ಮುಂಬೈ: ಸ್ವಾತಂತ್ರ್ಯ ಇದೆ ಎಂದು ಹೇಗೆಂದರೆ ಅಂಗೆ ಮಾತನಾಡಿದರೆ ವಿವಾದ ಸೃಷ್ಟಿಯಾಗುತ್ತೆ ಇದೀಗ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ ಬಹುಮಾನ ನೀಡುವುದಾಗಿ ಫೋಷಿಸಿ ವಿವಾದ ಸೃಷ್ಠಿಸಿರುತ್ತಾರೆ
ಅಮೇರಿಕಾ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮೀಸಲಾತಿ ಕುರಿತು ನೀಡಿದ ಹೇಳಿಕೆಗೆ ಪ್ರತಿಕ್ರಯಿಸಿದ ಗಾಯಕ್ವಾಡ್ ಲೋಕಸಭಾ ಚುನಾವಣೆಯಲ್ಲೂ ರಾಹುಲ್ ಗಾಂಧಿ ತಪ್ಪು ನಿರೂಪಣೆಯ ಮೂಲಕವೇ ಮತ ಪಡೆದರ ಈಗ ದೇಶದಲ್ಲಿ ಮೀಸಲಾತಿ ಅಂತ್ಯಗೊಳಿಸುವ ಕುರಿತು ಮಾತನಾಡುತ್ತಿದ್ದಾರೆ ಕಾಂಗ್ರೆಸ್ ತನ್ನ ನೈಜ ಮುಖ ಬಯಲು ಮಾಡಿಕೊಂಡಿದೆ. ರಾಹುಲ್ ಗಾಂಧಿ ಅವರ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ ಬಹುಮಾನವಾಗಿ ನೀಡುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ
ಇದೀಗ ಬಿಜೆಪಿ ನಾಯಕರೇ ಶಾಸಕ ಗಾಯಕ್ವಾಡ್ರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕರ ಹೇಳಿಕೆ ಕುರಿತು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬಾವಾಂಕುಲೆ ಅಂತರ ಕಾಪಾಡಿಕೊಂಡಿದ್ದಾರೆ. ಅಲ್ಲದೇ ಅನೇಕ ಶಿವಸೇನಾ ನಾಯಕರು ಕೂಡ ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ಹೇಳಿಕೆ: ವಾಷಿಂಗ್ಟನ್ ಡಿಸಿಯ ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶ ಉತ್ತಮ ಸ್ಥಿತಿಗೆ ತಲುಪಿದಾಗ, ಎಲ್ಲರಿಗೂ ಸಮಾನ ಅವಕಾಶ ದೊರೆತಾಗ ನಾವು ಮೀಸಲಾತಿಯನ್ನು ಅಂತ್ಯಗೊಳಿಸುತ್ತೇವೆ. ಸದ್ಯ ದೇಶದಲ್ಲಿ ಉತ್ತಮ ಸ್ಥಿತಿಯಿಲ್ಲ ಎಂದಿದ್ದರು. ಈ ಹೇಳಿಕೆ ಬಿಜೆಪಿ ಸೇರಿ ಇತರ ನಾಯಕರ ಕೆಂಗಣ್ಣಿಗೆ ಕಾರಣವಾಗಿತ್ತು.