ಅಂಕಣ || ಯುವಕರ ಹಾದಿ ತಪ್ಪಿಸುತ್ತಿರುವ ಮೊಬೈಲ್ ರೀಲ್ಸ್ | Reels misleading Youth

Reels misleading Youth

ಲೇಖನೆ: ಮಲ್ಲೇಶ್ ಎಂ ನಾಯ್ಕ,ಉಪನ್ಯಾಸಕರು, ಲೇಖಕರು ದಾವಣಗೆರೆ

ಪ್ರಸ್ತುತ ಮನುಷ್ಯ ಜೀವನ ಎಷ್ಟರಮಟ್ಟಿಗೆ ಈ ಮೊಬೈಲ್ ಫೋನಿಗೆ ಅವಲಂಬಿತವಾಗಿದೆ ಎಂದರೆ ಮನುಷ್ಯನ ದೈನಂದಿನ ಚಟುವಟಿಕೆಗಳಲ್ಲಿಯೂ ಮೊಬೈಲ್ ಬೇಕೇ ಬೇಕು. ಇದು ಸ್ಮಾರ್ಟ್ ಫೋನ್ ಯುಗ ಎಲ್ಲಿ ನೋಡಿದರೂ ಸ್ಮಾರ್ಟೊ್ಫೋನ್ಗಳೇ ಎದ್ದು ಕಾಣುತ್ತವೆ. ಮಾನವನಿಗೆ ಉಡುಗೆ ತೊಡುಗೆಗಳು ಹೇಗೆ ಅನಿವಾರ್ಯವೋ ಹಾಗೆ ಸ್ಮಾರ್ಟ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳು ಬಹಳಷ್ಟು ಅನಿವಾರ್ಯವಾಗಿದೆ .  ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಿಂದ ಹಿಡಿದು ಮುದುಕರವರೆಗೆ ಫೇಸ್ಬುಕ ಮತ್ತು ಇನ್ಸ್ಟಾಗ್ರಾಂ ಬಳಕೆಯ ಹುಚ್ಚು ಹೆಚ್ಚಾಗಿದೆ.

ಹಿಂದೆ ಒಂದು ಕಾಲವಿತ್ತು ಪುಟ್ಟ ಮಕ್ಕಳಿಗೆ ಚಂದಮಾಮನನ್ನು ತೋರಿಸಿ ಊಟ ಉಣಿಸುತ್ತಿದ್ದ ಕಾಲ ಆದರೆ ಈ ಆಧುನಿಕ ಯುಗದಲ್ಲಿ ಚಂದಮಾಮನಿಗೆ ಬೆಲೆ ಇಲ್ಲದಂತಾಗಿದೆ. ಕೈಯಲ್ಲಿ ಮೊಬೈಲ್ ಫೋನ್ ಇದ್ದರೆ ಮಾತ್ರ ಮಗು ಊಟ ಮಾಡುತ್ತದೆ ಇದೆ ವಿಷಾದಕರ ಸಂಗತಿ. ಇತ್ತೀಚಿಗೆ ಎಲ್ಲರಿಗೂ ಇನ್ಸ್ಟಾಗ್ರಾಂ ರಿಲ್ಸ್ ವಿಡಿಯೋಗಳ ಹುಚ್ಚು ಬಹಳಷ್ಟು ದಾರಿ ತಪ್ಪಿಸುತ್ತಿದೆ  ಅದರಲ್ಲಿಯೂ ಯುವಕ ಯುವತಿ ಅರ್ಧಂಬರ್ಧ ಬಟ್ಟೆ ಧರಿಸಿ ವಿಡಿಯೋ ಮತ್ತು ರೀಲ್ ಮಾಡುವುದರಲ್ಲಿ ಬಹಳಷ್ಟು ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ ಮೊಬೈಲ್ ರೀಲ್ಸ್ ವಿಡಿಯೋ ಗಳಲ್ಲಿ ಮುಳುಗಿ ಹೋಗುತ್ತಿದ್ದಾರೆ . ಈ ಮೊಬೈಲ್ ರೀಲ್ಸ್ ನ ಹುಚ್ಚಾಟ ಚಿಕ್ಕ ಮಕ್ಕಳನ್ನು ಸಹ ದಾರಿ ತಪ್ಪುವ ಹಾಗೆ ಮಾಡಿದೆ.

ಕೇವಲ ಲೈಕ್ ಕಾಮೆಂಟ್ ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಳ್ಳುವುದೇ ಅತಿ ದೊಡ್ಡ ಸಾಧನೆ ಎಂದುಕೊಂಡು ಚಿತ್ರ ವಿಚಿತ್ರವಾಗಿ ಮೊಬೈಲ್ ರೀಲ್ಸ್ ಗಳನ್ನು ಮಾಡುತ್ತಿದ್ದಾರೆ . ಯಾವುದೇ ಉಪಯುಕ್ತ ಮತ್ತು ಉತ್ತಮ ಸಂದೇಶ ನೀಡದೆ ಯುವ ಸಮಾಜವನ್ನು ವಿಪರೀತ ಪರಿಸ್ಥಿತಿಗೆ ಈ ಮೊಬೈಲ್ ರಿಲ್ಸ್ ಗಳು ತಂದೊಡ್ಡಿವೆ.

ವಯಸ್ಸಿಗೆ ಬಂದಂತಹ ಯುವಕ – ಯುವತಿಯರು ಬದುಕಿನ ಹಂಗನ್ನು ತೊರೆದು ಚಿತ್ರ ವಿಚಿತ್ರವಾಗಿ ಹುಡುಗಿ ತೊಡಗಿಗಳನ್ನು ಧರಿಸುತ್ತಾ ಸಮಾಜದಲ್ಲಿ  ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ.

ಯಾವುದೇ ವಿದ್ಯಾಭ್ಯಾಸ ಓದು ಮತ್ತು ಬರವಣಿಗೆ ಬಗ್ಗೆ ತಲೆಕೆಡಿಸಿಕೊಳ್ಳದೆ ಸ್ಕೂಲ್ ಮತ್ತೆ ಕಾಲೇಜಿನಲ್ಲಿ ಮೋಜು-ಮಸ್ತಿ ಮಾಡುತ್ತಾರೆ ಬಹಳಷ್ಟು ಸಾಮಾಜಿಕ ಜಾಲತಾಣಕ್ಕೆ ಅಡಿಕ್ಟ್ ಆಗಿರುತ್ತಾರೆ.

ಉತ್ತಮ ಮತ್ತು ಸಮಾಜಮುಖಿ ಮಾಹಿತಿಯನ್ನು ನೀಡದೆ ಕೆಟ್ಟ ಮತ್ತು ಅಶ್ಲೀಲವಾದ ರಿಲ್ಸ್ ವಿಡಿಯೋಗಳನ್ನು ಹೆಚ್ಚಿನ ಲೈಕ್  ಮತ್ತು ಕೆಟ್ಟ ಕೆಟ್ಟ ಕಾಮೆಂಟ್ಗಳು ಸಮಾಜನ ಯುವಕರನ್ನು ವಿಪರಿತವಾಗಿ ದಾರಿ ತಪ್ಪಿಸುತ್ತಿವೆ .

ಈ ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಟ್ಟಿಗೆ ಹದಗೆಟ್ಟು ಹೋಗಿದೆ ಎಂದರ ಅಪ್ರಯೋಜಕವಾಗಿ ಟ್ರೋಲ್ ಮಾಡುವುದು ಸಮಾಜಕ್ಕೆ ಹಾನಿಯಾಗುವಂತಹ ಸುಳ್ಳು ಸುದ್ದಿಗಳನ್ನು ಹೊರಡಿಸುವುದು ಮತ್ತು ತಪುö್ಪ ತಪುö್ಪ ಮಾಹಿತಿ ಮತ್ತು ಸಂದೇಶಗಳನ್ನು ಹರಿಯಲು ಬಿಟ್ಟು ಜನಸಾಮಾನ್ಯರ ದಿಕ್ಕು ತಪ್ಪಿಸುವುದು. ಇನ್ನು  ಕೇವಲ ಧರ್ಮ ದಾರಿಯಲ್ಲಿ ರಾಜಕೀಯ ಯುವಕರ ಹಾದಿ ತಪ್ಪಿಸುವ ಮತ್ತು ತಪುö್ಪ ಮಾಹಿತಿಗಳನ್ನು ರವಾನೆ ಜೊತೆಗೆ ಉತ್ತಮ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳನ್ನು ಟ್ರೋಲ್ ಮಾಡುವುದರ ಮುಖಾಂತರ ಅಗೌರವವನ್ನು ಸಲ್ಲಿಸುತ್ತಿದ್ದಾರೆ.

ಈ ಮೊಬೈಲ್ ರಿಲ್ಸ್ ಹುಚ್ಚಾಟ ಎಷ್ಟು ಜನರನ್ನು  ಪ್ರವಾಸದ ಮಾಡುವ ಸಂದರ್ಭದಲ್ಲಿ ರಿಲ್ಸ್ ವಿಡಿಯೋಗಳನ್ನು ತೆಗೆಯುವ ಸಂದರ್ಭದಲ್ಲಿ ಪ್ರಾಣವನ್ನೇ ಕಳೆದುಕೊಂಡ ಸನ್ನಿವೇಶಗಳು ನಾವು ನೋಡಿದ್ದೇವೆ. ಯಾವುದೇ ಉಪಯುಕ್ತವಾದ ಮಾಹಿತಿ ಇಲ್ಲವೇ ಇಲ್ಲ ಕೇವಲ ಸಾಮಾಜಿಕ ಜಾಲತಾಣ ಮತ್ತು ದೃಶ್ಯಮಾಧ್ಯಮಗಳಲ್ಲಿ ಸಿಲುಕಿ ಪುಸ್ತಕ ಮತ್ತು ಸಾಹಿತ್ಯ ಓದುವ ಅಭಿರುಚಿಯನ್ನು ಕಳೆದುಕೊಂಡಿದೆ.

ಯುವಜನತೆ ತಮ್ಮ ಜೀವನ ಮತ್ತು ಕುಟುಂಬದ ಜವಾಬ್ದಾರಿಯ ಬಗ್ಗೆ ಶಿಕ್ಷಣದ ಬಗ್ಗೆ ಅರಿವನ್ನು ಇಟ್ಟುಕೊಳ್ಳಬೇಕು ಕೇವಲ ಇನ್ನೊಬ್ಬ ವ್ಯಕ್ತಿಯ ಗೌರವವನ್ನು ನಿಂದಿಸುವುದು ಮತ್ತು ಟ್ರೋಲ್ ಮಾಡುವುದು ಅತಿ ದೊಡ್ಡ ಸಾಧನೆ ಅಂದುಕೊಂಡಿರುವ ಯುವ ಜನತೆ ಈ ತರಹದ  ಅಮಾನವೀಯ ಕಾರ್ಯಗಳಿಂದ ದೂರವಿದ್ದು ಸಮಾಜಮುಖಿಯಾಗಿ ಉತ್ತಮ ಸಂದೇಶಗಳನ್ನು ರವಾನಿಸುವುದು ಜೊತೆಗೆ ಉತ್ತಮ ಸಮಾಜವನ್ನು ಕಟ್ಟಬೇಕು . ಜೊತೆಗೆ ಪೋಷಕರು ಸಹ ತಮ್ಮ ಚಿಕ್ಕ ಪುಟ್ಟ ಮಕ್ಕಳಿಗೆ ಮೊಬೈಲ್ ಗಳನ್ನು ಕೊಡಿಸುವ ಸಂದರ್ಭದಲ್ಲಿ ಯೋಚನೆ ಮಾಡಿ ಕೊಡಿಸಬೇಕು ಆದಷ್ಟು ಓದುವ ಸಮಯದಲ್ಲಿ ಮಕ್ಕಳನ್ನು ಮೊಬೈಲ್ ಗಳಿಂದ ದೂರ ವಿಡಲು ಪ್ರಯತ್ನಿಸಿ ಇಲ್ಲವಾದರೆ ಅವರ ಶೈಕ್ಷಣಿಕ ಬದುಕಿಗೆ ಬಹಳಷ್ಟು ತೊಂದರೆಯಾಗುತ್ತದೆ. ಉತ್ತಮ ಮಾಹಿತಿ ಮತ್ತು ಸಾಮರಸ್ಯವನ್ನು ಸಾರುತ್ತಾ ನಾವು ಮಾನವೀಯವಾಗಿ ಶೈಕ್ಷಣಿಕವಾಗಿ ಉತ್ತಮ ಸಮಾಜ ಕಟ್ಟಬೇಕಿದೆ.

            -.

      ಪ್ರತಿಕ್ರಿಯಿಸಿ ( 9632818431)

Leave a Reply

Your email address will not be published. Required fields are marked *