ಬೆಂಗಳೂರು: ಈ ಜಂಜಾಟದ ಬದುಕಿನಲ್ಲಿ ನಿದ್ರೆ ಮಾಡಲು ಸಮಯವೆ ಇಲ್ಕದಂತೆ ಆಗಿಬಿಟ್ಟಿದೆ. ಹಾಸಿಗೆಯ ಮೇಲೆ ಗೊರಕೆ ಹೊಡೆಯುತ್ತಿದ್ದರೆ ಅವರಷ್ಟು ಅದೃಷ್ಟವಂತರು ಮತ್ತೊಬ್ಬರಿಲ್ಲ ಎಂದೇ ಹೇಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ನಿದ್ರೆ ಮಾಡುವುದು ತುಂಬಾ ಕಷ್ಟಕರವಾಗಿದೆ.ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಹೀಗೆ ಬಹಳ ದಿನ ಮುಂದುವರಿದರೆ ಹೃದಯ ಸಂಬಂಧಿ ಸಮಸ್ಯೆ, ಬಿಪಿಯಂತಹ ಸಮಸ್ಯೆಗಳು ಬರುತ್ತವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.
ವೈಯಕ್ತಿಕ ಮತ್ತು ವೃತ್ತಿಪರ ಸಮಸ್ಯೆಗಳಿಂದ ಅನೇಕ ಜನರು ನಿದ್ರೆ ಕಳೆದುಕೊಳ್ಳುತ್ತಿದ್ದಾರೆ. ಸಹಜವಾಗಿ, ನಿದ್ರೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅದು ನಿಮಗೆ ತಿಳಿದಿದ್ದರೆ, ನೀವು ವೈದ್ಯರ ಬಳಿಗೆ ಹೋಗಲು ಬಯಸುವುದಿಲ್ಲ. ನೀವು ಎಷ್ಟು ಗಂಟೆಗಳ ಕಾಲ ಮಲಗಬೇಕು? ಯಾವುದೇ ವಯಸ್ಸಿನ ವ್ಯಕ್ತಿಯು ಎಷ್ಟು ಗಂಟೆಗಳ ಕಾಲ ಮಲಗಬೇಕು? ಎನ್ನುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ…
ನವಜಾತ ಶಿಶುವಿನಿಂದ 3 ತಿಂಗಳವರೆಗೆ ಸುಮಾರು 14-17 ಗಂಟೆಗಳ ನಿದ್ರೆ ಅಗತ್ಯವಿದೆ.
4 ತಿಂಗಳಿಂದ 11 ತಿಂಗಳ ಮಗು 12-15 ಗಂಟೆಗಳ ಕಾಲ ನಿದ್ರೆ ಮಾಡಬೇಕು.
ಒಂದು ವರ್ಷದಿಂದ 2 ವರ್ಷದ ಮಕ್ಕಳು 11-14 ಗಂಟೆಗಳ ಕಾಲ ಮಲಗಬೇಕು.
ಮೂರರಿಂದ ಐದು ವರ್ಷದೊಳಗಿನ ಮಕ್ಕಳು 10-13 ಗಂಟೆಗಳ ಕಾಲ ನಿದ್ದೆ ಮಾಡುವುದು ಉತ್ತಮ.
6 ರಿಂದ 12 ವರ್ಷದೊಳಗಿನ ಮಕ್ಕಳು 9 ರಿಂದ 12 ಗಂಟೆಗಳ ಕಾಲ ಮಲಗಬೇಕು.
ಹದಿಹರೆಯದ ಮಕ್ಕಳು, ಅಂದರೆ 13-18 ವರ್ಷ ವಯಸ್ಸಿನ ಯುವಕರು 8-10 ಗಂಟೆಗಳ ಕಾಲ ಮಲಗಬೇಕು.
18 ರಿಂದ 60 ವರ್ಷದೊಳಗಿನ ಎಲ್ಲರೂ 7 ರಿಂದ 9 ಗಂಟೆಗಳವರೆಗೆ ಮಲಗಬೇಕು.
61 ವರ್ಷಕ್ಕಿಂತ ಮೇಲ್ಪಟ್ಟವರು 7-8 ಗಂಟೆಗಳ ಕಾಲ ನಿದ್ರೆ ಮಾಡಬೇಕು.
ದು ಯಾವ ವೈದ್ಯರೂ ಹೇಳದ ರಹಸ್ಯ. ಇವು ಕೇವಲ ಸಲಹೆಗಳಿಗೆ ಮಾತ್ರ ನೀಡಲಾಗಿದೆ. ನಿದ್ರಿಸಲಾಗದಿದ್ದರೆ ಅಥವಾ ನಿಮಗೆ ನಿದ್ದೆ ಕುರಿತಾಗಿ ಯಾವುದೇ ಸಮಸ್ಯೆಗಳಿಂದ ಬಳಲುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.