ರ‍್ಯಾಂಗಿಗ್‌ ಭೀಕರ ಪರಿಣಾಮ | ವಿದ್ಯಾರ್ಥಿನಿ ಆತ್ಮ*ತ್ಯೆ | College Ragging Tragedy

College Ragging Tragedy

ಗುಳೇದಗುಡ್ಡ: ಆಕೆ ಪ್ರತಿಭಾವಂತ ವಿದ್ಯಾರ್ಥಿನಿ, ಓದಿ ದೊಡ್ಡ ಅಧಿಕಾರಿ ಆಗಬೇಕೆಂದು ಕನಸು ಕಂಡಿದ್ದಳು ಆದರೆ ರ‍್ಯಾಗಿಂಗ್ ಎಂಬ ಭೂತ ಅವಳ ಕನಸನ್ನು, ಅವಳ ಜೀವವನ್ನೂ ಬಲಿ ಪಡೆದುಬಿಟ್ಟಿತು. ಕಾಲೇಜಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ರ‍್ಯಾಂಗಿಗ್‌ಗೆ ಬಲಿಯಾದವರ ಪಟ್ಟಿಯಲ್ಲಿ ಅಂಜಲಿ ಹೆಸರೂ ಸೇರಿದ್ದು ದುರ್ದೈವದ ಸಂಗತಿ.

ಪಟ್ಟಣದ ಪಿಇಟಿ ಟ್ರಸ್ಟ್ನ ರಾಠಿ ಹಾಗೂ ಭಂಡಾರಿ ಕಾಲೇಜಿನ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ ಅಂಜಲಿ ಸಂಗಪ್ಪ ಮುಂಡಾಸ ಸಹಪಾಠಿಗಳ ಮಾಡಿದ ರ‍್ಯಾಗಿಂಗ್‌ಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ವಿದ್ಯಾರ್ಥಿನಿ. ಅಂಜಲಿಗೆ ತಂದೆ ಇಲ್ಲ, ತಾಯಿಯದು ಅಡುಗೆ ಸಹಾಯಕ ಕೆಲಸ, ಆದರೆ ಓದಿ ಅಧಿಕಾರಿಯಾಗಬೇಕೆಂದು ಕನಸು ಹೊತ್ತಿದ್ದವಳನ್ನು ರ‍್ಯಾಗಿಂಗ್ ಬಲಿ ತಗೆದುಕೊಂಡಿದೆ.

ಘಟನೆಯ ಹಿನ್ನಲೆ : ಪಟ್ಟಣದ ಭಂಡಾರಿ ಕಾಲೇಜಿನಲ್ಲಿ ಅಂತಿಮ ಬಿಎ ವಿದ್ಯಾರ್ಥಿನಿ ಅಂಜಲಿ ಮುಂಡಾಸ ಅವಳನ್ನು ಶನಿವಾರ ಸಹಪಾಠಿಗಳಾದ ವರ್ಷಾ ಜಮ್ಮನಕಟ್ಟಿ, ಪ್ರದೀಪ ಅಳಗುಂದಿ ಹಾಗೂ ಇತರರು ಸೇರಿ ಕಾಲೇಜಿನ ರೂಮ್ ನಂ ೨೦ ರಲ್ಲಿ ಕರೆದೊಯ್ದು ರ‍್ಯಾಗಿಂಗ್ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡಿದ್ದು, ಇದರಿಂದ ಅಳುತ್ತಾ ಮನೆಗೆ ಬಂದ ಅಂಜಲಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಕಾರಣರಾದವರು ಇಬ್ಬರ ಹೆಸರು ಹಾಗೂ ಇನ್ನಿತರ ಸ್ನೇಹಿತರು, ಇಬ್ಬರ ಮೊಬೈಲ್ ಸಂಖ್ಯೆಯನ್ನು ಬರೆದಿದ್ದು ಇವರನ್ನು ಸುಮ್ಮನೆ ಬಿಡಬಾರದು ಎಂದು ಬರೆದಿದ್ದು, ಈ ಡೆತ್‌ನೋಟ್ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.  

ಕುಟುಂಬಸ್ಥರ ಆಕ್ರಂದನ : ಮಗಳ ಸಾವಿಗೆ ಕಾಲೇಜಿನವರ ನಿರ್ಲಕ್ಷö್ಯವೇ ಕಾರಣ. ನನ್ನ ಮಗಳನ್ನು ನನಗೆ ವಾಪಸ್ಸು ಕೊಡ್ರಿ….. ನನ್ನ ಮಗಳ ಸಾವಿಗೆ ಕಾರಣರಾದವನ್ನು ಬೀಡಬೇಡಿ ಎಂದು ಕಾಲೇಜಿನ ಆಡಳಿತ ಮಂಡಳಿಯ ಎದರು ತಾಯಿ ರಾಜೇಶ್ವರಿ ಮುಂಡಾಸ ಕಣ್ಣೀರಿಟ್ಟರೆ, ಇಂದು ರಾಖಿ ಹಬ್ಬ, ನನ್ನ ಸಹೋದರಿ ನನಗೆ ರಾಖಿ ಕಟ್ಟಬೇಕೆಂದಿದ್ದಳು, ಆದರೆ ಅದೇ ದಿನ ಅವಳನ್ನು ದಹನ ಮಾಡುವ ಸ್ಥಿತಿ ಬಂದಿದೆ ಎಂದು ಸಹೋದರ ಶಿವಕುಮಾರ ಅಳುತ್ತಿದ್ದದ್ದು ಮನಕಲುವಂತಿತ್ತು. 

ಶನಿವಾರ ಬೆಳಿಗ್ಗೆ ಪೋಷಕರು ಹಾಗೂ ಎಬಿವಿಪಿ ಕಾರ್ಯಕರ್ತರು ಕಾಲೇಜು ಆಡಳಿತ ಮಂಡಳಿ ಕಚೇರಿಗೆ ಘೇರಾವು ಹಾಕಿ, ಆಡಳಿತ ಮಂಡಳಿ ಹಾಗೂ ಪ್ರಿನ್ಸಿಪಾಲ್‌ರನ್ನು ತರಾಟೆ ತೆಗೆದುಕೊಂಡರು. ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಇಂತಹ ಘಟನೆಯಿಂದ ಮೃತಪಟ್ಟರೂ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಲಿಲ್ಲ, ಕಾಲೇಜಿಗೆ ರಜೆ ನೀಡಿಲ್ಲ.. ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಕಾಲೇಜಿನ ಆಡಳಿತ ಮಂಡಳಿಯೇ ಇದಕ್ಕೆ ಹೊಣೆ. ಒಂದು ಕಾಲೇಜಿನಲ್ಲಿ ರ‍್ಯಾಗಿಂಗ್ ನಡೆದರೂ ನಮಗೆ ಗೊತ್ತೇ ಇಲ್ಲ ಪ್ರಿನ್ಸಿಪಾಲರು, ಆಡಳಿತಮಂಡಳಿಯವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಮೃತ ವಿದ್ಯಾರ್ಥಿನಿಗೆ ನ್ಯಾಯದೊರಕಬೇಕು.. ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *