ನವದೆಹಲಿ : ದೆಹಲಿಯಿಂದ ಲಂಡನ್ಗೆ ಹೊರಟಿದ್ದ ವಿಸ್ತಾರಾ ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆಯ ಬಂದ ಹಿನ್ನಲೆಯಲ್ಲಿ ಫ್ರಾಂಕ್ಫರ್ಟ್ನಲ್ಲಿ ವಿಮಾನ ಇಳಿಸಲಾಗಿದೆ.
ಇಂದು ಮುಂಜಾನೆ ವಿಮಾನವು ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು,ನಂತರ ಭದ್ರತಾ ಪರಿಶೀಲನೆ ನಡೆಸಿದ ನಂತರ ಅದು ಸುಳ್ಳು ಎಂದು ತಿಳಿದುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ, ವಿಮಾನ ಪ್ರಯಾಣ ಆರಂಭಿಸಿ ಶುಕ್ರವಾರ ಸ್ಥಳೀಯ ಕಾಲಮಾನ ರಾತ್ರಿ 11.40 ರ ಸುಮಾರಿಗೆ ಲಂಡನ್ನಲ್ಲಿ ಇಳಿಯಿತು ಎಂದು ವಿಸ್ತಾರಾ ವಕ್ತಾರರು ಹೇಳಿದರು.ಅ.18 ರಂದು ದೆಹಲಿ ಅಂತರರಾಷ್ಟ್ರೀಯ ವಿಮನ ನಿಲ್ದಾಣದಿಂದ ಲಂಡನ್ಗೆ ಪ್ರಯಾಣಿಸುತ್ತಿದ್ದ ವಿಸ್ತಾರಾ ಫ್ಲೈಟ್17ಗೆ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಬಂದಿದೆ.
ಪ್ರೋಟೋಕಾಲ್ಗೆ ಅನುಗುಣವಾಗಿ, ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ತಿಳಿಸಲಾಯಿತು ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ, ಪೈಲಟ್ಗಳು ವಿಮಾನವನ್ನು ಫ್ರಾಂಕ್ಫರ್ಟ್ ಕಡೆ ತಿರುಗಿಸಲು ನಿರ್ಧರಿಸಿದರು.ಏತನ್ಮಧ್ಯೆ, ಬೆಂಗಳೂರಿನಿಂದ ಮುಂಬೈಗೆ ಶುಕ್ರವಾರ ಹಾರಾಟ ನಡೆಸಬೇಕಿದ್ದ ಕ್ಯೂಪಿ 1366 ವಿಮಾನವು ನಿರ್ಗಮಿಸುವ ಸ್ವಲ್ಪ ಸಮಯದ ಮೊದಲು ಭದ್ರತಾ ಎಚ್ಚರಿಕೆಯನ್ನು ಸ್ವೀಕರಿಸಿದೆ ಎಂದು ಆಕಾಶ ಏರ್ ತಿಳಿಸಿದೆ.
ಆದ್ದರಿಂದ ಸುರಕ್ಷತೆ ಮತ್ತು ಸುರಕ್ಷತಾ ಕಾರ್ಯವಿಧಾನಗಳ ಪ್ರಕಾರ, ಸ್ಥಳೀಯ ಅಧಿಕಾರಿಗಳು ಅಗತ್ಯ ಕಾರ್ಯವಿಧಾನಗಳನ್ನು ಅನುಸರಿಸಿದ್ದರಿಂದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು ತಪಾಸಣೆ ನಡೆಸಲಾಗಿದೆ.
ಕಳೆದ ಕೆಲವು ದಿನಗಳಲ್ಲಿ, ಭಾರತದ ಸುಮಾರು 40 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ.ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆಯ ಘಟನೆಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರಲು ಯೋಜಿಸಿದೆ.