ಬೆಂಗಳೂರು: ನಟ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಜೈಲಿನಲ್ಲಿದ್ದಾರೆ. ಇದೇ ವೇಳೆ ಸುಮಾರು 20 ವರ್ಷದ ಹಿಂದೆ ಬಿಡುಗಡೆ ಆದ ಸಿನಿಮಾವನ್ನು ಮರು ಬಿಡುಗಡೆ ಆಗಲಿದೆ. ಸದ್ಯ ಇದು ಡಿ.ಬಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿಯಾಗಿದ್ದು, ಸಿನಿಮಾ ಸ್ವಾಗತಕ್ಕಾಗಿ ಭರ್ಜರಿ ಸಿದ್ದತೆ ಆರಂಭಿಸಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗಲೇ ಅಭಿಮಾನಿಗಳು ನಮ್ಮ ಡಿ.ಬಾಸ್ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಅವರೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ. ಅದೇ ರೀತಿ ‘ಕ್ರಾಂತಿ’ ಬಿಡುಗಡೆ ವೇಳೆ ಇಡಿ ಸಿನಿಮಾವನ್ನು ಅಭಿಮಾನಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋಷನ್ ಮಾಡಿದ್ದರು.
ಇದೀಗ ಅಂತದ್ದೇ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ಈ ಕುರಿತು ‘ಡಿ ಕಂಪನಿ ಫ್ಯಾನ್ ಅಸೋಸಿಯೇಷನ್ ಆರ್ ಅಫಿಸಿಯಲ್’ ಫೇಸ್ ಬುಕ್ ಪೇಜಿನಲ್ಲಿ ಸಿನಿಮಾ ರಿರಿಲೀಸ್ ಬಗ್ಗೆ ಪೋಸ್ಟರ್ ಹಂಚಿಕೊಳ್ಳಲಾಗಿದೆ.
ಈ ಪೇಜಿನಲ್ಲಿ ದರ್ಶನ್ರ ‘ಕರಿಯಾ’ ಸಿನಿಮಾದ ರಿರಿಲೀಸ್ ದಿನಾಂಕ ಮತ್ತು ಪೋಸ್ಟರ್ ಹಂಚಿಕೊಳ್ಳಲಾಗಿದೆ. ಜೊತೆಗೆ ”ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 700ಕ್ಕು ಹೆಚ್ಚು ದಿನಗಳು ಪ್ರದರ್ಶನ ಕಂಡ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೆಗಾ ಬ್ಲಾಕ್ಬಸ್ಟರ್ “ಕರಿಯ” ಸಿನಿಮಾ ಇದೇ ಆಗಸ್ಟ್ 30ರಂದು ರಾಜ್ಯದಾದ್ಯಂತ ಮರುಬಿಡುಗಡೆಯಾಗುತ್ತಿದೆ” ಎಂದು ಬರೆದುಕೊಳ್ಳಲಾಗಿದೆ.