ದೇಶದಲ್ಲಿ ಹೆಚ್ಚುತ್ತಿದೆ ಡಿಜಿಟಲ್​ ವಹಿವಾಟು : ಅಕ್ಟೋಬರ್​ನಲ್ಲಿ ಹೊಸ ದಾಖಲೆ ಬರೆದ ಯುಪಿಐ

UPI

ದೇಶದಲ್ಲಿ ತಿಂಗಳಿನಿಂದ ತಿಂಗಳಕ್ಕೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಆಧಾರಿತ ಡಿಜಿಟಲ್ ವಹಿವಾಟು ಹೆಚ್ಚುತ್ತಲೇ ಇದೆ. ಅಕ್ಟೋಬರ್‌ನಲ್ಲಿ ದೇಶವು 23.5 ಲಕ್ಷ ಕೋಟಿ ಮೌಲ್ಯದ 16.58 ಬಿಲಿಯನ್ ವಹಿವಾಟುಗಳನ್ನು ಕಂಡಿದೆ. ಇದು ಏಪ್ರಿಲ್ 2016ರಲ್ಲಿ ಯುಪಿಐ ಕಾರ್ಯಾರಂಭ ಮಾಡಿದ ನಂತರದ ಗರಿಷ್ಠ ಸಂಖ್ಯೆಯಾಗಿದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಮಾಹಿತಿ ಪ್ರಕಾರ, ಸೆಪ್ಟೆಂಬರ್‌ಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಶೇಕಡಾ 10 ರಷ್ಟು ಮತ್ತು ಮೌಲ್ಯದಲ್ಲಿ ಶೇಕಡಾ 14 ರಷ್ಟು ಹೆಚ್ಚಳವಾಗಿದೆ ಎಂದು ವರದಿ ಮಾಡಿದೆ.

ಅಕ್ಟೋಬರ್‌ನಲ್ಲಿ ದೈನಂದಿನ ಯುಪಿಐ ವಹಿವಾಟುಗಳು ಪರಿಮಾಣದಲ್ಲಿ 535 ಮಿಲಿಯನ್ ಮತ್ತು ಮೌಲ್ಯದಲ್ಲಿ 75,801 ಕೋಟಿಗಳನ್ನು ದಾಟಿದೆ. ಅಕ್ಟೋಬರ್‌ನಲ್ಲಿ 467 ಮಿಲಿಯನ್ ತಕ್ಷಣದ ಪಾವತಿ ಸೇವೆ (IMPS) ವಹಿವಾಟುಗಳು ನಡೆದಿವೆ. ಸೆಪ್ಟೆಂಬರ್‌ನಲ್ಲಿ 430 ಮಿಲಿಯನ್‌ ವಹಿವಾಟು ನಡೆದಿದ್ದು, ಅಕ್ಟೋಬರ್​ಗೆ ಹೋಲಿಸಿದರೆ ಇದು ಶೇಕಡಾ 9 ರಷ್ಟು ಹೆಚ್ಚಾಗಿದೆ. IMPS ವಹಿವಾಟುಗಳು ಸೆಪ್ಟೆಂಬರ್‌ನಲ್ಲಿ 5.65 ಲಕ್ಷ ಕೋಟಿ ರೂಪಾಯಿಗಳಿಗೆ ವಹಿವಾಟು ನಡೆಸಿವೆ. ಇದು ಅಕ್ಟೋಬರ್​ಗೆ ಹೋಲಿಸಿದರೆ 6.29 ಲಕ್ಷ ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆದಿದ್ದು, ಶೇಕಡಾ 11ರಷ್ಟು ಏರಿಕೆ ಕಂಡಿದೆ.

ಅಕ್ಟೋಬರ್‌ನಲ್ಲಿ ಫಾಸ್ಟ್‌ಟ್ಯಾಗ್ ವಹಿವಾಟುಗಳಲ್ಲಿ ಶೇಕಡಾ 8 ರಷ್ಟು ಏರಿಕೆ ಕಂಡಿದ್ದು, 6,115 ಕೋಟಿ ವಹಿವಾಟು ನಡೆಸಿದೆ. ಇದು ಸೆಪ್ಟೆಂಬರ್‌ನಲ್ಲಿ 5,620 ಕೋಟಿ ವಹಿವಾಟು ನಡೆಸಿತ್ತು.

ಎನ್​ಪಿಸಿಐ ಡೇಟಾ ಪ್ರಕಾರ, ಅಕ್ಟೋಬರ್‌ನಲ್ಲಿ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯಲ್ಲಿ (AePS) 126 ಮಿಲಿಯನ್ ವಹಿವಾಟುಗಳು ನಡೆದಿದ್ದು, ಶೇಕಡಾ 26ರಷ್ಟು ಏರಿಕೆ ಕಂಡಿದೆ. ಇನ್ನು ಸೆಪ್ಟೆಂಬರ್‌ನಲ್ಲಿ ಇದರ ವಹಿವಾಟುಗಳು 100 ಮಿಲಿಯನ್‌ ನಡೆದಿತ್ತು.

ರಿಸರ್ವ್ ಬ್ಯಾಂಕ್‌ನ ಕರೆನ್ಸಿ ಮ್ಯಾನೇಜ್‌ಮೆಂಟ್ ಇಲಾಖೆಯ ಅರ್ಥಶಾಸ್ತ್ರಜ್ಞ ಪ್ರದೀಪ್ ಭುಯಾನ್ ಅವರ ಇತ್ತೀಚಿನ ಪತ್ರಿಕೆಯ ಪ್ರಕಾರ, ಭಾರತದಲ್ಲಿ ಡಿಜಿಟಲ್ ವಹಿವಾಟುಗಳ ಶೈಲಿ ಹೆಚ್ಚಿವೆ. ನಗದು ಬಳಕೆ ಇನ್ನೂ 60 ಪ್ರತಿಶತದಷ್ಟು ಗ್ರಾಹಕ ವೆಚ್ಚವನ್ನು (ಮಾರ್ಚ್ 2024 ರಂತೆ) ಇಳಿಮುಖವಾಗಿಸುತ್ತಿದೆ ಎಂದು ಹೇಳಿದರು.

ಡಿಜಿಟಲ್ ಪಾವತಿಗಳ ಪಾಲು ಮಾರ್ಚ್ 2021 ರಲ್ಲಿ ಶೇಕಡಾ 14-19 ರಿಂದ ಮಾರ್ಚ್ 2024 ರಲ್ಲಿ ಶೇಕಡಾ 40 – 48 ಕ್ಕೆ ದ್ವಿಗುಣಗೊಂಡಿದೆ. ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಪ್ರಮುಖ ಪಾತ್ರವನ್ನು ವಹಿಸುತ್ತದೆ.

Leave a Reply

Your email address will not be published. Required fields are marked *