ಬಾಲಿವುಡ್ ಚಿತ್ರ ‘ಸೈಯಾರ’ 500 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ದೊಡ್ಡ ಯಶಸ್ಸು ಕಂಡಿದೆ. ಚಿತ್ರದ ನಟ-ನಟಿಯರು ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ಆದರೆ, ಈ ಚಿತ್ರ ಕೊರಿಯನ್ ಚಿತ್ರದ ರಿಮೇಕ್ ಎಂಬ ಆರೋಪ ಎದುರಿಸುತ್ತಿದೆ. ಬರಹಗಾರರು ಈ ಆರೋಪವನ್ನು ನಿರಾಕರಿಸಿದ್ದಾರೆ.
ಬಾಲಿವುಡ್ನ ಸೆನ್ಸೇಶನಲ್ ಡ್ರಾಮಾ ‘ಸೈಯಾರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂಪಾಯಿ ಕ್ಲಬ್ ಸೇರಿದೆ. ರೊಮ್ಯಾಂಟಿಕ್ ಡ್ರಾಮಾ ಚಿತ್ರವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ್ದು ಇದೇ ಮೊದಲು. ಈ ಚಿತ್ರದ ಮೂಲಕ ನಟ ಅಹಾನ್ ಪಾಂಡೆ ಹಾಗೂ ನಟಿ ಅನೀತ್ ಪಡ್ಡ ದೊಡ್ಡ ಗೆಲುವು ಕಂಡಿದ್ದಾರೆ. ರಾತ್ರೋ ರಾತ್ರಿ ಸ್ಟಾರ್ ಆಗಿದ್ದಾರೆ. ಈ ಸಿನಿಮಾ ಮೇಲೆ ಕೃತಿ ಚೌರ್ಯದ ಆರೋಪ ಎದುರಾಗಿದೆ. ಇದಕ್ಕೆ ಬರಹಗಾರ ಸಂಕಲ್ಪ್ ಪ್ರತಿಕ್ರಿಯೆ ನೀಡಿದ್ದಾರೆ.
‘ಸೈಯಾರ’ ಸಿನಿಮಾ ರಿಲೀಸ್ ಆದ ಬಳಿಕ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಾ ಬಂತು. ಈ ಸಿನಿಮಾ ರಿಲೀಸ್ ಆದ ಕೆಲವೇ ದಿನಗಳಲ್ಲಿ ಇದು ಕೊರಿಯಾ ಸಿನಿಮಾ ‘ಎ ಮೂಮೆಂಟ್ ಟು ರಿಮೆಂಬರ್’ ಚಿತ್ರದ ರಿಮೇಕ್ ಎಂದು ಹೇಳಲಾಯಿತು. ಎರಡೂ ಸಿನಿಮಾಗಳ ಕೆಲ ದೃಶ್ಯಗಳು ಹೋಲಿಕೆ ಇದ್ದವು. ಇದರಿಂದ ಕೃತಿ ಚೌರ್ಯದ ಆರೋಪ ಎದುರಾಗಿತ್ತು. ಆದರೆ, ಬಹರಗಾರರು ಈ ಬಗ್ಗೆ ಮನವಿ ಒಂದನ್ನು ಮಾಡಿಕೊಂಡಿದ್ದಾರೆ. ಇದನ್ನು ನಂಬ ಬೇಡಿ ಎಂದು ಕೋರಿದ್ದಾರೆ.
‘ಸೈಯಾರ ಹಾಗೂ ಎ ಮೂಮೆಂಟ್ ಟು ರಿಮೆಂಬರ್ ಎರಡೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಎರಡೂ ಚಿತ್ರವನ್ನು ವೀಕ್ಷಿಸಿ. ಆ ಬಳಿಕ ಇದು ಸ್ಫೂರ್ತಿ ಪಡೆದಿದ್ದೋ, ಕೃತಿ ಚೌರ್ಯವೋ ಅಥವಾ ಮೂಲ ಕಥೆಯೋ ಎಂಬುದನ್ನು ಹೇಳಿ. ನಿರ್ದೇಶಕ ಮೋಹಿತ್ ಸೂರಿ ಅವರನ್ನು ಹೀಗೆ ಒಮ್ಮೆ ಭೇಟಿ ಮಾಡಿದಾಗ ಹುಟ್ಟಿದ ಕಥೆ ಇದು’ ಎನ್ನುತ್ತಾರೆ ಸಂಕಲ್ಪ್.
‘ಸೈಯಾರ’ ಸಿನಿಮಾ ‘ಆಶಿಕಿ 2’ ಚಿತ್ರದ ಸೀಕ್ವೆಲ್ ರೀತಿ ಇದೆ ಎಂಬ ಅಭಿಪ್ರಾಯವನ್ನು ಅನೇಕರು ಹೊರಹಾಕಿದ್ದರು. ಆದರೆ, ಇದನ್ನು ಸಂಕಲ್ಪ್ ಒಪ್ಪಲು ರೆಡಿ ಇಲ್ಲ. ಈ ವಿಚಾರವನ್ನು ನೇರವಾಗಿ ಅಲ್ಲಗಳೆದಿದ್ದಾರೆ.
‘ಸೈಯಾರ’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 310 ಕೋಟಿ ರೂಪಾಯಿ ಗಳಿಕೆ ಮಾಡಿದೆ. 22ನೇ ದಿನ ಈ ಚಿತ್ರ 1.65 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬುದು ಚಿತ್ರದ ಹೆಚ್ಚುಗಾರಿಕೆ. ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂಪಾಯಿ ಸಂಗ್ರಹಿಸಿದೆ.
For More Updates Join our WhatsApp Group :