ಸೆ. 10ರೊಳಗೆ ವಾಹನಗಳಿಗೆ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ

ಬೆಂಗಳೂರು: ಮಹಿಳೆಯರು, ಮಕ್ಕಳ ಸುರಕ್ಷತೆಗಾಗಿ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್(VLT) ಡಿವೈಸ್ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳಲು ಸೆಪ್ಟಂಬರ್ 10 ಕೊನೆಯ ದಿನವಾಗಿದೆ.

ಸೆಪ್ಟೆಂಬರ್ 10ರೊಳಗೆ ಸಾರ್ವಜನಿಕ ಸೇವಾ ವಾಹನಗಳು ಪ್ಯಾನಿಕ್ ಬಟನ್ ವಿ.ಎಲ್.ಟಿ. ಅಳವಡಿಸಿಕೊಳ್ಳುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ಗಡುವು ನೀಡಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆ ಮತ್ತು ಮಾರ್ಗಸೂಚಿಗಳ ಪ್ರಕಾರ, ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಶಾಲಾ ವಾಹನ, ಖಾಸಗಿ ಸೇವಾ ವಾಹನ, ಮ್ಯಾಕ್ಸಿ ಕ್ಯಾಬ್, ಮೋಟರ್ ಕ್ಯಾಬ್, ಕಾಂಟ್ರಾಕ್ಟ್ ಕ್ಯಾರೇಜ್ ವಾಹನ, ರಾಷ್ಟ್ರೀಯ ಪರ್ಮಿಟ್ ಹೊಂದಿರುವ ಸರಕು ಸಾಗಣೆ ವಾಹನಗಳಿಗೆ ವಿ.ಎಲ್.ಟಿ. ಮತ್ತು ಪ್ಯಾನಿಕ್ ಬಟನ್ ಅಳವಡಿಸಬೇಕು.

ಇದರಿಂದ ವಾಹನ ಹಾದು ಹೋಗುವ ಮಾರ್ಗ ಪರಿಶೀಲಿಸಲು, ನಕ್ಷೆಯಲ್ಲಿ ವಾಹನದ ಸ್ಥಳ ಗುರುತಿಸಲು ನುಕೂಲವಾಗುತ್ತದೆ. ಅನಧಿಕೃತ ಮಾರ್ಗದಲ್ಲಿ ವಾಹನ ಚಲಿಸಿದರೂ ಪತ್ತೆ ಮಾಡಬಹುದಾಗಿದೆ. ಅಪಘಾತದ ಸ್ಥಳ ವೇಗದ ವಿವರವನ್ನು ಕೂಡ ಪತ್ತೆ ಮಾಡಬಹುದಾಗಿದೆ. ಸೇವಾ ವಾಹನಗಳಲ್ಲಿ ಮಹಿಳೆಯರು, ಮಕ್ಕಳು, ಇತರೆ ಪ್ರಯಾಣಿಕರಿಗೆ ತೊಂದರೆಯಾದಾಗ ಪ್ಯಾನಿಕ್ ಬಟನ್ ಒತ್ತಿದರೆ ಇಲಾಖೆಯ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆಯಾಗುತ್ತದೆ. ಇದರಿಂದ ತಕ್ಷಣ ಕ್ರಮ ಕೈಗೊಳ್ಳಲು ಸುಲಭವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿ.ಎಲ್.ಟಿ. ಮತ್ತು ಪ್ಯಾನಿಕ್ ಬಟನ್ ಗಳನ್ನು ಕಡ್ಡಾಯಗೊಳಿಸಲಾಗಿದ್ದು, ಸೆಪ್ಟಂಬರ್ 10 ರೊಳಗೆ ಅಳವಡಿಸಬೇಕು. ಇಲ್ಲದಿದ್ದಲ್ಲಿ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *