ಮುಡಾ ಹಗರಣ : ಪರ ಅಥವಾ ವಿರೋಧ ಆದೇಶ ಬಂದರೆ ಸಿದ್ದರಾಮಯ್ಯ ಮುಂದಿನ ಆಯ್ಕೆಗಳೇನು?

ತುಮಕೂರು : ಡಿ.2ಕ್ಕೆ ಕಲ್ಪತರು ನಾಡಿಗೆ ಸಿಎಂ ಭೇಟಿ

ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿರುವ ವಿಚಾರವೀಗ ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಇಂದು ವಿಚಾರಣೆ ನಡೆಯಲಿದ್ದು, ಸಿದ್ದರಾಮಯ್ಯ ಪರ ಅಥವಾ ವಿರೋಧ ಆದೇಶ ಪ್ರಕಟವಾದರೆ ಅವರ ಮುಂದಿರುವ ಆಯ್ಕೆಗಳೇನು ಎಂಬ ವಿವರ ಇಲ್ಲಿದೆ.

ಒಂದುವೇಳೆ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಅರ್ಜಿಯನ್ನು ಮನ್ನಿಸಿದರೆ ಅವರಿಗೆ ಅದು ಅತೀ ದೊಡ್ಡ ಜಯವಾಗಲಿದೆ. ಆದರೆ, ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಎತ್ತಿ ಹಿಡಿದರೆ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಲಿದೆ.

ಸಿದ್ದರಾಮಯ್ಯ ಪರ ಆದೇಶ ಬಂದರೆ ಮುಂದೇನು?
• ಬೀಸುವ ದೊಣ್ಣೆಯಿಂದ ಸಿಎಂ ಸಿದ್ದರಾಮಯ್ಯ ಪಾರಾಗಬಹುದು.
• ಪ್ರಾಸಿಕ್ಯೂಷನ್ನಿಂದ ಕುಗ್ಗಿದ್ದ ಸಿದ್ದರಾಮಯ್ಯಗೆ ಆನೆ ಬಲ ಬಂದಂತಾಗಬಹುದು.
• ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲರಿಗೆ ಹಿನ್ನಡೆಯಾಗಬಹುದು.
• ಕುಗ್ಗಿ ಹೋಗಿದ್ದ ಕಾಂಗ್ರೆಸ್ ಸರ್ಕಾರಕ್ಕೂ ನೈತಿಕ ಶಕ್ತಿ ಬರಲಿದೆ.
• ಸಚಿವರು, ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲೂ ಆತ್ಮವಿಶ್ವಾಸ ಹೆಚ್ಚಲಿದೆ.
• ರಾಜಕೀಯವಾಗಿ ಸಿಎಂ ಸಿದ್ದರಾಮಯ್ಯ ಮತ್ತಷ್ಟು ಬಲಿಷ್ಠ ಆಗಬಹುದು.
• ಸಿಎಂ ಹಾಗೂ ಸರ್ಕಾರದ ವಿರುದ್ದ ಹೋರಾಟ ನಡೆಸುತ್ತಿದ್ದ ಬಿಜೆಪಿಗೆ ತಿರುಗೇಟು ನೀಡಲು ಅವಕಾಶ ದೊರೆಯಲಿದೆ.
• ಇಡೀ ದೇಶಕ್ಕೆ ಬಿಜೆಪಿ ವಿರುದ್ದ ಕಾಂಗ್ರೆಸ್ ಸಂದೇಶ ಹೊರಡಿಸಿದಂತಾಗುತ್ತದೆ.

ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದರೆ?
• ರಾಜ್ಯಪಾಲರ ನಿರ್ಧಾರದ ಪರ ಆದೇಶದ ಬಂದರೆ ತನಿಖೆಗೆ ಆದೇಶ ದೊರೆಯಲಿದೆ.
• ತನಿಖೆಗೆ ಆದೇಶ ನೀಡಿದರೆ ತಕ್ಷಣವೇ ಸಿಎಂ ವಿರುದ್ದ ಎಫ್ಐಆರ್ ಸಾಧ್ಯತೆ ಇದೆ.
• ರಾಜ್ಯಪಾಲರ ಪರ ಆದೇಶ ಹೊರಬಿದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ ಇದೆ.
• ರಾಜೀನಾಮೆ ಕೊಡದೇ ಮತ್ತೆ ಕಾನೂನು ಹೋರಾಟ ಮುಂದುವರಿಸುವ ಆಯ್ಕೆಯೂ ಅವರ ಮುಂದಿದೆ.
• ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದು.
• ರಾಜ್ಯಪಾಲರ ವಿರುದ್ಧ ಮತ್ತೆ ಕಾನೂನು ಜೊತೆ ರಾಜಕೀಯ ಸಮರ ಏರ್ಪಡಬಹುದು.
• ಪಕ್ಷದ ವತಿಯಿಂದ ರಾಜ್ಯಾದ್ಯಂತ ಮತ್ತೊಂದು ಸುತ್ತಿನ ಹೋರಾಟಕ್ಕೆ ಕರೆ ನೀಡಬಹುದು.
• ಕಾಂಗ್ರೆಸ್ ಈ ವಿಷಯವನ್ನು ರಾಷ್ಟ್ರ ಮಟ್ಟದಲ್ಲಿ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಹೋರಾಟ ಮಾಡಬಹುದು.

Leave a Reply

Your email address will not be published. Required fields are marked *