ಈದ್ – ಈ – ಮಿಲಾದ್ – ಉನ್- ನಬಿ ಎಂದು ಕರೆಯುವ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಅದ್ದೂರಿಯಾಗಿ ಆಚರಣೆ ಮಾಡುತಿದ್ದಾರೆ. ಪ್ರವಾದಿ ಮುಹಮ್ಮದ್ ಅವರ ಜನ್ಮದಿನ ಇಂದು . ಧರ್ಮದ ಕೊನೆಯ ಪ್ರವಾದಿಯಾದ ಹಜರತ್ ಮುಹಮ್ಮದ್ ಅವರು ಈ ದಿನದಂದೇ ಜನಿಸಿದ್ದು, ಮತ್ತು ಜನಿಸಿದ ಹುಟ್ಟಿದ ದಿನದಂದೇ ಅವರು ಸಾವನ್ನಪ್ಪಿದ್ದರು ಎಂಬುದು ತಿಳಿದು ಬಂದಿದೆ.
ಈದ್-ಈ-ಮಿಲಾದ್ ಹಬ್ಬವನ್ನು ಈ ಬಾರಿ ಸೆ.೧೬ ರಂದು ಅಂದರೆ ಇಂದು ವಿವಿಧ ದೇಶಗಳಲ್ಲಿ ಸೇರಿದಂತೆ ನಮ್ಮ ದೇಶದಲ್ಲೂ ಕೂಡ ಸಮುದಾಯದ ಜನರು ವಿಜೃಂಭಣೆಯಿ0ದ ಹಬ್ಬ ಆಚರಣೆ ಮಾಡುತಿದ್ದಾರೆ.
ಹಬ್ಬದ ಆಚರಣೆ ಹೇಗಿರುತ್ತೆ ಗೊತ್ತಾ..? ಹಬ್ಬಕ್ಕೆ ಪೂರ್ವ ತಯಾರಿ ಕೂಡ ಆರಂಭಿಸಿರುತ್ತಾರೆ. ಮನೆ ಮತ್ತು ಅಂಗಳದಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಿರುತ್ತಾರೆ. ಹೊಸ ಗಂಡು ಹೆಣ್ಣಿನಂತೆ ಹೊಸ ಹೊಸ ಬಟ್ಟೆಗಳನ್ನಿ ಧರಿಸಿ , ಸಿಹಿಯಾದ ಸಿಹಿ ತಿಂಡಿಗಳನ್ನು ವಿತರಿಸಲಾಗುತ್ತದೆ. ಮಸೀದಿಗೆ ಭೇಟಿ ನೀಡಿ ಈ ದಿನ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಮಹಿಳೆಯರು ಶೀರ್ ಖುರ್ಮಾ ಮತ್ತು ಸೇವಾಯನ್ ನಂತಹ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಿ ಮನೆ ಮಂದಿಯೆಲ್ಲಾ ಜೊತೆ ಸೇರಿ ಹಬ್ಬವನ್ನು ಆಚರಿಸುತ್ತಾರೆ.