ರಾತ್ರಿಯಲ್ಲಿ ಹಲ್ಲುಜ್ಜುವುದಕ್ಕೂ, ಹೃದಯಾಘಾತಕ್ಕೂ ಸಂಬಂಧವಿದೆಯೇ? ನೀವು ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ.

ರಾತ್ರಿಯಲ್ಲಿ ಹಲ್ಲುಜ್ಜುವುದಕ್ಕೂ, ಹೃದಯಾಘಾತಕ್ಕೂ ಸಂಬಂಧವಿದೆಯೇ? ನೀವು ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ.

ಹಲ್ಲುಜ್ಜುವುದು ದಿನನಿತ್ಯ ನಾವು ಮಾಡುವಂತಹ ಕೆಲಸಗಳಲ್ಲಿ ಒಂದು. ಆದರೆ ಕೆಲವರು ಬೆಳಿಗ್ಗೆ ಹಲ್ಲುಜ್ಜಿದರೆ ಸಾಕು, ರಾತ್ರಿ ಮತ್ತೆ ಹಲ್ಲುಜ್ಜಬೇಕಾದ ಅವಶ್ಯಕತೆ ಇಲ್ಲ ಎಂದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಬಾಯಿಯ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಒಂದು ಸಲ ಹಲ್ಲನ್ನು ಉಜ್ಜಿದರೆ ಸಾಕು ಎಂದುಕೊಂಡಿರುತ್ತಾರೆ. ಇದೊಂದು ಸಾಮಾನ್ಯ ನಂಬಿಕೆ. ಇನ್ನು ಈ ಚಿಂತನೆ ನಿನ್ನೆ ಮೊನ್ನೆಯದಲ್ಲ. ಇದು ಬಾಲ್ಯದದಿಂದ ಬಂದಿರುವಂತದ್ದು. ಹಾಗಾಗಿ ಮಲಗುವ ಮುನ್ನ ಹಲ್ಲುಜ್ಜುವುದನ್ನು ಹಲವರು ತಪ್ಪಿಸುತ್ತಾರೆ. ನಮಗೆ ಇದೊಂದು ಸಣ್ಣ ಅಭ್ಯಾಸದಂತೆ ಕಾಣಿಸಬಹುದು ಆದರೆ ಇತ್ತೀಚಿಗೆ ಜಪಾನಿ ಅಧ್ಯಯನವೊಂದು ಇದು ಹೃದಯಾಘಾತಕ್ಕೆ  ಕಾರಣವಾಗುವ ಸಾಧ್ಯತೆ ಸೇರಿದಂತೆ ದೊಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಸೂಚಿಸಿದೆ.

ರಾತ್ರಿ ಹಲ್ಲುಜ್ಜದಿರುವುದು ಹೃದಯಾಘಾತಕ್ಕೆ ಹೇಗೆ ಕಾರಣವಾಗುತ್ತೆ?

ಲಾಕ್ಹಾರ್ಟ್ ಮತ್ತು ಇತರರು ಸೇರಿ ಒಂದು ಅಧ್ಯಯನ ನಡೆಸಿದ್ದು, ಹೃದಯ ಸಂಬಂಧಿ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾದಂತಹ 1,500 ಕ್ಕೂ ಹೆಚ್ಚು ರೋಗಿಗಳನ್ನು ಪರೀಕ್ಷಿಸಿದ್ದಾರೆ. ಆ ಅಧ್ಯಯನದ ಪ್ರಕಾರ, ಬೆಳಿಗ್ಗೆ ಮತ್ತು ರಾತ್ರಿ ಹಲ್ಲುಜ್ಜುವವರಿಗಿಂತ ಬೆಳಿಗ್ಗೆ ಮಾತ್ರ ಹಲ್ಲುಜ್ಜುವವರಿಗೆ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಹೆಚ್ಚು ಎಂಬುದು ತಿಳಿದು ಬಂದಿದೆ. ಬೆಳಿಗ್ಗೆ ಒಂದೇ ಬಾರಿ ಹಲ್ಲನ್ನು ಉಜ್ಜುವ ಅಭ್ಯಾಸ ಒಟ್ಟಾರೆ ಬಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿ ದೀರ್ಘಕಾಲಾದ ವರೆಗೆ ನಿರ್ಲಕ್ಷ್ಯ ಮಾಡಿದಾಗ ಹಾನಿಕಾರಕ ಬ್ಯಾಕ್ಟೀರಿಯಾಗಳ ಶೇಖರಣೆಯಾಗುತ್ತದೆ, ಇದು ಕಾಲಾನಂತರದಲ್ಲಿ ಹೃದಯ ಸೇರಿದಂತೆ ದೇಹದಾದ್ಯಂತ ಉರಿಯೂತವನ್ನು ಹೆಚ್ಚಿಸಬಹುದು ಎಂಬುದನ್ನು ಅಧ್ಯಯನ ತಿಳಿಸಿಕೊಟ್ಟಿದೆ. ಬಾಯಿಯ ನೈರ್ಮಲ್ಯದ ಕೊರತೆಯಿರುವವರಲ್ಲಿ ರಕ್ತದಲ್ಲಿ ಬ್ಯಾಕ್ಟೀರಿಯಾ ಶೇಖರಣೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ರೀತಿಯ ಬ್ಯಾಕ್ಟೀರಿಯಾಗಳು ಕೇವಲ ಅಡ್ಡಪರಿಣಾಮಕ್ಕಿಂತ ಹೆಚ್ಚಿನ ಪರಿಣಾಮವನ್ನು ಉಂಟು ಮಾಡುತ್ತದೆ. ದುರ್ಬಲ ವ್ಯಕ್ತಿಗಳಲ್ಲಿ ಗಂಭೀರವಾದ ಹೃದಯ ಸಂಬಂಧಿ ಘಟನೆಗಳಿಗೆ ಪ್ರಚೋದಕ ಅಂಶವಾಗುತ್ತದೆ.

ಬೆಳಿಗ್ಗೆ ಹಲ್ಲುಜ್ಜುವುದಕ್ಕಿಂತ ರಾತ್ರಿಯಲ್ಲಿ ಹಲ್ಲುಜ್ಜುವುದೇ ಹೆಚ್ಚು ಮುಖ್ಯ ಏಕೆ?

ಸಾಮಾನ್ಯವಾಗಿ ಬೆಳಿಗ್ಗೆ ಹಲ್ಲುಜ್ಜುವ ಅಭ್ಯಾಸ ಒಳ್ಳೆಯದಲ್ಲ ಎಂದಲ್ಲ. ಇದು ರಾತ್ರಿ ಸಮಯದಲ್ಲಿ ಶೇಖರಣೆಯಾದಂತಹ ಬ್ಯಾಕ್ಟೀರಿಯಾವನ್ನು ನಾಶ ಮಾಡಲು ಸಹಕಾರಿಯಾಗಿರುತ್ತದೆ. ಆದರೆ ರಾತ್ರಿಯಲ್ಲಿ ಹಲ್ಲುಜ್ಜುವುದು ಅವಶ್ಯಕ. ಇಲ್ಲವಾದಲ್ಲಿ ರಾತ್ರಿ ಸಮಯದಲ್ಲಿ ಬಾಯಿ ಒಣಗಿದಾಗ ಬ್ಯಾಕ್ಟೀರಿಯಾ ನಾಶ ಮಾಡಲು ಸಹಾಯ ಮಾಡುವ ಲಾಲಾರಸದ ಹರಿವು ಕಡಿಮೆಯಾಗುತ್ತದೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ. ರಾತ್ರಿ ಹಲ್ಲನ್ನು ಉಜ್ಜದೆ ಮಲಗಿದರೆ ಆಹಾರ ಕಣಗಳು, ಸಕ್ಕರೆ ಮತ್ತು ಬ್ಯಾಕ್ಟೀರಿಯಾಗಳು 7-  8 ಗಂಟೆಗಳ ಕಾಲ ಹಾಗೆಯೇ ಇರುತ್ತದೆ. ಇದು ಒಸಡು ಸೋಂಕುಗಳು ಅಥವಾ ಹಲ್ಲಿನ ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾಗಬಹುದು.

ರಾತ್ರಿಯಲ್ಲಿ ಹಲ್ಲುಜ್ಜುವುದು ಹೃದಯ ಕಾಯಿಲೆಯ ವಿರುದ್ಧ ದೊಡ್ಡ ಅಸ್ತ್ರವಾಗದಿರಬಹುದು ಆದರೆ ಮುಂದೊಂದು ದಿನ ಬರುವ ಕಾಯಿಲೆಯನ್ನು ತಡೆಯುವ ಶಕ್ತಿ ಇರುತ್ತದೆ. ವಯಸ್ಸು, ಹೃದಯ ಸ್ಥಿತಿ ಮತ್ತು ಆಸ್ಪತ್ರೆಯ ಸೆಟ್ಟಿಂಗ್ಗಳಂತಹ ಅಂಶಗಳು ಫಲಿತಾಂಶದಲ್ಲಿ ದೊಡ್ಡ ಪಾತ್ರ ವಹಿಸುತ್ತವೆ. ಆದರೆ ಈ ಸಂಶೋಧನೆಯಿಂದ ತಿಳಿದು ಬಂದ ಅಂಶವೇನೆಂದರೆ ರಾತ್ರಿ ಹಲ್ಲನ್ನು ಉಜ್ಜುವುದಕ್ಕೂ ನಮ್ಮ ಆರೋಗ್ಯಕ್ಕೂ ಪರಸ್ಪರ ಸಂಬಂಧವಿದೆ. ಹಾಗಾಗಿ ರಾತ್ರಿ ಮಲಗುವಾಗ ಹಲ್ಲುಜ್ಜದೆ ಮಲಗಬೇಡಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *