Tumkur – Bangalore ಫಾಸ್ಟ್‌ ಪ್ಯಾಸೆಂಜರ್‌ ರೈಲಿನ 13ನೇ ಹುಟ್ಟುಹಬ್ಬ ಆಚರಣೆ || TRAIN Birthday Celebration

13th birthday celebration of Tumkur - Bangalore Fast Passenger Train

13th birthday celebration of Tumkur - Bangalore Fast Passenger Train

ತುಮಕೂರುನಗರದ ರೈಲ್ವೆ ಪ್ರಯಾಣಿಕರ ವೇದಿಕೆಯಿಂದ ಇಂದು (ಆ.3) ತುಮಕೂರು – ಬೆಂಗಳೂರು ಫಾಸ್ಟ್‌ ಪ್ಯಾಸೆಂಜರ್‌ ರೈಲಿನ 13ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಲಾಯಿತು.

ಬಹುತೇಕ ಎಲ್ಲೂ ನಡೆಯದ ರೈಲಿನ ಹುಟ್ಟುಹಬ್ಬವನ್ನು ನಗರದ ರೈಲ್ವೆ ಪ್ರಯಾಣಿಕರ ವೇದಿಕೆ ಕಳೆದ 12 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.

ಬೆಂಗಳೂರಿಗೆ ಪ್ರತಿದಿನ ಸಂಚರಿಸುವ ಉದ್ಯೋಗಿಗಳಿಗೆ ಅನುಕೂಲವಾಗಲೆಂದು ನೈಋುತ್ಯ ರೈಲ್ವೆ ಅಧಿಕಾರಿಗಳ ಮನವೊಲಿಸಿದ್ದ ರೈಲ್ವೆ ಪ್ರಯಾಣಿಕರ ವೇದಿಕೆ 2013ರಂದು ತುಮಕೂರು-ಬೆಂಗಳೂರು ಫಾಸ್ಟ್‌ ಪ್ಯಾಸೆಂಜರ್‌ ರೈಲಿನ ಬೇಡಿಕೆ ಈಡೇರಿಸಿಕೊಂಡಿತ್ತು. ನೂತನ ರೈಲು ಆರಂಭಕ್ಕೆ ಕಾರಣವಾಗಿದ್ದ ಪ್ರಯಾಣಿಕರ ವೇದಿಕೆ ರೈಲ್ವೆ ಪ್ರಯಾಣಿಕರಿಗೆ ವಿವಿಧ ರೀತಿಯಲ್ಲಿ ಕೆಲಸ ಮಾಡುತ್ತಿದೆ.

ಪ್ರಯಾಣಿಕರ ಸಂಕಷ್ಟ ನಿವಾರಣೆಗೆ ಆರಂಭಗೊಂಡ ರೈಲಿನ ಹುಟ್ಟುಹಬ್ಬದ ದಿನಾಚರಣೆ ಸಂಭ್ರಮ ಇಂದಿಗೂ ಮುಂದುವರೆದಿದೆ. ರೈಲು ಆರಂಭಗೊಂಡ ನೆನಪಿಗಾಗಿ ಆ.3 ರಂದು ಪ್ರತಿ ವರ್ಷವೂ ರೈಲಿಗೆ ಹುಟ್ಟುಹಬ್ಬ ಆಚರಿಸಿ, ಪ್ರಯಾಣಿಕರೊಂದಿಗೆ ವೇದಿಕೆಯ ಪದಾಧಿಕಾರಿಗಳು ಸಂಭ್ರಮಿಸುತ್ತಿದ್ದಾರೆ.

ಅದೇ ರೀತಿ ಭಾನುವಾರ ಬೆಳ್ಳಂಬೆಳಗ್ಗೆಯೇ ನಿಲ್ದಾಣಕ್ಕೆ ಆಗಮಿಸಿದ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಯಾಣಿಕರ ಸಹಕಾರದೊಂದಿಗೆ ರೈಲಿಗೆ ಬಾಳೆ ಕಂದು, ಮಾವಿನ ಸೊಪ್ಪು ಕಟ್ಟಿ, ಹೂವಿನಿಂದ ಅಲಂಕರಿಸಿದರು. ಬಲೂನ್‌ ಬಂಟಿಂಗ್ಸ್‌ಗಳನ್ನೂ ಕಟ್ಟಿ ಸಂತಸಪಟ್ಟರು.

Leave a Reply

Your email address will not be published. Required fields are marked *