- ಮಂಜುನಾಥ್ ಎಚ್ ಆರ್, ಹಿಂಡಿಸಿಗೆರೆ
ಕೆ.ಎಸ್ ಈಶ್ವರಪ್ಪ ಬಿಜೆಪಿ ಪಕ್ಷದ ಕಟ್ಟಾಳು, ಪ್ರಕರ ಹಿಂದುತ್ವವಾದಿ. ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಕಾಲಮಾನದಲ್ಲಿ ಆರ್‌ಎಸ್‌ಎಸ್ ಹಿನ್ನಲೆಯಿಂದ ಬಂದು ಬಿಜೆಪಿ ಪಕ್ಷವನ್ನೇ ನಂಬಿಕೊAಡು ರಾಜಕೀಯ ಮಾಡಿದ ವ್ಯಕ್ತಿ. ಹಾಗೆಂದ ಮಾತ್ರಕ್ಕೆ ಅಧಿಕಾರದಿಂದ ದೂರ ಉಳಿದವರಲ್ಲ.
ಅಧಿಕಾರಕ್ಕೆ ಅಂಟಿಕೊAಡು ಕುಳಿತವರು ಕೂಡ ಅಲ್ಲ. ಪಕ್ಷದ ಹೈಕಮಾಂಡ್‌ಗೆ ನಿಷ್ಠೆಯಾಗಿ ಕೆಲಸ ಮಾಡಿಕೊಂಡು ಬಂದ ಬಿಜೆಪಿ ನಾಯಕ. ಬಿಜೆಪಿ ಎಂದರೆ ಈಶ್ವರಪ್ಪ, ಈಶ್ವರಪ್ಪ ಎಂದರೆ ಬಿಜೆಪಿ ಎನ್ನುವಷ್ಟರ ಮಟ್ಟಿಗೆ ಬೆಸೆದುಕೊಂಡಿದ್ದ ಈಶ್ವರಪ್ಪನವರಿಗೆ ಇತ್ತೀಚಿನ ಬೆಳವಣಿಗೆ ತೀರ ನಿರಾಸೆಯನ್ನು ಉಂಟು ಮಾಡಿದೆ. ಬಿಜೆಪಿ ಪಕ್ಷಕ್ಕೆ ಈಶ್ವರಪ್ಪನವರ ಅವಶ್ಯಕತೆ ಇಲ್ಲವೇನೋ ಎನ್ನುವಂತೆ ಮಾಡಿದೆ.
ಹೌದು,,, ನಾವೇನೋ ಈಶ್ವರಪ್ಪನವರ ರಾಜಕೀಯದ ಆರಂಭದ ದಿನಗಳಿಗೆ ಹೋಗುವ ಅವಶ್ಯಕತೆ ಏನೂ ಇಲ್ಲ. ಇತ್ತೀಚೆಗೆ ಅಂದರೆ ಕೇವಲ ಲೋಕಸಭೆ ಚುನಾವಣೆಯ ಹೊಸ್ತಿಲಿಗೆ ಹೋದರೆ ಸಾಕು ಕೆ ಎಸ್ ಈಶ್ವರಪ್ಪನವರ ರಾಜಕೀಯ ಭವಿಷ್ಯ ಕಣ್ಣ ಮುಂದೆ ಬಾರದೆ ಇರುವುದಿಲ್ಲ. ಈಶ್ವರಪ್ಪನವರು ಮಾಡಿರುವ ತಪ್ಪಾದರೂ ಏನು ಎಂಬ ಪ್ರಶ್ನೆ ನಿಜಕ್ಕೂ ಕೂಡ ಬಿಜೆಪಿ ಹೈಕಮಾಂಡ್ ಅವಲೋಕನ ಮಾಡಿಕೊಳ್ಳಬೇಕಾಗುತ್ತದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕಾಂತೇಶ್‌ಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದರು. ಆದರೆ ಹಾಲಿ ಶಾಸಕರು ಮಾಜಿ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದ್ದು ಪಕ್ಷದ ಹೈಕಮಾಂಡ್. ಅಲ್ಲಿ ಈಶ್ವರಪ್ಪನವರ ಪುತ್ರ ಗೆಲ್ಲುತ್ತಾರೋ ಇಲ್ಲವೋ ಎಂಬ ಅನುಮಾನ ಪಕ್ಷದ ಹೈಕಮಾಂಡ್‌ಗಿತ್ತು. ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಾಗಿತ್ತು. ರಿಸ್ಕ್ ತೆಗೆದುಕೊಳ್ಳುವುದಕ್ಕೆ ಬಿಜೆಪಿ ಹೈಕಮಾಂಡ್ ತಯಾರಿರಲಿಲ್ಲ.
ಆದರೆ ಮತ್ತೊಂದು ಆಯಾಮದಲ್ಲಿ ಗಮನಿಸುವುದಾದರೆ ಬಿಎಸ್ ಯಡಿಯೂರಪ್ಪನವರಂತೆ ಕೆ ಎಸ್ ಈಶ್ವರಪ್ಪನವರು ಕೂಡ ಬಿಜೆಪಿಯಲ್ಲಿ ಪ್ರಭಾವಿ ನಾಯಕ. ಈಗಾಗಲೇ ಬಿಎಸ್ ಯಡಿಯೂರಪ್ಪ ತೆರೆಮರೆಗೆ ಸರಿಯುತ್ತಿದ್ದಾರೆ ಇಂತಹ ಹೊತ್ತಿನಲ್ಲಿ ಅವರ ಪುತ್ರ ಬಿ ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರಿಗೂ ಕೂಡ ಸಾಕಷ್ಟು ವಿರೋಧಗಳು ಎದುರಾಗುತ್ತಿವೆ.
ಇದು ಮಾತ್ರವಲ್ಲದೆ ಕುಟುಂಬ ರಾಜಕಾರಣಕ್ಕೆ ಬಿಜೆಪಿಯಲ್ಲಿ ನೆಲೆ ಇಲ್ಲ ಆದರೆ ಯಡಿಯೂರಪ್ಪ ನಂತರ ಬಿ ವೈ ವಿಜಯೇಂದ್ರ ಅವರ ಸಹೋದರ ಬಿ ವೈ ರಾಘವೇಂದ್ರ ಕೂಡ ಸಕ್ರಿಯರಾಗಿದ್ದಾರೆ. ಇವರು ಮಾತ್ರ ರಾಜಕೀಯದಲ್ಲಿ ಬೆಳೆಯಬೇಕು ಕೆಎಸ್ ಈಶ್ವರಪ್ಪನವರ ಪುತ್ರ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಬಾರದೆ. ಇದನ್ನು ಅವರೇ ತಡೆಯುತ್ತಿದ್ದಾರೆ ಎಂಬ ಆರೋಪ ಕೆ ಎಸ್ ಈಶ್ವರಪ್ಪನವರದ್ದು.
ಟಿಕೆಟ್ ಘೋಷಣೆ ಆಗುವವರೆಗೂ ಸೈಲೆಂಟಾಗಿದ್ದ ಕೆ ಎಸ್ ಈಶ್ವರಪ್ಪ ತಮ್ಮ ಮಗನಿಗೆ ಟಿಕೆಟ್ ಮಿಸ್ ಆಗಿದ್ದೇ ತಡ ಫುಲ್ ರೆಬಲ್ ಆಗಿ ಬಿಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ರಾಘವೇಂದ್ರ ವಿರುದ್ಧವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ನಿರೀಕ್ಷಿತ ಮಟ್ಟದಲ್ಲಿ ಮತಗಳನ್ನು ಪಡೆಯಲು ಸಾಧ್ಯವಾಗದೆ ಸೋಲನ್ನು ಕಂಡರು.
ಒಂದು ಕ್ಷಣ ಕೆ ಎಸ್ ಈಶ್ವರಪ್ಪನವರಿಗೆ ಇದು ಅಗತ್ಯ ಇತ್ತೇ..? ಎಂದು ಅವರ ಬೆಂಬಲಿಗರು ಸೇರಿದಂತೆ ಸಾಕಷ್ಟು ಜನ ರಾಜಕೀಯ ತಜ್ಞರು ಕೂಡ ಮಾತನಾಡಿಕೊಂಡಿದ್ದು ಉಂಟು. ಯಾಕಂದ್ರೆ ಕೆ ಎಸ್ ಈಶ್ವರಪ್ಪ ೩೦ರ ನಾಯಕನಲ್ಲ ೭೦ರ ನಾಯಕ. ಇಂತಹ ವಯಸ್ಸಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ತಮ್ಮ ಶಕ್ತಿಪ್ರದರ್ಶನ ಮಾಡುವ ಅಗತ್ಯ ಇತ್ತಾ..? ಟಿಕೆಟ್ ಸಿಗಲಿಲ್ಲ ಎಂದು ಸಿ ಟಿ ರವಿ ಕೂಡ ರೆಬೆಲ್ ಆಗಿದ್ದರು ನಂತರ ಸೈಲೆಂಟ್ ಆದರು.
ಇದೀಗ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಅದೇ ರೀತಿ ಕೆಎಸ್ ಈಶ್ವರಪ್ಪ ಕೂಡ ಸೈಲೆಂಟಾಗಿ ಇದ್ದಿದ್ದರೆ ಅವರನ್ನು ಕೂಡ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡುತ್ತಿದ್ದರೇನೋ..? ಇಲ್ಲ ಆ ಒಂದು ಭಾಗ್ಯ ಅವರ ಪುತ್ರನಿಗೂ ಕೂಡ ಲಭಿಸುತ್ತಿತ್ತೇನೋ ಗೊತ್ತಿಲ್ಲ. ಆದರೆ ಕೆ ಎಸ್ ಈಶ್ವರಪ್ಪ ತೆಗೆದುಕೊಂಡ ಆ ಒಂದು ನಿರ್ಧಾರ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಪಕ್ಷದ ಹೈಕಮಾಂಡ್ ನಾಯಕರ ಕಣ್ಣನ್ನು ಕೆಂಪಾಗಿಸಿತ್ತು.
ಲೋಕಸಭೆ ಚುನಾವಣೆಯಲ್ಲಿ ಬಿವೈ ರಾಘವೇಂದ್ರ ಭರ್ಜರಿ ಜಯಭೇರಿ ಬಾರಿಸಿದ್ದರು. ಇದಾದ ನಂತರ ಕೆ ಎಸ್ ಈಶ್ವರಪ್ಪನವರ ರಾಜಕೀಯ ಭವಿಷ್ಯ ಮುಗಿದೆ ಹೋಯಿತು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಇದಾದ ನಂತರ ಮುನ್ನಲೆಗೆ ಕೂಡ ಬಂದಿರಲಿಲ್ಲ ಕೆ ಎಸ್ ಈಶ್ವರಪ್ಪ. ಇದೀಗ ಅವರ ಮಾತುಗಳು ಮೊದಲನೇಷ್ಟೆ ಕೂಡ ಕಠೋರವಾಗಿವೆ. ಯಾಕಂದ್ರೆ ಬಿಜೆಪಿಯಲ್ಲಿ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪವನ್ನು ಮಾಡಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿದ್ದರು.
ಇದರಿಂದ ಎಲ್ಲೋ ಒಂದು ಕಡೆ ಬಿ ಎಸ್ ಯಡಿಯೂರಪ್ಪ ಪಡೆಗೆ ಹೊಡೆತ ಬೀಳುವ ಸಾಧ್ಯತೆ ಕೂಡ ಸಾಕಷ್ಟಿತ್ತು. ಅಮಿತ್ ಶಾ ಮೂಲಕ ರಾಯಣ್ಣ ಬ್ರಿಗೇಡ್ ನಿಲ್ಲಿಸುವಂತೆ ಕೂಡ ಸೂಚನೆ ಕೊಟ್ಟಿದ್ದರು. ಅಷ್ಟಕ್ಕೆ ಸೈಲೆಂಟ್ ಆಗಿದ್ದರು ಕೆ ಎಸ್ ಈಶ್ವರಪ್ಪ. ಇಂಧನ ಸಚಿವರಾಗಿದ್ದಾಗ ರಾಜೀನಾಮೆ ಕೊಟ್ಟು ರಾಜ್ಯಾಧ್ಯಕ್ಷನಾಗು ಅಂತ ಹೇಳಿದ್ದರು. ಇಂಧನ ಖಾತೆಯ ಸಚಿವ ಸ್ಥಾನ ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಆದರೂ ಕೂಡ ಅವರಿಗೆ ಸಲ್ಲಬೇಕಾದಂತಹ ನ್ಯಾಯ ಸಲ್ಲಲೇ ಇಲ್ಲ.
ವಿಧಾನಸಭೆ ಚುನಾವಣೆಯಲ್ಲಿ, ಲೋಕಸಭೆ ಚುನಾವಣೆಯಲ್ಲಿ ನನಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಲೇ ಬಂದಿದ್ದರು ಕೆ ಎಸ್ ಈಶ್ವರಪ್ಪ. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಎಲ್ಲಿಯವರೆಗೆ ಇರಬೇಕು..? ಎಂದು ಬಿಎಸ್ ಯಡಿಯೂರಪ್ಪ ಮತ್ತು ಬಿ ವೈ ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದರು. ಅದು ಈಗಲೂ ಕೂಡ ಮುಂದುವರೆಯುತ್ತಲೇ ಇದೆ.
ಈಗ ಮತ್ತೆ ಆರ್‌ಎಸ್‌ಎಸ್ ಮೂಲಕ ಬಿಜೆಪಿ ಸೇರುವ ವಿಚಾರ ಮುನ್ನಲೆಗೆ ಬರುತ್ತಿರುವ ವೇಳೆಯಲ್ಲಿ ಖಡಕ್ಕಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ ಕೆಎಸ್ ಈಶ್ವರಪ್ಪ. ಆರ್‌ಎಸ್‌ಎಸ್ ಮೂಲಕ ಮತ್ತೆ ಬಿಜೆಪಿ ಸೇರುವ ಅವಶ್ಯಕತೆ ನನಗಿಲ್ಲ. ನಾನು ಆರ್‌ಎಸ್‌ಎಸ್ ನವನೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಖಡಕ್ಕಾಗಿ ಹೇಳಿದ್ದಾರೆ. ಹಿಂದುಳಿದ ವರ್ಗದ ಪ್ರಭಾವಿ ನಾಯಕನನ್ನ ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನ ಬಿಜೆಪಿ ನಾಯಕರು ಮಾಡುತ್ತಿದ್ದಾರೆ.
ಅತ್ತ ಕೆ ಎಸ್ ಈಶ್ವರಪ್ಪ ಬಿಜೆಪಿ ಸೇರುವ ಇಂಗಿತ ಬಂದ ಪರೋಕ್ಷವಾಗಿ ಕೂಡ ವ್ಯಕ್ತಪಡಿಸುತ್ತಿದ್ದಾರೆ. ಆರ್‌ಎಸ್‌ಎಸ್ ಮೂಲವಾಗಿ ಬಂದಿರುವ ಕೆ ಎಸ್ ಈಶ್ವರಪ್ಪ ಜೆಡಿಎಸ್ ಪಕ್ಷಕ್ಕಾಗಲಿ, ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡುವಂತಹ ಯಾವುದೇ ಲಕ್ಷಣ ಇಲ್ಲ ಯಾವುದೇ ಪಕ್ಷವನ್ನು ಸೇರದೆ ಸೈಲೆಂಟಾಗಿ ಉಳಿಯಬಹುದು, ಇಲ್ಲವೇ ಬಿಜೆಪಿಗೆ ಮತ್ತೆ ಮರಳಬಹುದು. ತಮ್ಮ ರಾಜಕೀಯ ಭವಿಷ್ಯವಲ್ಲದಿದ್ದರೂ ಮಗನ ರಾಜಕೀಯ ಭವಿಷ್ಯಕ್ಕಾದರೂ ಕೂಡ ಬಿಜೆಪಿ ಸೇರುವ ಅಗತ್ಯ ಈಶ್ವರಪ್ಪನವರಿಗೆ ಇದೆ. ಇದರ ಬಗ್ಗೆ ಅವರು ತೆಗೆದುಕೊಳ್ಳುವಂತಹ ನಿರ್ಧಾರ ಎಷ್ಟರ ಮಟ್ಟಿಗೆ ಇರುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ.