ಸಂಸದೀಯ ಸಮಿತಿ ಸಭೆಯಲ್ಲಿ ಜಾತಿ ಗಣತಿಗೆ ಹೆಚ್ಚಿದ ಒತ್ತಡ

ಸಂಸದೀಯ ಸಮಿತಿ ಸಭೆಯಲ್ಲಿ ಜಾತಿ ಗಣತಿಗೆ ಹೆಚ್ಚಿದ ಒತ್ತಡ..

ಬಿಜೆಪಿ ಸಂಸದ ಗಣೇಶ್ ಸಿಂಗ್

ನವದೆಹಲಿ: ರಾಷ್ಟ್ರೀಯ ಜಾತಿ ಗಣತಿಗೆ ಬೇಡಿಕೆ ಹೆಚ್ಚುತ್ತಿದ್ದು, ಎನ್ಡಿಎ ಸರಕಾರದ ಪ್ರಮುಖ ಮಿತ್ರಪಕ್ಷವಾದ ಜೆಡಿಯು ಇದೀಗ ವಿರೋಧ ಪಕ್ಷಗಳ ಇಂಡಿಯಾ ಬ್ಲಾಕ್ ಒಕ್ಕೂಟವನ್ನು ನ್ನು ಬೆಂಬಲಿಸುತ್ತಿದೆ.

ಮೋದಿ ಸರ್ಕಾರದ ಅತಿ ದೊಡ್ಡ ಮಿತ್ರ ಪಕ್ಷವಾಗಿರುವ ಜೆಡಿಯು ಸಂಸತ್ತಿನ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯಲ್ಲಿ ಜಾತಿ ಗಣತಿಯನ್ನು ಚರ್ಚೆಗೆ ವಿಷಯವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.

ನಿನ್ನೆ ದೆಹಲಿಯಲ್ಲಿ ಬಿಜೆಪಿ ಸಂಸದ ಗಣೇಶ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಮೊದಲ ಸಭೆಯಲ್ಲಿ ಡಿಎಂಕೆ ಸದಸ್ಯ ಟಿಆರ್ ಬಾಲು ಈ ವಿಷಯವನ್ನು ಪ್ರಸ್ತಾಪಿಸಿದರು.

ಸಮಿತಿಯು ಜಾತಿ ಗಣತಿಯನ್ನು ಚರ್ಚೆಗೆ ಮೊದಲ ವಿಷಯವಾಗಿ ಪಟ್ಟಿ ಮಾಡಬೇಕೆಂದು ಕಾಂಗ್ರೆಸ್ ಸದಸ್ಯ ಮಾಣಿಕಂ ಟ್ಯಾಗೋರ್ ಬೇಡಿಕೆ ಮುಂದಿಟ್ಟರು. ಅವರನ್ನು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಬೆಂಬಲಿಸಿದರು, ಜಾತಿ ಸಮೀಕ್ಷೆಯನ್ನು ನಡೆಸುವ ಕುರಿತು ಸಮಿತಿಯು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಬೇಕೆಂದು ಒತ್ತಾಯಿಸಿದರು.

ಗುತ್ತಿಗೆ ಮತ್ತು ತಾತ್ಕಾಲಿಕ ಆಧಾರದ ಮೇಲೆ ಮಾಡಲಾದ ನೇಮಕಾತಿಗಳು ಮತ್ತು ತಾತ್ಕಾಲಿಕ ನೇಮಕಾತಿಗಳನ್ನು ಸಹ ಮೀಸಲಾತಿ ಒಳಗೊಂಡಿರಬೇಕು ಎಂದು ಬಿಜೆಪಿ ಸದಸ್ಯರೊಬ್ಬರು ಹೇಳಿದರು.

ಪ್ರತಿಪಕ್ಷಗಳ ಜೊತೆಗೆ ಜೆಡಿಯು ಸಂಸದ ಗಿರಿಧಾರಿ ಯಾದವ್ ಜಾತಿ ಗಣತಿ ವಿಷಯವನ್ನು ಸಮಿತಿಯ ಚರ್ಚೆಗೆ ಪಟ್ಟಿ ಮಾಡಬೇಕೆಂದು ಒತ್ತಾಯಿಸಿದರು. ಮೋದಿ 3.0 ಸರ್ಕಾರಕ್ಕೆ ಸೇರಿದ ನಂತರ ಜೆಡಿಯು ಜಾತಿ ಗಣತಿಗೆ ಬಲವಾದ ಬೇಡಿಕೆ ಮಾಡಿಲ್ಲವಾದ್ದರಿಂದ ನಿನ್ನೆಯ ಸಭೆಯಲ್ಲಿ ಚರ್ಚೆಗೆ ಬಂದ ವಿಷಯಗಳು ಮಹತ್ವವನ್ನು ಪಡೆದುಕೊಳ್ಳುತ್ತದೆ. ಜೆಡಿಯು ನಾಯಕ ಕೆಸಿ ತ್ಯಾಗಿ, ಈ ಹಿಂದೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ರಾಷ್ಟ್ರವ್ಯಾಪಿ ಜಾತಿ ಗಣತಿ ಬೇಡಿಕೆಗೆ ಪಕ್ಷ ಬದ್ಧವಾಗಿದ್ದರೂ, ಈ ವಿಷಯದಲ್ಲಿ ಸರ್ಕಾರದೊಂದಿಗೆ ಸಂಘರ್ಷಕ್ಕೆ ಮುಂದಾಗುವುದಿಲ್ಲ ಎಂದು ಹೇಳಿತ್ತು.

ಈ ಹಿಂದೆ ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸುವಂತೆ ಜೆಡಿಯು ಧ್ವನಿ ಎತ್ತಿತ್ತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಾತಿ ಆಧಾರಿತ ಸಮೀಕ್ಷೆಗೆ ಆದೇಶಿಸಿದರು, ಬಿಹಾರ ರಾಜ್ಯದ ಜಾತಿಗಣತಿಯನ್ನು ಕಳೆದ ವರ್ಷ ಸಾರ್ವಜನಿಕಗೊಳಿಸಲಾಯಿತು. ಇತರೆ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳು ಬಿಹಾರದ ಜನಸಂಖ್ಯೆಯ ಶೇ.63 ರಷ್ಟಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿತು.

ದೇಶದಲ್ಲಿ ಜನಗಣತಿಯನ್ನು 2021 ರಿಂದ ಅನಿರ್ದಿಷ್ಟವಾಗಿ ಮುಂದೂಡಲಾಗಿದೆ, ಸರ್ಕಾರವು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಕಾರಣವೆಂದು ಉಲ್ಲೇಖಿಸಿದೆ. ಪ್ರತಿಪಕ್ಷಗಳು ಮತ್ತು ಅದರ ಮಿತ್ರಪಕ್ಷಗಳ ಒತ್ತಡವನ್ನು ಎದುರಿಸುತ್ತಿರುವ ಮೋದಿ ಸರ್ಕಾರವು ಜನಗಣತಿಯೊಂದಿಗೆ ಜಾತಿ ಗಣತಿಯನ್ನು ಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸುವಂತೆ ಜೆಡಿಯು ಧ್ವನಿ ಎತ್ತಿತ್ತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಾತಿ ಆಧಾರಿತ ಸಮೀಕ್ಷೆಗೆ ಆದೇಶ ನೀಡಿದ್ದರು.

Leave a Reply

Your email address will not be published. Required fields are marked *