ಋತುಬಂಧದ ವೇಳೆ ಕೂದಲು ಉದುರುತ್ತಾ? ಈ ಸಲಹೆ ತಪ್ಪದೇ ಪಾಲಿಸಿ.

ಋತುಬಂಧದ ವೇಳೆ ಕೂದಲು ಉದುರುತ್ತಾ? ಈ ಸಲಹೆ ತಪ್ಪದೇ ಪಾಲಿಸಿ.

ಋತುಚಕ್ರದಂತೆ ಋತುಬಂಧವು ಮಹಿಳೆಯರಲ್ಲಿ ಆಗುವ ಸಾಮಾನ್ಯ ಪ್ರಕ್ರಿಯೆಗಳಲ್ಲಿ ಒಂದು. ದೇಹದಲ್ಲಾಗುವ ಹಾರ್ಮೋನ್ ಬದಲಾವಣೆಯಿಂದ ಮಹಿಳೆಯೂ ಈ ವೇಳೆ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಾಳೆ. ಈ ಋತುಬಂಧದ ಹಾರ್ಮೋನುಗಳು ನಿಮ್ಮ ಕೂದಲು ಕಿರುಚೀಲಗಳ ಮೇಲೆ ಪರಿಣಾಮ ಬೀರುತ್ತವೆ, ಹೀಗಾಗಿ ಈ ಸಮಯದಲ್ಲಿ ಹೇರಳವಾಗಿ ಕೂದಲು ಉದುರುತ್ತದೆ. ಈ ಕೆಲವು ಸಲಹೆಗಳಿಂದ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು.

ಋತುಬಂಧ ಅಥವಾ ಮೆನೋಪಾಸ್ ಇದು ಮುಟ್ಟುವ ನಿಲ್ಲುವ ಪ್ರಕ್ರಿಯೆ. ಈ ನೈಸರ್ಗಿಕ ಪ್ರಕ್ರಿಯೆಯಲ್ಲಿ 45 ರಿಂದ 55 ವರ್ಷ ವಯಸ್ಸಿನಲ್ಲಿ ಸಂಭವಿಸುತ್ತದೆ. ಈ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ. ಸುಸ್ತು, ಕೂದಲು ಉದುರುವುದು, ಮುಟ್ಟಾದಾಗ ವಿಪರೀತ ರಕ್ತಸ್ರಾವ, ಪ್ರತಿ ತಿಂಗಳು ಮುಟ್ಟಾಗದಿರುವುದು, ಮಾನಸಿಕ ಕಿರಿಕಿರಿ ಹಾಗೂ ಮೂಡ್ ಸ್ವಿಂಗ್ ನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಮಹಿಳೆಯರು ಕೂದಲು ಉದುರುವ  ಸಮಸ್ಯೆಯನ್ನು ಎದುರಿಸುತ್ತಾರೆ. ಹಾರ್ಮೋನ್ ಬದಲಾವಣೆಯಿಂದ ಇದು ಸಹಜವಾಗಿದ್ರು ಮಹಿಳೆಯರು ಆತಂಕಕ್ಕೆ ಒಳಗಾಗುತ್ತದೆ. ಋತುಬಂಧದ ಸಮಯದಲ್ಲಿ ಕೂದಲು ಉದುರುವುದನ್ನು ತಡೆಯುವುದು ಹೇಗೆ? ಈ ರೀತಿ ಪ್ರಶ್ನೆಗಳು ಮೂಡಬಹುದು. ಇದಕ್ಕೆ ಈ ಕೆಲವು ಸರಳ ಸಲಹೆಗಳನ್ನು ಪಾಲಿಸುವ ಮೂಲಕ ಸ್ವಲ್ಪ ಮಟ್ಟಿಗೆ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಋತುಬಂಧದ ವೇಳೆ ಕೂದಲು ಉದುರುವುದು ಯಾಕೆ?

ಋತುಬಂಧದ ಸಮಯದಲ್ಲಿ ಅತಿಯಾಗಿ ಕೂದಲು ಉದುರುವುದು ಯಾಕೆ ಎನ್ನುವ ಪ್ರಶ್ನೆ ಕಾಡಬಹುದು. ಋತುಬಂಧದ ಸಮಯದಲ್ಲಿ ಈಸ್ಟ್ರೋಜನ್ ಮಟ್ಟ ಕಡಿಮೆಯಾದಾಗ ಇದು ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕೇಶರಾಶಿಯ ಬೆಳೆವಣಿಗೆ ಕುಂಠಿತವಾಗುತ್ತದೆ, ಕೂದಲು ಉದುರುವುದು, ತೆಳುವಾಗುವುದು ಹೀಗೆ ನಾನಾ ರೀತಿಯ ಸಮಸ್ಯೆಗಳು ಕಾಣಿಸುತ್ತದೆ.

ಕೂದಲಿನ ಉದುರುವಿಕೆ ತಡೆಯಲು ಇಲ್ಲಿದೆ ಸಿಂಪಲ್ ವಿಧಾನ

  •  ಕೂದಲು ಉದುರುತ್ತಿದ್ದರೆ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುವುದು ಮುಖ್ಯ. ಚರ್ಮದ ಸ್ಥಿತಿಸ್ಥಾಪಕತ್ವ, ಕೂದಲಿನ ಬೆಳವಣಿಗೆ ಹಾಗೂ ಜಲಸಂಚಯನವನ್ನು ಹೆಚ್ಚಿಸಬಹುದು. ಇದರಿಂದ ಅತಿಯಾದ ಕೂದಲು ಉದುರುವಿಕೆಯನ್ನು ತಪ್ಪಿಸಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
  •  ಒಮೆಗಾ-3 ಕೊಬ್ಬಿನಾಮ್ಲಗಳ ಪೂರಿತ ಆಹಾರ ಸೇವನೆಯೂ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ನೆತ್ತಿ ಮತ್ತು ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮಾಂಸಹಾರಿಗಳಾಗಿದ್ದರೆ ಮೀನನ್ನು ಹೆಚ್ಚು ಸೇವಿಸುವುದು ಉತ್ತಮ.
  • ವಿಟಮಿನ್ ಬಿ7 ಕೂದಲು, ಚರ್ಮ ಮತ್ತು ಉಗುರುಗಳ ಆರೋಗ್ಯಕ್ಕೆ ಅತ್ಯಗತ್ಯ. ಇದನ್ನು ಬಯೋಟಿನ್ ಎಂದು ಕರೆಯುತ್ತಾರೆ. ಈ ವಿಟಮಿನ್ ಬಿ7 ಕೆರಾಟಿನ್ ಉತ್ಪಾದನೆಯನ್ನು ಉತ್ತೇಜಿಸಿ, ಕೂದಲಿನ ಹೊಳಪು ಹೆಚ್ಚಿಸಿ ಬೆಳೆವಣಿಗೆಯನ್ನು ಉತ್ತೇಜಿಸುತ್ತದೆ. ಬಯೋಟಿನ್ ಹೊಂದಿರುವ ಆಹಾರವನ್ನು ಸೇವಿಸಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *