ಬೆಂಗಳೂರು : ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ (Yellow Line Metro) ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಅದೇ ರೀತಿಯಾಗಿ ಆರ್.ವಿ.ರಸ್ತೆ ಟು ಬೊಮ್ಮಸಂದ್ರ ಮಾರ್ಗದಲ್ಲಿ ಇಂದಿನಿಂದ ಫೀಡರ್ ಬಸ್‌ಗಳು (BMTC feeder bus) ರಸ್ತೆಗಳಿಗಿಯಲಿವೆ. ಆ ಮೂಲಕ ಬಿಎಂಟಿಸಿ ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ.
ಈ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಸುಗಮ ಸಂಪರ್ಕವನ್ನು ಒದಗಿಸಲು, ಬಿಎಂಟಿಸಿ ಇಂದಿನಿಂದ ಫೀಡರ್ ಬಸ್ ಸೇವೆಯನ್ನು ಆರಂಭಿಸಿದೆ. ಬೊಮ್ಮಸಂದ್ರದಿಂದ ಹೆಬ್ಬಗೋಡಿ ಹಾಗೂ ಕೋನಪ್ಪನ ಅಗ್ರಹಾರದಿಂದ ಎಲೆಕ್ಟ್ರಾನಿಕ್ ಮಾರ್ಗಗಳಲ್ಲಿ ಫೀಡರ್ ಬಸ್‌ಗಳು ಸಂಚರಿಸಲಿವೆ.
ಎಲೆಕ್ಟ್ರಾನಿಕ್ ಸಿಟಿಯ ವಿಪ್ರೋ ಗೇಟ್‌ನಿಂದ ಬೆಳಗ್ಗೆ 8.20 ರಿಂದ ಸಂಜೆ 4.55ರವರೆಗೆ ನಾಲ್ಕು ಬಸ್‌ಗಳು 32 ರೌಂಡ್ಸ್ಗಳಲ್ಲಿ ಸಂಚರಿಸಲಿವೆ. ಎಲೆಕ್ಟ್ರಾನಿಕ್ ಸಿಟಿಯ ವಿಪ್ರೋ ಗೇಟ್‌ನಿಂದ ಕೋನಪ್ಪನ ಅಗ್ರಹಾರ, ಹೊಸ ರೋಡ್, ಕಸವನಹಳ್ಳಿ, ಕೈಕೊಂಡ್ರಹಳ್ಳಿ ಮಾರ್ಗದ ಮೂಲಕ ದೊಡ್ಡಕನ್ನೆಲ್ಲಿ ಬಸ್ ನಿಲ್ದಾಣದವರೆಗೆ ಸಂಚರಿಸಲಿವೆ.
ಕೋನಪ್ಪನ ಅಗ್ರಹಾರದಿಂದ ಎಲೆಕ್ಟ್ರಾನಿಕ್ ಸಿಟಿ, ಹುಸ್ಕೂರು ಗೇಟ್, ಚಿಂತಲ ಮಡಿವಾಳ, ಮುತ್ತಾನಲ್ಲೂರು ವೃತ್ತ, ತಿಮ್ಮಸಂದ್ರ ವೃತ್ತ ಮತ್ತು ಚಂದಾಪುರ ವೃತ್ತ ಮಾರ್ಗದಲ್ಲಿ ನಾಲ್ಕು ಬಸ್‌ಗಳು 20 ರೌಂಡ್‌ಗಳಲ್ಲಿ ಬೆಳಗ್ಗೆ 8:40 ರಿಂದ ಸಂಜೆ 4:50 ರವರೆಗೆ ಕಾರ್ಯನಿರ್ವಹಿಸಲಿವೆ.
ಬೊಮ್ಮಸಂದ್ರದಿಂದ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ಗೆ, ತಿರುಪಾಳ್ಯ ವೃತ್ತ, ಎಸ್-ಮಾಂಡೋ-3, ಮತ್ತು ಹೆಬ್ಬಗೋಡಿ ಮಾರ್ಗದಲ್ಲಿ 2 ಬಸ್‌ಗಳು 20 ರೌಂಡ್‌ಗಳಲ್ಲಿ ಸಂಚರಿಸಲಿವೆ.
ಯೆಲ್ಲೋ ಲೈನ್‌ನಲ್ಲಿ ಆರ್‌ವಿ ರಸ್ತೆ TO ಬೊಮ್ಮಸಂದ್ರ ನಡುವೆ ಸಂಚಾರ ಮೆಟ್ರೋ ಸಂಚರಿಸಲಿದೆ. ಸಂಚಾರ ಅವಧಿ 35 ರಿಂದ 45 ನಿಮಿಷ ಇರಲಿದೆ. ಒಟ್ಟು 16 ನಿಲ್ದಾಣಗಳು 3 ಮೆಟ್ರೋ ಲೈನ್‌ಗೆ ಸಂಪರ್ಕ ಕಲ್ಪಿಸುತ್ತೆ. ಹಸಿರು, ಗುಲಾಬಿ, ನೀಲಿ ಮಾರ್ಗವನ್ನು ಯೆಲ್ಲೋ ಲೈನ್ ಸಂಪರ್ಕಿಸುತ್ತೆ. ಆರಂಭದಲ್ಲಿ ಪ್ರತೀ 30 ನಿಮಿಷಕ್ಕೊಮ್ಮೆ ರೈಲು ಸಂಚರಿಸಲಿದೆ. ಕನಿಷ್ಠ ದರ 10 ರೂಪಾಯಿಂದ ಗರಿಷ್ಠ 60 ರೂಪಾಯಿವರೆಗೆ ಟಿಕೆಟ್ ದರವಿದೆ. ಬರೋಬ್ಬರಿ 8ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಿದ್ದು, ಸಿಲ್ಕ್‌ಬೋರ್ಡ್ ಟ್ರಾಫಿಕ್ ಸಮಸ್ಯೆ ಬಹುಮಟ್ಟಿಗೆ ನಿವಾರಣೆಯಾಗಲಿದೆ.