ಗಂಗಾವತಿ: ಮದುವೆ ಎಂಬ ಪವಿತ್ರ ಬಂಧನ ಈಗ ದುಡ್ಡಿನ ವ್ಯವಹಾರಕ್ಕೆ ತಿರುಗಿದೆ. ಗಂಗಾವತಿ ತಾಲೂಕಿನ ದೇವಿಕ್ಯಾಂಪ್ ಗ್ರಾಮದ ಯುವಕನೊಬ್ಬ, ಮದುವೆ ವಯಸ್ಸು ಮೀರಿ ಹೋಗುತ್ತಿದ್ದ ಕಾರಣ suitable match ಸಿಗದೇ ಮದುವೆ ಬ್ರೋಕರ್ಗಳ ಮೊರೆ ಹೋಗಿದ್ದ. ಈ ಸಂದರ್ಭ ದುಡ್ಡಿನ ಆಸೆಗೆ ಬಿದ್ದ ದಲ್ಲಾಳಿಗಳು, ಅವನಿಗೆ ಎರಡು ಮಕ್ಕಳ ತಾಯಿಯನ್ನು ‘ಹುಡುಗಿ’ ಎಂದು ಹೇಳಿ ಮದುವೆ ಮಾಡಿಸಿ ಮೋಸ ಮಾಡಿದ್ದಾರೆ.

ವಿಜಯವಾಡದ ಮದುವೆ ದಲ್ಲಾಳಿಗಳು, ಮೊದಲು ಐದು ಲಕ್ಷ ರೂಪಾಯಿ ಪಡೆದು ವಿಜಯವಾಡದ ಇಂದ್ರಕೀಲಾದ್ರಿ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ. ನಂತರ ಯುವಕನ ಮನೆಗೆ ಬಂದ ಜೋಡಿ ಆರತಕ್ಷತೆಗೂ ಒಪ್ಪಿಕೊಂಡರು. ಆದರೆ ಮಧುಚಂದ್ರ ವೇಳೆ ವಧುವಿನ ಅಸಹಜ ವರ್ತನೆಯಿಂದಾಗಿ ಯುವಕನಿಗೆ ಅನುಮಾನವಾಯಿತು. ಕೊನೆಗೆ ಆಕೆ ತನ್ನದು ನಕಲಿ ಮದುವೆಯೆಂಬುದನ್ನೂ, ಈ ನಾಟಕಕ್ಕಾಗಿ ದಲ್ಲಾಳಿಗಳು ₹2 ಲಕ್ಷ ತನ್ನನ್ನು, ₹3 ಲಕ್ಷ ಪಡೆದಿರುವುದನ್ನೂ ಬಯಲುಪಡಿಸಿದಳು
ಆಕೆ ಹೇಳಿದಂತೆ, ಹಣಕ್ಕಾಗಿ ಐದು ದಿನ ‘ವಧು’ ಆಗಿ ನಟನೆ ಮಾಡುವಂತೆ ಮಧ್ಯವರ್ತಿಗಳು ಒತ್ತಾಯಿಸಿದ್ದರು. ಮೋಸದ ಅರಿವಾದ ಬಳಿಕ ಯುವಕನ ಕುಟುಂಬಸ್ಥರು ವಿಜಯವಾಡದ ಕೃಷ್ಣಲಂಕಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಮಂಗ ತಾಯೇರು, ಪಾರ್ವತಿ, ವಿಮಲಾ ಹಾಗೂ ಆಟೋ ಚಾಲಕ ಅಪ್ಪಾರಾವ್ ಸೇರಿದಂತೆ ಆಮ್ನಿ ಎಂಬ ಹೆಸರಿನಲ್ಲಿ ವೇಶಧರಿಸಿದ್ದ ಮಹಿಳೆಯ ಮೇಲೆ ಪ್ರಕರಣ ದಾಖಲಾಗಿದೆ . ಇಂತಹ ಘಟನೆಗಳು ಪುನರಾವೃತವಾಗದಂತೆ ಜನ ಎಚ್ಚರಿಕೆ ವಹಿಸಬೇಕು. ಮದುವೆ ಎಂದರೆ ಭಾವನಾತ್ಮಕ ಸಂಬಂಧ. ಯಾವುದೇ ಕಾರಣಕ್ಕೂ ದಲ್ಲಾಳಿಗಳ ಮೇಲೆ ನಂಬಿಕೆ ಇಡದೆ, ಪರೀಕ್ಷಿಸಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು ಎಂಬುದು ಈ ಘಟನೆಯ ಪಾಠ.