ಕಾಂಗ್ರೆಸ್‌ನಲ್ಲಿ ಸತ್ಯ ಹೇಳುವವರಿಗೆ ಸ್ಥಳವಿಲ್ಲ: ಬಸವರಾಜ್ ಬೊಮ್ಮಾಯಿ

Basavaraj Bommai

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸತ್ಯಕ್ಕೆ ಸ್ಥಳವಿಲ್ಲ. ಸತ್ಯ ಹೇಳುವವರಿಗೂ ಸ್ಥಳವಿಲ್ಲ. ಕಾಂಗ್ರೆಸ್‌ನ ಮತಕ್ಕೆ ಓಲೈಕೆ ರಾಜಕಾರಣದ ಜೊತೆಗೆ ಆಂತರಿಕವಾಗಿ ಸಂವಿಧಾನದ ವಿರೋಧ ನಡೆದರೂ ಹೈಕಮಾಂಡ್ ವಿರುದ್ದ ಧ್ವನಿ ಎತ್ತುವ ಸ್ವತಂತ್ರ ಇಲ್ಲ. ಗುಲಾಮರಂತೆ ನಡೆಸಿಕೊಳ್ಳುವ ಮನಸ್ಥಿತಿ ಮೂರನೇ ತಲೆಮಾರಿನ ಕಾಂಗ್ರೆಸ್ ನಾಯಕರಿಗೆ ಇನ್ನೂ ಹೋಗಿಲ್ಲ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ಅವರು, ಕೆ.ಎನ್.ರಾಜಣ್ಣ ಒಬ್ಬ ಹಿರಿಯ ಅನುಭವಿ ರಾಜಕಾರಣಿ. ತಮ್ಮ ಇಲಾಖೆಯಲ್ಲಿ ದಕ್ಷತೆಯಿಂದ ಕೆಲಸ ಮಾಡಿದ್ದರು. ಎಸ್ಟಿ ಸಮುದಾಯದ ಹಿರಿಯ ನಾಯಕರಾಗಿರುವ ಅವರಿಗೆ ರಾಜೀನಾಮೆ ಕೊಡಲು ಅವಕಾಶ ಕೊಡದಿರುವುದು ಅವರ ಅನುಭವ, ದಕ್ಷತೆ, ಎಸ್ಟಿ ಜನಾಂಗಕ್ಕೆ ಮಾಡಿರುವ ಅವಮಾನ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂದು ರೀತಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಿನ್ನಡೆ, ಮುಂದಿನ ದಿನಗಳಲ್ಲಿ ಎಚ್ಚರಿಕೆ ಗಂಟೆ. ಇದರಿಂದ ರಾಜಣ್ಣ ಹೇಳಿದಂತೆ ಕಾಂಗ್ರೆಸ್‌ನಲ್ಲಿ ಕ್ರಾಂತಿ ಪ್ರಾರಂಭ ಆಗಿದೆ. ಏನೇ ಆದರೂ ಮತ ಸೇರ್ಪಡೆ ಕಾಂಗ್ರೆಸ್ ಆಡಳಿತದಲ್ಲಿ ಆಗಿದೆ ಎನ್ನುವುದು ಕಟು ಸತ್ಯ. ಅದನ್ನು ಅಳಿಸಲು ಸಾಧ್ಯವಿಲ್ಲ. ಸತ್ಯದ ಕನ್ನಡಿಯಂತೆ ರಾಹುಲ್ ಗಾಂಧಿಗೆ ಹೇಳಿರುದುವುದಕ್ಕೆ ರಾಜಣ್ಣ ಅವರನ್ನು ಮೆಚ್ಚಬೇಕು. ಆದರೆ ಪ್ರಮಾಣಿಕರಿಗೆ ಕಾಂಗ್ರೆಸ್‌ನಲ್ಲಿ ಸ್ಥಳ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *