ಮಳೆಗಾಲದ ಸಮಯದಲ್ಲಿ, ಅನೇಕರು ತುಂಬಾ ಕಡಿಮೆ ನೀರು ಕುಡಿಯುತ್ತಾರೆ. ಆದರೆ ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ, ಮಳೆಗಾಲದ ಸಮಯದಲ್ಲಿ ನೀರನ್ನು ಕಡಿಮೆ ಕುಡಿಯುವುದರಿಂದ ಉಂಟಾಗುವ ತೊಂದರೆಗಳೇನು? ದೇಹಕ್ಕೆ ಯಾವ ರೀತಿಯ ತೊಂದರೆಯಾಗುತ್ತೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ. ನೀವು ಕೂಡ ಇಲ್ಲಿ ನೀಡಿರುವಂತಹ ಸಲಹೆ ಪಾಲಿಸಿ ಆರೋಗ್ಯವಾಗಿರಿ.
ಮಳೆಗಾಲವಾದ್ದರಿಂದ ಬಾಯಾರಿಕೆ ಆಗುವ ಪ್ರಮಾಣ ಬಹಳ ಕಡಿಮೆ. ಹಾಗಾಗಿ ಅನೇಕರು ನೀರು ಕುಡಿಯುವುದನ್ನೇ ಕಡಿಮೆ ಮಾಡಿರುತ್ತಾರೆ. ಅಂತವರಲ್ಲಿ ನೀವು ಒಬ್ಬರಾಗಿದ್ದರೆ ಕೆಲವು ವಿಷಯಗಳನ್ನು ತಪ್ಪದೆ ತಿಳಿದುಕೊಳ್ಳಬೇಕು. ಬಾಯಾರಿಕೆ ಆಗದೆಯೇ ನೀರು ಕುಡಿಯುವ ಅಭ್ಯಾಸ ಇಲ್ಲದಿದ್ದರೆ ಮಳೆಗಾಲದಲ್ಲಿ ನೀರು ಕುಡಿಯುವ ಪ್ರಮಾಣವೇ ಕಡಿಮೆಯಾಗಬಹುದು. ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ, ಮಳೆಗಾಲದ ಸಮಯದಲ್ಲಿ ನೀರನ್ನು ಕಡಿಮೆ ಕುಡಿಯುವುದರಿಂದ ಉಂಟಾಗುವ ತೊಂದರೆಗಳೇನು? ದೇಹಕ್ಕೆ ಯಾವ ರೀತಿಯ ತೊಂದರೆಯಾಗುತ್ತೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮಲಬದ್ಧತೆಯ ಸಮಸ್ಯೆ
ದೇಹದಲ್ಲಿ ಸಾಕಷ್ಟು ನೀರಿನಾಂಶ ಇಲ್ಲದಿದ್ದಾಗ, ಮಲಬದ್ಧತೆಯಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಸರಿಯಾದ ರೀತಿಯ ಔಷದವನ್ನು ಸಮಯಕ್ಕೆ ತೆಗೆದುಕೊಳ್ಳದಿದ್ದರೆ, ಮೂಲವ್ಯಾಧಿಯಂತಹ ಕಾಯಿಲೆಗಳು ಉಂಟಾಗಬಹುದು. ಮಾತ್ರವಲ್ಲ ಮಳೆಗಾಲದಲ್ಲಿ ಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಉಂಟಾಗಬಹುದು.
ದೇಹದ ಶಕ್ತಿ ಕ್ಷೀಣಿಸಬಹುದು
ಪ್ರತಿನಿತ್ಯ ಉತ್ಸಾಹದಿಂದ ಕೆಲಸ ಮಾಡುವುದಕ್ಕೆ, ದೇಹದಲ್ಲಿ ಶಕ್ತಿ ಇರಬೇಕಾಗುತ್ತದೆ. ಇದಕ್ಕಾಗಿ, ನಿಯಮಿತವಾಗಿ ನೀರು ಕುಡಿಯುವುದು ಅತ್ಯಗತ್ಯ. ಇಲ್ಲದಿದ್ದರೆ, ಸಣ್ಣ ಸಣ್ಣ ಕೆಲಸಗಳನ್ನು ಮಾಡಿದ ನಂತರವೂ ಬೇಗ ಆಯಾಸವಾಗುತ್ತದೆ.
ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು
ಸಾಮಾನ್ಯವಾಗಿ ಮೂತ್ರಪಿಂಡಗಳು ನಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಆದರೆ ದೇಹದಲ್ಲಿ ನೀರಿನ ಕೊರತೆಯಾದರೆ ಮೂತ್ರಪಿಂಡದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅನೇಕರು ತಿಳಿಯದೆ ಕಡಿಮೆ ನೀರು ಕುಡಿಯುವ ಮೂಲಕ ಮೂತ್ರಪಿಂಡದ ಸಮಸ್ಯೆಗಳನ್ನು ಆಹ್ವಾನಿಸುತ್ತಾರೆ.
ಚರ್ಮ ಸಂಬಂಧಿತ ಸಮಸ್ಯೆ ಹೆಚ್ಚಾಗುತ್ತದೆ
ಆರೋಗ್ಯ ತಜ್ಞರ ಪ್ರಕಾರ, ದೇಹದಲ್ಲಿ ನೀರಿನ ಮಟ್ಟ ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿದ್ದಾಗ ಚರ್ಮ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಮುಖದ ಆಕರ್ಷಣೆ ಕೂಡ ಕಡಿಮೆಯಾಗುತ್ತದೆ. ಇದರ ಜೊತೆಗೆ, ಮೊಡವೆ ಮತ್ತು ಇತರ ಚರ್ಮ ಸಂಬಂಧಿತ ಸಮಸ್ಯೆಗಳು ಸಹ ಪ್ರಾರಂಭವಾಗುತ್ತವೆ. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವ ಅಭ್ಯಾಸ ಚರ್ಮವನ್ನು ಹೈಡ್ರೀಕರಿಸುತ್ತದೆ. ಅದೇ ರೀತಿ, ಇದು ಶುಷ್ಕತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಮೂತ್ರದ ಸೋಂಕು ಹೆಚ್ಚಾಗುತ್ತದೆ
ದೇಹದಲ್ಲಿ ನೀರಿನ ಮಟ್ಟ ಕಡಿಮೆಯಾದರೆ ಮೂತ್ರದಲ್ಲಿ ಸೋಂಕು ಉಂಟಾಗುತ್ತದೆ. ತಜ್ಞರ ಪ್ರಕಾರ, ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯಬೇಕು. ಅದಕ್ಕಾಗಿಯೇ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕೆಂದು ತಜ್ಞರು ಸಲಹೆ ನೀಡುತ್ತಾರೆ.
For More Updates Join our WhatsApp Group :