ತಲೆ ಸ್ನಾನಕ್ಕೂ ಮುಟ್ಟಿಗೂ ಏನಾದರೂ ಸಂಬಂಧವಿದೆಯೇ? | Menstruation

ತಲೆ ಸ್ನಾನಕ್ಕೂ ಮುಟ್ಟಿಗೂ ಏನಾದರೂ ಸಂಬಂಧವಿದೆಯೇ? | Menstruation

ಋತುಚಕ್ರ  ಎನ್ನುವಂತದ್ದು ಮಹಿಳೆಯರಲ್ಲಿ ಪ್ರತಿ ತಿಂಗಳು ಕಂಡುಬರುವ ಒಂದು ನೈಸರ್ಗಿಕ ಪ್ರಕ್ರಿಯೆ. ಹೆಣ್ಣು ನಾಲ್ಕರಿಂದ ಐದು ದಿನಗಳ ವರೆಗೆ ಈ ಬದಲಾವಣೆಯನ್ನು ಅನುಭವಿಸುತ್ತಾಳೆ. ಈ ಸಮಯದಲ್ಲಿ, ಅವಳು ಹೊಟ್ಟೆ ನೋವು, ತಲೆನೋವು ಮುಂತಾದ ವಿವಿಧ ರೀತಿಯ ಸಮಸ್ಯೆಗಳನ್ನು ಕೂಡ ಎದುರಿಸುತ್ತಾಳೆ. ಅದರಲ್ಲಿಯೂ ನಮ್ಮ ಸಮಾಜದಲ್ಲಿ ಋತುಚಕ್ರಕ್ಕೆ ಸಂಬಂಧ ಪಟ್ಟಂತೆ ಅನೇಕ ತಪ್ಪು ಕಲ್ಪನೆಗಳಿವೆ. ಕೆಲವರು ಹೇಳುವಂತೆ ಈ ಸಮಯದಲ್ಲಿ ಮಹಿಳೆಯರು ತರಕಾರಿಗಳನ್ನು ಮುಟ್ಟಬಾರದು, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಬಾರದು. ಹೀಗೆ ನಾನಾ ರೀತಿಯ ಮೂಢನಂಬಿಕೆಗಳಿರುತ್ತವೆ. ಇಂತವುಗಳಲ್ಲಿ, ಋತುಚಕ್ರದ ಸಮಯದಲ್ಲಿ ತಲೆ ಸ್ನಾನ ಮಾಡಬಾರದು ಎನ್ನುವುದು ಕೂಡ ಒಂದು. ಹಿರಿಯರು ಈ ಅಭ್ಯಾಸವನ್ನು ಹಾನಿಕಾರಕ ಎಂದು ಹೇಳುತ್ತಾರೆ. ಹಾಗಾದರೆ ಇದು ಎಷ್ಟು ನಿಜ? ಹಿರಿಯರು ಹೇಳುವುದರಲ್ಲಿ ಏನಾದರೂ ಸತ್ಯವಿದೆಯೇ? ಇದಕ್ಕೆ ಪೂರಕವಾಗಿ ಸ್ತ್ರೀರೋಗ ತಜ್ಞೆ ಡಾ. ಜ್ಯೋತಿ ತಮ್ಮ ಇನ್ಸ್ಟಾಖಾತೆಯಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

ತಲೆ ಸ್ನಾನಕ್ಕೂ ಮುಟ್ಟಿಗೂ ಏನಾದರೂ ಸಂಬಂಧವಿದೆಯೇ?

ಅನೇಕರು ಮುಟ್ಟಿನ ಸಮಯದಲ್ಲಿ ತಲೆ ಸ್ನಾನ ಮಾಡುವುದನ್ನು ನಿರಾಕರಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ತಣ್ಣೀರು ಮುಟ್ಟಿನ ನೋವನ್ನು ಉಂಟುಮಾಡಬಹುದು ಅಥವಾ ರಕ್ತದ ಹರಿವನ್ನು ಅಡ್ಡಿಪಡಿಸಬಹುದು ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಯಾವುದೇ ರೀತಿಯ ವೈದ್ಯಕೀಯ ಪುರಾವೆಗಳು ದೊರೆಯುವುದಿಲ್ಲ. ಮಾತ್ರವಲ್ಲ, ಸ್ನಾನ ಮತ್ತು ಮುಟ್ಟಿನ ನಡುವೆ ನೇರ ವೈಜ್ಞಾನಿಕ ಸಂಬಂಧವಿಲ್ಲ. ಆದರೆ, ಕೆಲವು ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿ ಸ್ನಾನ ಮಾಡುವುದಕ್ಕಿಂತ ಮಾಡದಿರುವುದೇ ಬಹಳ ಒಳ್ಳೆಯದು. ಏಕೆಂದರೆ ಈ ಸಮಯದಲ್ಲಿ, ಅವರ ದೇಹದಲ್ಲಿರುವ ರೋಗನಿರೋಧಕ ಶಕ್ತಿ ದುರ್ಬಲಗೊಂಡಿರುತ್ತವೆ. ಇಂತಹ ಸಮಯದಲ್ಲಿ ಸ್ನಾನ ಮಾಡುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡಿಸಬಹುದು. ಈ ಪ್ರಕ್ರಿಯೆಯು ದೈಹಿಕ ಬಳಲಿಕೆಗೂ ಕಾರಣವಾಗಬಹುದು, ಮಾತ್ರವಲ್ಲ ಮುಟ್ಟಿನ ಸಮಯದಲ್ಲಿ ಕಂಡು ಬರುವ ಹಾರ್ಮೋನುಗಳ ಬದಲಾವಣೆ ಮತ್ತು ದೈಹಿಕ ಅಸ್ವಸ್ಥತೆಯಿಂದಾಗಿ, ಮಹಿಳೆಯರಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಹಾಗಾಗಿ ಸ್ನಾನ ಮಾಡುವುದರಿಂದ ದೇಹ ಮತ್ತಷ್ಟು ದುರ್ಬಲವಾಗುತ್ತದೆ ಹಾಗಾಗಿ ತಲೆ ಸ್ನಾನ ಮಾಡದಿರುವುದೇ ಒಳ್ಳೆಯದು.

ತಣ್ಣೀರಿನ ಸ್ನಾನ ತೊಂದರೆಗೆ ಕಾರಣವಾಗುತ್ತದೆಯೇ?

ಡಾ. ಜ್ಯೋತಿ ಹೇಳುವ ಪ್ರಕಾರ, ಮುಟ್ಟಿನ ಸಮಯದಲ್ಲಿ ಸ್ನಾನ ಮಾಡುವುದರಿಂದ ಫಲವತ್ತತೆ ಅಥವಾ ಗರ್ಭಾಶಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಇದು ದೇಹದ ಉಷ್ಣತೆ ಮತ್ತು ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ತಣ್ಣೀರಿನ ಸ್ನಾನ ಮಾತ್ರ ಈ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ತಣ್ಣೀರಿನ ಬದಲು ಉಗುರು ಬೆಚ್ಚಗಿನ ನೀರು ಅಥವಾ ಸ್ವಲ್ಪ ಬಿಸಿ ನೀರನ್ನು ಬಳಸುವುದರಿಂದ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ ಎಂದಿದ್ದಾರೆ.

ತಲೆ ಸ್ನಾನ ಸೂಕ್ತವಲ್ಲವೇ?

ವೈದ್ಯರು ಹೇಳುವಂತೆ ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಬಹಳ ಮುಖ್ಯವಾಗಿರುತ್ತದೆ. ಸ್ನಾನವು ದೇಹಕ್ಕೆ ಉಲ್ಲಾಸ ನೀಡುವುದು ಮಾತ್ರವಲ್ಲದೆ ಅಸ್ವಸ್ಥತೆ ಮತ್ತು ಸೌಮ್ಯವಾದ ಸೆಳೆತದಿಂದ ಪರಿಹಾರ ನೀಡುತ್ತದೆ. ಅದರಲ್ಲಿಯೂ ವಿಶೇಷವಾಗಿ, ಬೆಚ್ಚಗಿನ ನೀರು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ಒಟ್ಟಾರೆಯಾಗಿ, ಮುಟ್ಟಿನ ಸಮಯದಲ್ಲಿ ಸ್ನಾನ ಮಾಡುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದು ದೇಹದ ಸ್ವಚ್ಛತೆಗೆ ತುಂಬಾ ಒಳ್ಳೆಯದು. ಹಾಗಾಗಿ ವೈಜ್ಞಾನಿಕ ಆಧಾರವಿಲ್ಲದೆ ಮೂಢನಂಬಿಕೆಗಳನ್ನು ನಂಬಬೇಡಿ. ಇದಲ್ಲದೆ, ಮುಟ್ಟಿನ ಸಮಯದಲ್ಲಿ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಆದರೆ ನಿಂತ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಿ. ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *