IPL ಹರಾಜಿಗೂ ಮುನ್ನ CSK ತಂಡಕ್ಕೆ ಬೇಬಿ ಎಬಿ ಎಂಟ್ರಿ. | IPL

IPL ಹರಾಜಿಗೂ ಮುನ್ನ CSK ತಂಡಕ್ಕೆ ಬೇಬಿ ಎಬಿ ಎಂಟ್ರಿ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸೌತ್ ಆಫ್ರಿಕಾದ ಯುವ ದಾಂಡಿಗ ಡೆವಾಲ್ಟ್ ಬ್ರೆವಿಸ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಳೆದ ಸೀಸನ್​​ನಲ್ಲಿ ಬದಲಿ ಆಟಗಾರನಾಗಿ ಸಿಎಸ್​ಕೆ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಬ್ರೆವಿಸ್ ಅವರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದಂತೆ ಮುಂದಿನ ಸೀಸನ್​​ನಲ್ಲೂ ಡೆವಾಲ್ಡ್ ಬ್ರೆವಿಸ್ ಚೆನ್ನೈ ಸೂಪರ್ ಕಿಂಗ್ಸ್ ಪರವೇ ಕಣಕ್ಕಿಳಿಯಲಿದ್ದಾರೆ. ಇತ್ತ ಬ್ರೆವಿಸ್ ಅವರನ್ನು ಆಯ್ಕೆ ಮಾಡಿಕೊಂಡಿರುವ ಕಾರಣ ಗುರ್ಜಪ್ನೀತ್ ಸಿಂಗ್ ಅವರು ಹೊರಬೀಳಲಿದ್ದಾರೆ. ಏಕೆಂದರೆ ಗಾಯಗೊಂಡ ಗುರ್ಜಪ್ನೀತ್ ಸಿಂಗ್ ಬದಲಿಗೆ ಕಳೆದ ಸೀಸನ್​ನಲ್ಲಿ ಬ್ರೆವಿಸ್ ಆಯ್ಕೆಯಾಗಿದ್ದರು.

ಹೀಗೆ ಬದಲಿಯಾಗಿ ಆಯ್ಕೆಯಾದ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶವಿದೆ. ಆದರೆ ಅದಕ್ಕೂ ಮುನ್ನ ಮೂಲ ಆಟಗಾರನನ್ನು ಅಥವಾ ಇನ್ನೊಬ್ಬ ಆಟಗಾರನನ್ನು ತಂಡದಿಂದ ಕೈ ಬಿಡಬೇಕಾಗುತ್ತದೆ. ಚೆನ್ನೈ ಸೂಪರ್ ಕಿಂಗ್ಸ್ ಮೂಲಗಳ ಮಾಹಿತಿ ಪ್ರಕಾರ, ವೇಗಿ ಗುರ್ಜಪ್ನೀತ್ ಸಿಂಗ್ ಅವರನ್ನು ತಂಡದಿಂದ ಕೈ ಬಿಡುವುದು ಖಚಿತ.

ಗುರ್ಜಪ್ನೀತ್ ಸಿಂಗ್ ಬದಲಿಗೆ ಕೊನೆಯ 6 ಪಂದ್ಯಗಳಿರುವಾಗ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಡೆವಾಲ್ಡ್ ಬ್ರೆವಿಸ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಅದರಂತೆ 2025 ರಿಂದ 2027 ರವರೆಗೆ ಬ್ರೆವಿಸ್ ಜೊತೆ ಸಿಎಸ್​ಕೆ ಫ್ರಾಂಚೈಸಿ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ.

ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 6 ಇನಿಂಗ್ಸ್ ಆಡಿದ್ದ ಡೆವಾಲ್ಡ್ ಬ್ರೆವಿಸ್ 125 ಎಸೆತಗಳನ್ನು ಎದುರಿಸಿ ಒಟ್ಟು 225 ರನ್ ಕಲೆಹಾಕಿದ್ದರು. ಈ ವೇಳೆ 2 ಅರ್ಧಶತಕಗಳನ್ನು ಬಾರಿಸಿದ್ದರು. ಇದೀಗ ಭರ್ಜರಿ ಫಾರ್ಮ್​ನಲ್ಲಿರುವ ಬೇಬಿ ಎಬಿಯನ್ನು ತಂಡದಲ್ಲೇ ಉಳಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಿರ್ಧರಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *