ದರ್ಶನ್ ತೂಗುದೀಪ್ ಅವರ ಆರೋಗ್ಯದಲ್ಲಿ ಏರುಪೇರಾಗಿ ತಲೆ ಸುತ್ತು ಬಂದ ಹಿನ್ನೆಲೆ ದಿಢೀರ್ ಪರಪ್ಪನ ಅಗ್ರಹಾರ ಜೈಲಲ್ಲಿ ನಟ ದರ್ಶನ್ ತೂಗುದೀಪ್ ಅವರು ಕೆಳಗೆ ಬಿದ್ದಿದ್ದಾರೆ. ಅಲ್ಲದೆ ಈ ವೇಳೆ ದರ್ಶನ್ ತೂಗುದೀಪ್ ಅವರಿಗೆ ಗಂಭೀರ ಗಾಯ ಕೂಡ ಆಗಿದೆ ಎಂಬ ಸುದ್ದಿ ಎಲ್ಲೆಲ್ಲೂ ಹಾರಿದಾಡ್ತಿದೆ.
ಈ ಸುದ್ದಿ ಕೇಳಿ ಸೋಷಿಯಲ್ ಮೀಡಿಯಾದಲ್ಲಿ ‘ಡಿ-ಬಾಸ್’ ಅಭಿಮಾನಿಗಳು ಸಿಕ್ಕಾಪಟ್ಟೆ ಗಾಬರಿ ಆಗಿದ್ದಾರೆ. ಹಾಗಾದರೆ ನಿಜವಾಗಿಯೂ ನಟ ದರ್ಶನ್ ಅವರಿಗೆ ಏನಾಯ್ತು?
ದರ್ಶನ್ ತೂಗುದೀಪ್ ಅನ್ನೋದೆ ಬ್ರಾಂಡ್, ಕಳೆದ 25 ವರ್ಷದಿಂದ ಈ ಬ್ರಾಂಡ್ ಮಿಂಚುತ್ತಿದೆ. ‘ಡಿ-ಬಾಸ್’ ಎಂಬ ಪದಕ್ಕೆ ಭಾರಿ ಗತ್ತು ಇದ್ದು, ಕೋಟ್ಯಂತರ ಅಭಿಮಾನಿಗಳ ಪ್ರೀತಿ ಕೂಡ ಇದೆ. ಹೀಗಾಗಿ ದರ್ಶನ್ ಅವರನ್ನ ಕಂಡರೆ ಕನ್ನಡ ನಾಡಲ್ಲಿ ಕೋಟಿ ಕೋಟಿ ಜನ ಪ್ರೀತಿ & ವಿಶ್ವಾಸ ತೋರಿಸುತ್ತಾರೆ. ಆದರೆ ಇಷ್ಟೆಲ್ಲಾ ಪ್ರೀತಿ & ಕಾಳಜಿ ನಡುವೆ ಕೂಡ ನಟ ದರ್ಶನ್ ಅವರಿಗೆ ಆಘಾತ ಎದುರಾಗಿದೆ. ಈಗಾಗಲೇ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆಯಲ್ಲಿ ಭಾಗಿ ಆಗಿರುವ ಆರೋಪದಲ್ಲಿ, ನಟ ದರ್ಶನ್ ತೂಗುದೀಪ್ ಅವರು ಪರಪ್ಪನ ಅಗ್ರಹಾರದಲ್ಲಿ ಪರದಾಡುತ್ತಿದ್ದಾರೆ. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಅವರಿಗೆ ಜೈಲಿನಲ್ಲಿ ಇದೀಗ ತೀವ್ರ ಅನಾರೋಗ್ಯ ಎದುರಾಗಿ, ತಲೆ ಸುತ್ತು ಬಂದು ಬಿದ್ದಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹೊರಬಿದ್ದಿದೆ.
ನಟ ದರ್ಶನ್ ಅವರ ಅಭಿಮಾನಿಗಳಿಗೆ ಆಘಾತ!
ಹೌದು ದರ್ಶನ್ ತೂಗುದೀಪ್ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿಗು ಸೇರಿರುವುದು ಗೊತ್ತಿರುವ ಸುದ್ದಿ ಈ ಸಮಯದಲ್ಲಿ ದರ್ಶನ್ ತೂಗುದೀಪ್ರ ಬೆನ್ನಿಗೆ ನಿಂತು ಜೈಲಿಂದ ದರ್ಶನ್ ತೂಗುದೀಪ್ ಅವರನ್ನು ರಿಲೀಸ್ ಮಾಡಿಸಿಕೊಂಡು ಬರಲು, ಕೋಟಿ ಕೋಟಿ ಅಭಿಮಾನಿ ಬಳಗ ಹೋರಾಟ ನಡೆಸುತ್ತಿದೆ. ಆದರೆ ಇಂತಹ ಸಮಯದಲ್ಲೇ ನಟ ದರ್ಶನ್ ತೂಗುದೀಪ್ ಅವರಿಗೆ ಅನಾರೋಗ್ಯ ಎದುರಾಗಿದ್ದು ದಿಢೀರ್ ತಲೆ ಸುತ್ತು ಬಂದು ಬಿದ್ದಿದ್ದಾರೆಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆ ತಕ್ಷಣ ಸಂಚಲನ ಸೃಷ್ಟಿ ಆಗಿದೆ. ಹಾಗಾದರೆ ಈ ಸುದ್ದಿ ನಿಜವಾ? ಜೈಲಿನ ಮೂಲಗಳು ಹೇಳುವ ಸತ್ಯ ಏನು? ಮುಂದೆ ಓದಿ.
ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದಾರಾ?
ಕನ್ನಡ ಸಿನಿಮಾ ರಂಗದಲ್ಲಿ ದರ್ಶನ್ ತೂಗುದೀಪ್ ಅವರಿಗೆ ಇರುವಷ್ಟು ಅಭಿಮಾನಿಗಳು ಹಿಂದೆ ಯಾವುದೇ ನಟನಿಗೂ ಇರಲಿಲ್ಲ, ಮುಂದೆ ಯಾವುದೇ ನಟನಿಗೂ ಸಿಗುವುದಿಲ್ಲ ಅಂತಿದ್ದಾರೆ ಡಿ-ಬಾಸ್ ದರ್ಶನ್ ಅವರ ಫ್ಯಾನ್ಸ್. ಹೀಗಿದ್ದಾಗಲೇ ನಟ ದರ್ಶನ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರು ಜೈಲಿನ ಆಸ್ಪತ್ರೆಗೆ ಸೇರಿದ್ದಾರೆ. ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದಾರೆ ಎಂಬ ಸುದ್ದಿ ಇದೀಗ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಮತ್ತೊಂದು ಕಡೆ ಜೈಲಿನ ಮೂಲಗಳು ಇದು ಸುಳ್ಳು ಸುದ್ದಿ ಅಂತಿವೆ.
ಈ ಬಗ್ಗೆ ಜೈಲಿನ ಮೂಲಗಳು ಹೇಳುತ್ತಿರುವ ಸತ್ಯ ಏನೆಂದರೆ, ದರ್ಶನ್ ಅವರಿಗೆ ಏನೂ ಆಗಿಲ್ಲ. ಅವರು ಆರೋಗ್ಯವಾಗಿ ಇದ್ದಾರೆ ಹೀಗಾಗಿ ಈ ಸುದ್ದಿ ಸುಳ್ಳಾಗಿದ್ದು ಅಭಿಮಾನಿಗಳು ಸುಳ್ಳು ಸುದ್ದಿ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ನಟ ದರ್ಶನ್ ತೂಗುದೀಪ್ರ ಆರೋಗ್ಯಕ್ಕೆ ಏನೂ ಆಗಿಲ್ಲ ಅಂತಿದ್ದಾರೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯಾಗಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.