ಚಾಕೋಲೆಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರು ಕೂಡ ಇಷ್ಟ ಪಟ್ಟು ತಿನ್ನುತ್ತಾರೆ. ಈ ಚಾಕೊಲೇಟ್ನ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಪ್ರತಿ ವರ್ಷ ಸೆಪ್ಟೆಂಬರ್ 13 ರಂದು ಅಂತರರಾಷ್ಟ್ರೀಯ ಚಾಕೊಲೇಟ್ ದಿನ ವನ್ನು ಆಚರಿಸಲಾಗುತ್ತದೆ.
ಅಂತರರಾಷ್ಟ್ರೀಯ ಚಾಕೊಲೇಟ್ ದಿನ ಮತ್ತು ವಿಶ್ವ ಚಾಕೊಲೇಟ್ ದಿನವು ಚಾಕೊಲೇಟ್‌ಗಾಗಿ ಜಾಗತಿಕ ಪ್ರೀತಿಯನ್ನು ಆಚರಿಸುವ ಎರಡು ಸಂತೋಷಕರ ಸಂದರ್ಭಗಳಾಗಿವೆ, ಆದರೆ ಅವು ವಿಭಿನ್ನ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ ಮತ್ತು ವಿಭಿನ್ನ ಮೂಲಗಳನ್ನು ಹೊಂದಿವೆ. ಅಂತರರಾಷ್ಟ್ರೀಯ ಚಾಕೊಲೇಟ್ ದಿನವನ್ನು ವಾರ್ಷಿಕವಾಗಿ ಸೆಪ್ಟೆಂಬರ್ 13 ರಂದು ಆಚರಿಸಲಾಗುತ್ತದೆ ಆದರೆ ವಿಶ್ವ ಚಾಕೊಲೇಟ್ ದಿನವನ್ನು ಜುಲೈ 7 ರಂದು ಆಚರಿಸಲಾಗುತ್ತದೆ.
ಅಂತರರಾಷ್ಟ್ರೀಯ ಚಾಕೊಲೇಟ್ ದಿನವು ವಿಶೇಷವಾಗಿದೆ ಏಕೆಂದರೆ ಇದು ಪ್ರಸಿದ್ದ ಅಮೇರಿಕನ್ ಉದ್ಯಮಿ ಹಾಗೂ ಚಾಕೊಲೇಟ್ ಉದ್ಯಮದಲ್ಲಿ ಮಹತ್ವದ ವ್ಯಕ್ತಿಯಾಗಿರುವ ದಿ ಹರ್ಷೆ ಚಾಕೊಲೇಟ್ ಕಂಪನಿಯ ಸಂಸ್ಥಾಪಕ ಮಿಲ್ಟನ್ ಎಸ್ ಹರ್ಷೆಯವರ ಜನ್ಮದಿನವಾಗೆದೆ. ಇನ್ನು ಚಾಕೊಲೇಟ್ಗಳಲ್ಲಿ ಮೂರು ವಿಧದ ಚಾಕೊಲೇಟ್ಗಳಿವೆ –ಡರ್ಕ ಚಾಕೊಲೇಟ್, ಹಾಲು ಅಥವ ಮಿಲ್ಕ್ ಚಾಕೊಲೇಟ್ ಮತ್ತು ಬಿಳಿ ಅಥವಾ ವೈಟ್ ಚಾಕೊಲೇಟ್. ಮೂರರಲ್ಲಿ ಡಾರ್ಕ್ ಚಾಕೊಲೇಟ್ ತಿನ್ನಲು ಆರೋಗ್ಯಕರವಾದ ಚಾಕೊಲೇಟ್ ಆಗಿದೆ.
ಈ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಮಾನವ ದೇಹಕ್ಕೆ ಆಗುವ ಉಪಯೋಗಗಳೆಂದರೆ. ಡಾರ್ಕ್ ಚಾಕೊಲೇಟ್ ಅನ್ನು ಆರೋಗ್ಯಕರವಾದ ಚಾಕೊಲೇಟ್ ಎಂದು ಪರಿಗಣಿಸಲಾಗುತ್ತದೆ, ಮುಖ್ಯವಾಗಿ ಅದರಲ್ಲಿರುವ ಹೆಚ್ಚಿನ ಕೋಕೋ ಅಂಶಕ್ಕಾಗಿ. ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಸ್ಟ್ರೊಕ್ ನಂತಹ ಹೃದಯ ಸಂಭಂದಿ ಕಾಯಿಲೆಗಳು ಕಡಿಮೆಯಾಗುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಿ, ಹೃದಯಕ್ಕೆ ರಕ್ತ ಪರಿಚಲನೆ ಹೆಚ್ಚಿಸುವುದರ ಜೋತೆಗೆ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಡಾರ್ಕ್ ಚಾಕೊಲೇಟ್ ಕರುಳಿನ ಆರೋಗ್ಯವನ್ನು ಸುಧಾರಿಸಿ ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತದೆ.
ಡಾರ್ಕ್ ಚಾಕೊಲೇಟ್ ಸೆವಿಸುವುದರಿಂದ ಸೂರ್ಯನ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ವಯಸ್ಸಾದಿಕೆಗೆ ಸಂಬಂಧಿಸಿದ ಜೀವಕೋಶದ ಹಾನಿಯ ವಿರುದ್ಧ ಹೋರಾಡುತ್ತದೆ ಹೆಚ್ಚಾಗಿ ಮಿಲ್ಕ್ ಚಾಕೊಲೇಟ್‌ಗೆ ಹೋಲಿಸಿದರೆ ಡಾರ್ಕ್ ಚಾಕೊಲೇಟ್‌ನ ಕಡಿಮೆ ಸಕ್ಕರೆ ಅಂಶವು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಅತಿಯಾದ ಸಕ್ಕರೆ ಸೇವನೆಯು ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ, ಆದ್ದರಿಂದ ಡಾರ್ಕ್ ಚಾಕೊಲೇಟ್ ಅನ್ನು ಸೇವಿಸುವುದರಿಂದ ಈ ಅಪಾಯಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.