಕೂಲಕ್ಕಾಗಿ ಸಿನಿಮಾ ಟಿಕೆಟ್‌ಗಳ ಮೇಲೆ ಮತ್ತು OTT ಸಬ್‌ಸ್ಕ್ರಿಪ್ಶನ್ ಶುಲ್ಕದ ಮೇಲೆ ಶೇ. ಒಂದರಿಂದ ಎರಡರಷ್ಟು ಹೊಸ ಸೆಸ್ ವಿಧಿಸಲು ಯೋಜಿಸಿದೆ.

ಈ ಶುಲ್ಕವು ಕಾರ್ಮಿಕ ಸಚಿವಾಲಯದ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಲಾವಿದರ(ಕಲ್ಯಾಣ) ಮಸೂದೆ 2024 ರ ಅಡಿಯಲ್ಲಿ ಸಿನಿ ಕಲಾವಿದರು ಮತ್ತು ಸಾಂಸ್ಕೃತಿಕ ಪ್ರದರ್ಶಕರಿಗೆ ESI ಮತ್ತು PF ನಂತಹ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಒದಗಿಸುತ್ತದೆ.

ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಲಾವಿದರ(ಕಲ್ಯಾಣ) ಮಸೂದೆ, 2024 ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಸೆಸ್ ಶೇ.1 ರಿಂದ ಶೇ.2ರ ವರೆಗೆ ಇದ್ದು, ಇದರ ನಿಖರ ದರವನ್ನು ಸರ್ಕಾರ ನಂತರ ನಿರ್ಧರಿಸಲಿದೆ.

ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್ ಮಾತನಾಡಿ, ರಾಜ್ಯದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳಿಗೂ ಸೆಸ್ ಅನ್ನು ವಿಸ್ತರಿಸಲು ಯೋಜಿಸಲಾಗಿದೆ. ಈ ಸೆಸ್‌ನಿಂದ ಬರುವ ಹಣವನ್ನು ಚಲನಚಿತ್ರ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಬಳಸಿಕೊಳ್ಳಲಾಗುವುಗು

Leave a Reply

Your email address will not be published. Required fields are marked *