ಅನ್ನಭಾಗ್ಯ ಯೋಜನೆಗೆ ಕೇಂದ್ರದಿಂದ ಅಕ್ಕಿ ನೀಡಲು ಸಿದ್ಧ : ಪ್ರಹ್ಲಾದ್ ಜೋಷಿ

ನವದೆಹಲಿ- ಕರ್ನಾಟಕ ಸರ್ಕಾರ ಅನ್ನ ಭಾಗ್ಯ ಯೋಜನೆಗೆ ಅಕ್ಕಿಯನ್ನು ಕೇಳಿದರೆ ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಡಲು ಸಿದ್ಧವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾಹಿತಿ ನೀಡಿದ್ದಾರೆ.ಈ ಕುರಿತು ನವದೆಹಲಿ ಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ಸಿದ್ಧವಿದೆ.

ಮನವಿ ಬಂದರೆ ಹೆಚ್ಚುವರಿ ಅಕ್ಕಿ ಕೊಡಲಿದ್ದೇವೆ. ಕೆಜಿಗೆ 28 ರೂ.ನಂತೆ ನಾವು ಅಕ್ಕಿ ಕೊಡಲು ಸಿದ್ಧರಿದ್ದೇವೆ.ಎಷ್ಟು ಬೇಕಾದರೂ ಅಕ್ಕಿ ಕೊಡಲಿದ್ದೇವೆ ಎಂದು ಹೇಳಿದ್ದಾರೆ.

ಕರ್ನಾಟಕ ಮಾತ್ರವಲ್ಲದೆ, ಯಾವುದೇ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಅಕ್ಕಿಯನ್ನು ಕೇಳಿದರೆ ಕೇಂದ್ರ ಸರ್ಕಾರವು ಅಕ್ಕಿಯನ್ನು ಕೊಡಲಿ ಸಿದ್ಧವಿದೆ. ಇನ್ನು ಕಳೆದ ವರ್ಷ ಕರ್ನಾಟಕ ಸರ್ಕಾರ ಅಕ್ಕಿಯನ್ನು ಕೇಳಿದಾಗ ದೇಶದಾದ್ಯಂತ ಬರಗಾಲದ ಪರಿಸ್ಥಿತಿ ಇತ್ತು.

ಹೀಗಾಗಿ, ಕರ್ನಾಟಕದ ಮಾದರಿಯಲ್ಲಿಯೇ ಎಲ್ಲಾ ರಾಜ್ಯಗಳು ಅಕ್ಕಿಯನ್ನು ಕೇಳಿದರೆ ಸ್ಟಾಕ್ ಸಮಸ್ಯೆ ಆಗಬಹುದು ಎಂದು ಅಕ್ಕಿಯನ್ನು ಕೊಡದಿರಲು ತೀರ್ಮಾನ ಮಾಡಲಾಗಿತ್ತು ಎಂದು ಕೇಂದ್ರದ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡರು.

ಆದರೆ, ಈಗ ದೇಶದಲ್ಲಿ ಉತ್ತಮ ಮಳೆಯಾಗಿದ್ದು, ಎಲ್ಲೆಡೆ ಉತ್ತಮ ಬೆಳೆಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರಾಜ್ಯಗಳು ಅಕ್ಕಿಯನ್ನು ಕೇಳಿದರೆ 28 ರುಪಾಯಿ ದರದಲ್ಲಿ ನಾವು ಅಕ್ಕಿ ಕೊಡಲು ಸಿದ್ಧರಿದ್ದೇವೆ. ಈಗ ಸದಸ್ಯಕ್ಕೆ ಯಾವುದೇ ರಾಜ್ಯದಿಂದ ಅಕ್ಕಿ ಬೇಕೆಂದು ಮನವಿ ಬಂದಿಲ್ಲ. ದೇಶದಲ್ಲಿ ನಾವು 80 ಕೋಟಿ ಜನರಿಗೆ ಪಡಿತರ ಮೂಲಕ ಅಕ್ಕಿ ಕೊಡ್ತಿವಿ. ರಾಜ್ಯಗಳು ಹರಾಜಿಗೂ ಭಾಗಿಯಾಗದೇ ನೇರವಾಗಿ 28 ರೂ. ಕೊಡ್ತಿವಿ. ರಾಜ್ಯದಿಂದ ಈತನಕ ಯಾವುದೇ ಬೇಡಿಕೆ ಬಂದಿಲ್ಲ ಎಂದು ಮಾಹಿತಿ ನೀಡಿದರು.

ಈ ಹಿಂದೆ ರಾಜ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ಸುತರಾಂ ಒಪ್ಪಿರಲಿಲ್ಲ. ಇರುವ ಸ್ಟಾಕ್ನ್ನೆಲ್ಲ ರಾಜ್ಯಕ್ಕೆ ಮಾರಾಟ ಮಾಡಿ ಖಾಲಿ ಮಾಡಿದರೆ ತುರ್ತು ಸಂದರ್ಭಗಳಲ್ಲಿ ವಿತರಣೆ ಮಾಡಲು ಕಷ್ಟ ಎಂಬುದು ಕೇಂದ್ರದ ವಾದವಾಗಿತ್ತು.ಅಕ್ಕಿ ನೀಡುವಂತೆ ಕರ್ನಾಟಕ ಸರ್ಕಾರ ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿತ್ತು. ರಾಜ್ಯದಿಂದ ಸಚಿವ ಕೆ.ಹೆಚ್.ಮುನಿಯಪ್ಪ ಖುದ್ದು ದೆಹಲಿಗೆ ಬೇಟಿ ಮಾಡಿ ಕೇಂದ್ರ ಸಚಿವರ ಜತೆ ಮಾತುಕತೆಯನ್ನೂ ನಡೆಸಿದ್ದರು. ಆದರೆ, ಪ್ರಯೋಜನವಾಗಿರಲಿಲ್ಲ.

ಪಾದಯಾತ್ರೆ ವಿಚಾರದ ಬಗ್ಗೆ ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕೆ ಮಾಡಲಾಗುವುದು. ಬಿಜೆಪಿ ಪಾದಯಾತ್ರೆ ನಡೆಯುತ್ತದೆ. ಅವರು ಹಾಗೂ ನಾವು ಪಾದಯಾತ್ರೆಯಲ್ಲಿ ಭಾಗವಹಿಸುತ್ತೇವೆ. ಪಾದಯಾತ್ರೆ ಬಗ್ಗೆ ಬಿಜೆಪಿ ಅವರು ಅಪಸ್ವರ ಹಿನ್ನೆಲೆಯಲ್ಲಿ ಅವರ ಜೊತೆಯೂ ನಮ ನಾಯಕರು ಮಾತುಕತೆ ನಡೆಸುತ್ತಾರೆ. ಪಕ್ಷದ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಜೊತೆಯೂ ಮಾತನಾಡುತ್ತವೆ ಎಂದು ತಿಳಿಸಿದ್ದಾರೆ.

ವಾಲೀಕಿ ಹಗರಣ ವಿಚಾರದ ಬಗ್ಗೆ ಮಾತನಾಡಿದ ಜೋಶಿ ಅವರು, ರಾಜ್ಯಪಾಲರು ಸಂವಿಧಾನಾತಕ ವ್ಯಕ್ತಿಯಾಗಿದ್ದಾರೆ. ಅವರ ಬಗ್ಗೆ ಯಾಕೆ ಇವರಿಗೆ ಭಯ. ಮುಡಾ ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್ ಬರೆಯದೇ ಇದ್ದಿದ್ದರೆ ಈ ಅವ್ಯವಹಾರ ಹೊರಗಡೆ ಬರುತ್ತಿಲ್ಲ. ನೀವು ಭ್ರಷ್ಟಾಚಾರ, ಹಗರಣ ಮಾಡಿದ್ದೀರಿ.

ಸಿದ್ದರಾಮಯ್ಯ ಅವರು ಮುಖಚರ್ಯೆ ನೋಡಿ. ಭಯಗ್ರಸ್ಥರಾಗಿ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಮೂಡಾ ಹಗರಣ- ದಾಖಲೆಗಳು ಅವರ ಪಕ್ಷದ ನಾಯಕರೇ ಕೊಟ್ಟಿದ್ದಾರೆ. 19 ಹಗರಣಗಳ ಪಟ್ಟಿಯ ಎಲ್ಲ ವಿವರಗಳನ್ನು ಮನೆ ಮನೆಗೆ ಹಂಚುತ್ತಾರೆ. ಯಾಕೆ ಹಂಚುತ್ತೀರಿ.. ನಿಮದೇ ಸರ್ಕಾರ ಇದೆ. ತನಿಖೆ ಮಾಡಿ.

ಎಲ್ಲರನ್ನು ಹೆದರಿಸಿ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ಅಹಿಂದ ಇರಲಿ ಅಥವಾ ಬೇರೆ ಯಾವುದೇ ಸಮುದಾಯದ ನಾಯಕ ಇರಲಿ. ಭ್ರಷ್ಟಾಚಾರ ಮಾಡಿ, ತನಿಖೆ ಮಾಡುವುದು ಬೇಡ ಎಂದರೆ ಹೇಗೆ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆಕೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ನಡೆದಿರುವ ಬಗ್ಗೆ ಸಿಎಂ ಒಪ್ಪಿಕೊಂಡಿದ್ದಾರೆ. ಹಿಂದೆ ನಾನು 100 ಪರ್ಸೆಂಟ್ ಸರ್ಕಾರದ ಎಂದ್ದೆಿ. ಬಹಳ ಅಂದರೆ, 70-80 ಪರ್ಸೆಂಟ್ ಎಂದು ರಿಯಾಯಿತಿ ಕೊಡಬಹುದು. ಹಿಂದೆ ರಾಜ್ಯಪಾಲರನ್ನು ಕಾಂಗ್ರೆಸ್ ನಾಯಕರು ಹೊಗಳಿದ್ದರು. ಈಗ ಯಾಕೆ ತೆಗಳುತ್ತಿದ್ದಾರೆ? ಬಿಜೆಪಿ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಲಿ, ಸರ್ಕಾರ ಅವರದ್ದೇ ಇದೆ. ನಮನ್ನು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಗರಣ ಇದ್ದಿದ್ದರೆ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡುತ್ತಿದ್ದರೇ? ನಮ ರಾಜ್ಯ ಅಧ್ಯಕ್ಷರು ತನಿಖೆ ಮಾಡಿ ಎಂದು ಸವಾಲು ಹಾಕಿದ್ದಾರೆ ಎಂದು ಜೋಶಿ ಹೇಳಿದರು.

Leave a Reply

Your email address will not be published. Required fields are marked *