ಕಿಂಗ್ಡಮ್’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ, ನಿರ್ದೇಶಕ ಗೌತಮ್ ತಿನ್ನನುರಿ ಅವರು ಕಿಂಗ್ಡಮ್ 2 ಮತ್ತು ಒಂದು ಸ್ಪಿನ್ ಆಫ್ ಸಿನಿಮಾಗಳನ್ನು ಮಾಡುವುದಾಗಿ ಘೋಷಿಸಿದ್ದಾರೆ. ಮೊದಲ ಭಾಗದಲ್ಲಿ ಪರಿಚಯಿಸಲಾದ ಸೇತು ಪಾತ್ರವನ್ನು ಕೇಂದ್ರೀಕರಿಸಿ ಒಟಿಟಿಗಾಗಿ ಒಂದು ಪ್ರೀಕ್ವೆಲ್ ಕೂಡ ತಯಾರಾಗಲಿದೆ. ಭವಿಷ್ಯದಲ್ಲಿ ಕಿಂಗ್ಡಮ್ 3 ಕೂಡ ಬರಬಹುದು ಎಂಬ ಸುಳಿವು ನೀಡಿದ್ದಾರೆ.
‘ಕಿಂಗ್ಡಮ್’ ಸಿನಿಮಾ ಯಶಸ್ಸಿನ ಬಳಿಕ ನಿರ್ದೇಶಕ ಗೌತಮ್ ತಿನ್ನನುರಿ ಅವರು ಒಂದು ಭರ್ಜರಿ ಅಪ್ಡೇಟ್ ಕೊಟ್ಟಿದ್ದಾರೆ. ಈ ಸಿನಿಮಾ ಗೆಲುವಿನ ಬೆನ್ನಲ್ಲೇ ‘ಕಿಂಗ್ಡಮ್ 2’ ಬರಲಿದೆ ಎಂದು ಹೇಳಿದ್ದಾರೆ. ಜೊತೆಗೆ ಇದೇ ಕಥೆ ಇಟ್ಟುಕೊಂಡು ಒಂದು ಸ್ಪಿನ್ ಆಫ್ ಮಾಡುವ ಆಲೋಚನೆ ಕೂಡ ನಿರ್ದೇಶಕರಿಗೆ ಇದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದೊಂದು ದಿನ ‘ಕಿಂಗ್ಡಮ್ 3’ ಕೂಡ ಮೂಡಿ ಬರಲಿದೆಯಂತೆ.
‘ಕಿಂಗ್ಡಮ್’ ಸಿನಿಮಾ ಜುಲೈ 31ರಂದು ರಿಲೀಸ್ ಆಯಿತು. ಮೊದಲ ದಿನವೇ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ 33 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಕೆಲಸಗಳು ಪೂರ್ಣಗೊಳ್ಳದಿದ್ದ ಕಾರಣ ಪ್ರಚಾರದಲ್ಲಿ ಗೌತಮ್ ಭಾಗಿ ಆಗಿರಲಿಲ್ಲ. ಈಗ ಸಿನಿಮಾ ಬಳಿಕ ಅವರು ಅಪ್ಡೇಟ್ ಒಂದನ್ನು ನೀಡಿದ್ದಾರೆ.
‘ಕಿಂಗ್ಡಮ್’ ಸಿನಿಮಾ ಎರಡು ಭಾಗದಲ್ಲಿ ಮಾಡುವ ಆಲೋಚನೆ ಗೌತಮ್ಗೆ ಇತ್ತು. ಮೊದಲ ಪಾರ್ಟ್ನ ಕೊನೆಯಲ್ಲಿ ಸೇತು ಹೆಸರಿನ ವಿಲನ್ ಪಾತ್ರ ಪರಿಚಯಿಸಲಾಗಿದೆ. ಈತ ವಿಲನ್ನ ಅಣ್ಣ. ಎರಡನೇ ಪಾರ್ಟ್ನಲ್ಲಿ ಸೂರಿ (ವಿಜಯ್ ದೇವರಕೊಂಡ) ಹಾಗೂ ಸೇತು ನಡುವಿನ ತಿಕ್ಕಾಟವನ್ನು ಹೈಲೈಟ್ ಮಾಡಲಾಗುತ್ತದೆ. ಈ ಸಿನಿಮಾ ಮಾಡುವುದಕ್ಕೂ ಮೊದಲು ಸೇತು ಪಾತ್ರವನ್ನು ಕೇಂದ್ರೀಕರಿಸಿ ಒಟಿಟಿಗಾಗಿ ಗೌತಮ್ ಒಂದು ಸಿನಿಮಾ ಮಾಡಲಿದ್ದಾರೆ.
For More Updates Join our WhatsApp Group :