ಬೆಂಗಳೂರು : ವೇತನ ಪರಿಷ್ಕರಣೆ ಹಾಗೂ 20 ತಿಂಗಳ ಹಿಂಬಾಕಿ ವೇತನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಂಟಿಸಿ, ಕೆಎಸ್ಆರ್ಟಿಸಿ (KSRTC) ಸೇರಿದಂತೆ 4 ವಿಭಾಗಗ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದೆ. ಸರ್ಕಾರಕ್ಕೆ ಜೊತೆ ಸಭೆ ಮೇಲೆ ಸಭೆ ನಡೆದ್ರೂ ಬೇಡಿಕೆ ಈಡೇರಿಸಿಕಲ್ಲ. ಹೀಗಾಗಿ ಇಂದಿನಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ಬೆಳ್ಳಂ ಬೆಳಗ್ಗೆಯೇ ತಟ್ಟಿದೆ ಮುಷ್ಕರದ ಬಿಸಿ
ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟಿದೆ. ಬಸ್ಗಳಿಲ್ಲದೇ ಜನರು ಆಟೋಗಳ ಮೊರೆ ಹೋಗ್ತಿದ್ದಾರೆ. ಮುಕ್ಕಾಲು ಗಂಟೆ ಕಾದ್ರು ಬಸ್ ಸಿಗ್ತಿಲ್ಲ ಅಂತ ಗೊಣಗುತ್ತಿರುವ ಜನ ಆಟೋದಲ್ಲಿ ಪ್ರಯಾಣ ಮಾಡ್ತಿದ್ದಾರೆ.
ರಸ್ತೆಗಿಳಿದಿಲ್ಲ ಬಸ್
ತಮಿಳುನಾಡಿನ ಥೇಣಿಯಿಂದ ಬಂದಿದ್ದ ಕುಟುಂಬ ಆರ್ಟಿ ನಗರಕ್ಕೆ ಹೋಗಬೇಕಿತ್ತು. ಶಿವಾಜಿನಗರಕ್ಕೆ ಹೋಗಿ ಅಲ್ಲಿಂದ ಆರ್ಟಿ ನಗರ ಬಸ್ಗಾಗಿ ಕಾಯ್ತುದ್ರು ಹೋಗಬೇಕಿತ್ತು. ಆದ್ರೆ ಶಾಂತಿನಗರದಲ್ಲಿ ಶಿವಾಜಿನಗರಕ್ಕೆ ಬಸ್ ಇಲ್ಲದೆ ಆಟೋದಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ
ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಜನರಿಲ್ಲದೇ ಬಿಕೋ ಎನ್ನುತ್ತಿದೆ ಶಾಂತಿನಗರ ಬಸ್ ನಿಲ್ದಾಣ. ನಿತ್ಯ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಶಾಂತಿನಗರ ಬಸ್ ನಿಲ್ದಾಣ, ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಚಂದಾಪುರ, ಬನ್ನೇರುಘಟ್ಟ ಕಡೆಗೆ ಹೋಗುವ ಪ್ರಮುಖ ನಿಲ್ದಾಣವಾಗಿದೆ. ಹೀಗಾಗಿ ನಿತ್ಯ ನಿಲ್ಲಲು ಆಗದಂತೆ ತುಂಬಿರುತ್ತಿದ್ದ ಬಸ್ ಗಳು ಇಂದು ಮುಷ್ಕರ ಪ್ರಯುಕ್ತ ಬಸ್ ಸಂಚಾರದಲ್ಲಿ ಇಳಿಮುಖ ಕಂಡುಬರುತ್ತಿದೆ. ಈ ಕಾರಣದಿಂದ ಪ್ರಯಾಣಿಕರಿಲ್ಲದೆ ಬಸ್ ಕೂಡ ಖಾಲಿ ಹೋಗ್ತಿದೆ.
ಖಾಸಗಿ ಬಸ್ಗಳ ವ್ಯವಸ್ಥೆ
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ, ಸರ್ಕಾರ ಖಾಸಗಿ ವಾಹನಗಳ ಮೊರೆ ಹೋಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗುದೆ. ಮುಷ್ಕರದ ಆರಂಭದಲ್ಲಿ, ಖಾಸಗಿ ವಾಹನಗಳ ಬಳಕೆ ಬಗ್ಗೆ ಸಭೆ ನಡೆಯಿತು.
ಸಾರಿಗೆ ಇಲಾಖೆ, ಖಾಸಗಿ ಬಸ್ ಮಾಲೀಕರ ಅಸೋಸಿಯೇಷನ್ ಜೊತೆ ಸಭೆ ನಡೆಸಿದೆ. ಹತ್ತು ಸಾವಿರ ಖಾಸಗಿ ಬಸ್ ಓಡಿಸಲು ಸಾರಿಗೆ ಇಲಾಖೆ ಮನವಿ ಮಾಡಿದೆ. ಪರ್ಯಾಯ ವ್ಯವಸ್ಥೆಗಾಗಿ ಖಾಸಗಿ ಸಂಘಟನೆಗಳಿಂದಲೂ ಬೇಡಿಕೆ ವ್ಯಕ್ತವಾಗಿದೆ. “ನಾವು ಬಸ್ ಬಂದ್ ದಿನ ನಿಮ್ಮ ಪರವಾಗಿ ರಸ್ತೆಗಿಳಿಯ ಬೇಕಾದರೆ ಬೇಡಿಕೆ ಈಡೇರಿಸಿ,” ಎಂದು ಕೇಳಿಕೊಂಡಿದ್ದಾರೆ.
ಖಾಸಗಿ ಬಸ್ ಮಾಲೀಕರ ಸಂಘದ ಪ್ರಮುಖ ಬೇಡಿಕೆಗಳು ಏನು?
1. ಮುಷ್ಕರದ ಅವಧಿಯಲ್ಲಿ ತಮ್ಮ ಸೇವೆಗಳನ್ನು ವಿಸ್ತರಿಸುವ ಖಾಸಗಿ ಸ್ಟೇಜ್ ಕ್ಯಾರೇಜ್ ನಿರ್ವಾಹಕರಿಗೆ ಕನಿಷ್ಠ 15 ದಿನಗಳವರೆಗೆ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು.
2. ಸಮಾನ ಪರವಾನಗಿ ವಿತರಣೆ (60:40 ನೀತಿ): 60:40 ಪರವಾನಗಿ ಅನುಪಾತವನ್ನು ಜಾರಿಗೆ ತರಲು ತಕ್ಷಣದ ಕ್ರಮಗಳನ್ನು ಪ್ರಾರಂಭಿಸಬೇಕು, ಇದರಲ್ಲಿ 60% ಸ್ಟೇಜ್ ಕ್ಯಾರೇಜ್ ಪರವಾನಗಿಗಳನ್ನು ರಾಜ್ಯ ಸಾರಿಗೆ ಸಂಸ್ಥೆಗಳಿಗೆ (STUಗಳು) ಹಂಚಲಾಗುತ್ತದೆ ಮತ್ತು 40% ಖಾಸಗಿ ನಿರ್ವಾಹಕರಿಗೆ ಮೀಸಲಿಡಲಾಗುತ್ತದೆ.
3. ಡಿಜಿಟಲ್ ಸರ್ವೈಲೆನ್ಸ್ ಆಡಿಟ್ (DSA) ಪ್ರಕರಣಗಳ ಅಡಿಯಲ್ಲಿ ವಿಧಿಸಲಾದ ದಂಡದ 50% ವಿನಾಯಿತಿಯನ್ನು ಖಾಸಗಿ ನಿರ್ವಾಹಕರಿಗೆ ವಿಸ್ತರಿಸಬೇಕು.
4. ಅಧಿಸೂಚಿತ ಸಮಯ ಮತ್ತು ಮಾರ್ಗಗಳನ್ನು ಅನಧಿಕೃತವಾಗಿ ಅತಿಕ್ರಮಿಸುವ ಸರ್ಕಾರಿ (STU) ಬಸ್ಗಳ ವಿರುದ್ಧ ತಕ್ಷಣದ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು.