ಚಪ್ಪರದ ಅವರೆಕಾಯಿ ಅಥವಾ ಫ್ಲಾಟ್ ಬೀನ್ಸ್ ಬಗ್ಗೆ ನೀವು ಕೇಳಿರಬಹುದು, ಇದರಿಂದ ಬೇರೆ ಬೇರೆ ರೀತಿಯ ಅಡುಗೆಗಳನ್ನು ಕೂಡ ತಯಾರಿಸಿರಬಹುದು. ಆದರೆ ಇದನ್ನು ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಇದರ ನಿಯಮಿತ ಸೇವನೆಯಿಂದ ಅನೇಕ ರೀತಿಯ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಬೀನ್ಸ್ ಪೋಷಕಾಂಶಗಳ ಗಣಿಯಾಗಿದ್ದು ರಕ್ತಹೀನತೆಯ ಸಮಸ್ಯೆಯಿಂದ ಹಿಡಿದು ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುವವ ವರೆಗೆ ಅನೇಕ ರೀತಿಯಲ್ಲಿ ಉಪಯೋಗಕಾರಿಯಾಗಿದೆ. ಈ ತರಕಾರಿಯ ಮತ್ತಷ್ಟು ಪ್ರಯೋಜನಗಳನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಬಗೆಯ ತರಕಾರಿಗಳಲ್ಲಿ ಚಪ್ಪರದ ಅವರೆಕಾಯಿ ಅಥವಾ ಫ್ಲಾಟ್ ಬೀನ್ಸ್ ಕೂಡ ಒಂದು. ಇದನ್ನು ಹಲವಾರು ರೀತಿಯ ಅಡುಗೆಯಲ್ಲಿ ಬಳಕೆ ಮಾಡುತ್ತಾರೆ. ಇದು ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಕೂಡ ನೀಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಫ್ಲಾಟ್ ಬೀನ್ಸ್ ಅಥವಾ ಚಪ್ಪರದ ಅವರೆಕಾಯಿಯಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ. ಅವು ದೇಹ ಮತ್ತು ಆರೋಗ್ಯಕ್ಕೆ ಸಾಕಷ್ಟು ಪೋಷಣೆಯನ್ನು ಒದಗಿಸುತ್ತವೆ. ಈ ಋತುವಿನಲ್ಲಿ ಫ್ಲಾಟ್ ಬೀನ್ಸ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳೇನು? ಯಾವ ರೀತಿಯ ಸಮಸ್ಯೆಗೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮಧುಮೇಹವನ್ನು ನಿಯಂತ್ರಿಸುತ್ತದೆ
ಚಪ್ಪರದ ಅವರೆಕಾಯಿ ದೇಹಕ್ಕೆ ಹಲವಾರು ರೀತಿಯಲ್ಲಿ ಪೋಷಕಾಂಶಗಳನ್ನು ಒದಗಿಸುತ್ತದೆ. ಮಾತ್ರವಲ್ಲ ಅವು ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಸತು ಮುಂತಾದ ಖನಿಜಗಳನ್ನು ಕೂಡ ಹೊಂದಿರುತ್ತವೆ. ಅದಕ್ಕಾಗಿಯೇ ಈ ತರಕಾರಿಯನ್ನು ನಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಮಾತ್ರವಲ್ಲ ಫ್ಲಾಟ್ ಬೀನ್ಸ್ ಜೀರ್ಣಕಾರಿ ಸಮಸ್ಯೆಗಳು ಮತ್ತು ಅತಿಸಾರವನ್ನು ತಡೆಯಲು ಸಹಾಯ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಿಸುವುದರ ಜೊತೆಗೆ, ಅವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತವೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಚಪ್ಪರದ ಅವರೆಕಾಯಿಯಲ್ಲಿ ಕಂಡುಬರುವ ವಿಟಮಿನ್ ಬಿ1 ಮೆದುಳಿನ ಕಾರ್ಯಕ್ಕೆ ನಿರ್ಣಾಯಕವಾದ ಅಸೆಟೈಲ್ಕೋಲಿನ್ ಎಂಬ ನರ ಟ್ರಾನ್ಸ್ಮಿಟರ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ1 ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.
ಉಸಿರಾಟದ ಸಮಸ್ಯೆಯನ್ನು ತಡೆಯುತ್ತದೆ
ಚಪ್ಪರದ ಅವರೆಕಾಯಿ ಆರೋಗ್ಯಕ್ಕೆ ಅಗತ್ಯವಾದ ರಾಸಾಯನಿಕಗಳಾದ ಡೋಪಮೈನ್ ಮತ್ತು ಗ್ಯಾಲಕ್ಟೋಸ್ ಬಿಡುಗಡೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ವಯಸ್ಸಾಗುವಿಕೆಗೆ ಸಂಬಂಧಿಸಿದ ಅನೇಕ ರೋಗಗಳನ್ನು ತಡೆಯುತ್ತದೆ ಎಂದು ಕಂಡುಬಂದಿದೆ. ಜೊತೆಗೆ ಇದರಲ್ಲಿರುವ ಸೆಲೆನಿಯಮ್ ಮತ್ತು ಮ್ಯಾಂಗನೀಸ್ ನಂತಹ ಖನಿಜಗಳು ಉಸಿರಾಟದ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತೆ
ರಕ್ತಹೀನತೆ ಮತ್ತು ಮೂಳೆ ದೌರ್ಬಲ್ಯದಿಂದ ಬಳಲುತ್ತಿರುವವರಿಗೆ ಚಪ್ಪರದ ಅವರೆಕಾಯಿ ಬಹಳ ಒಳ್ಳೆಯದು, ವಿಶೇಷವಾಗಿ ಗರ್ಭಿಣಿ ಇದನ್ನು ತಪ್ಪದೆ ತಿನ್ನಬೇಕು. ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳಿಂದ ಸಮೃದ್ಧವಾಗಿರುವ ಚಪ್ಪರದ ಅವರೆಕಾಯಿ ಈ ಅಗತ್ಯವನ್ನು ಚೆನ್ನಾಗಿ ಪೂರೈಸುತ್ತದೆ. ಇದಲ್ಲದೆ, ಈ ತರಕಾರಿಯಲ್ಲಿರುವ ಅಮೈನೋ ಆಮ್ಲಗಳು ಹಾರ್ಮೋನುಗಳ ಸಮತೋಲನಕ್ಕೆ ಹೆಚ್ಚಿನ ಕೊಡುಗೆ ನೀಡುತ್ತವೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ.
ತೂಕ ಇಳಿಸಿಕೊಳ್ಳಲು ಸಹಕಾರಿ
ಚಪ್ಪರದ ಅವರೆಕಾಯಿಯಲ್ಲಿ ಥಯಾಮಿನ್, ವಿಟಮಿನ್ ಕೆ, ಬಿ6, ತಾಮ್ರ, ಸೆಲೆನಿಯಮ್, ಕಬ್ಬಿಣ, ನಿಯಾಸಿನ್, ರೈಬೋಫ್ಲಾವಿನ್, ವಿಟಮಿನ್ ಸಿ, ವಿಟಮಿನ್ ಎ, ಕೋಲೀನ್, ಸೋಡಿಯಂ, ಸೆಲೆನಿಯಮ್, ಸತು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ನೇರ ಪ್ರೋಟೀನ್ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹಸಿವು ಕಡಿಮೆಯಾಗುತ್ತದೆ. ಪರಿಣಾಮವಾಗಿ, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅವು ಉತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ.
For More Updates Join our WhatsApp Group :