ತುಮಕೂರು: ನಗರದ ನಿವೃತ್ತ ರೇಷ್ಮೆ ಇಲಾಖೆಯ ನೌಕರರ ಬ್ಯಾಂಕ್ ಖಾತೆಯಿಂದ ರಾತ್ರೋ ರಾತ್ರಿ ಬರೋಬ್ಬರಿ 17 ಲಕ್ಷ ರೂ.ಗಳು ಬೇರೊಂದು ಖಾತೆಗೆ ವರ್ಗಾವಣೆಯಾಗಿದ್ದು, ನಗರದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿವೃತ್ತ ರೇಷ್ಮೆ ಇಲಾಖೆಯ ನೌಕರರಾದ ಸಿ.ಇ. ನಾಗರಾಜು ಅವರ ಬ್ಯಾಂಕ್ ಖಾತೆಯಲ್ಲಿ 35 ಲಕ್ಷ ಹಣವಿತ್ತು. ಜು.31 ರಂದು ರಾತ್ರಿ 12 ರಿಂದ 1 ಗಂಟೆ ಸಮಯದಲ್ಲಿ ಅವರ ಮೊಬೈಲ್‌ಗೆ ನಿರಂತರ ಸಂದೇಶಗಳು ಬರುತ್ತಿದ್ದು, ಮೊಬೈಲ್ ಪರಿಶೀಲಿಸಿದಾಗ ಖಾತೆಯಿಂದ ಹಣ ಬೇರೊಂದು ಖಾತೆಗೆ ವರ್ಗಾವಣೆಯಾಗಿರುವುದು ಕಂಡುಬAದಿದೆ.
ನಂತರ ಕೂಡಲೇ ಬ್ಯಾಂಕ್‌ನ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಹಣ ವರ್ಗಾವಣೆ ಆಗಿರುವ ಬಗ್ಗೆ ದೂರು ನೀಡಿದ್ದು, ಆ.1 ರಂದು ಬ್ಯಾಂಕ್‌ಗೆ ಭೇಟಿ ನೀಡಿ ವಿಚಾರಿಸಿದಾಗ ಬೇರೆ ಖಾತೆಗಳಿಗೆ ಇಮಿಡೆಟ್ ಪೇಮೆಂಟ್ ಸರ್ವಿಸ್(IMPS), ಮೊಬೈಲ್ ಫೈನಾಷಿಯಲ್ ಟೆಕ್ನಾಲಜಿ (MOBFT) ಹಾಗೂ ನ್ಯಾಷನಲ್ ಎಲೆಕ್ಟಾçನಿಕ್ ಫಂಡ್ಸ್ ಟ್ರಾನ್ಸ್ಫಾರ್(NEFT) ಮೂಲಕ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ.
ಮೋಸದಿಂದ ನನ್ನ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ನಾಗರಾಜು ಅವರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.