ರಿಯಾಸಿ: ಕಳೆದ ನಾಲ್ಕೈದು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆಯಾಗುತ್ತಿದೆ. ಮೇಘಸ್ಫೋಟ ಸಂಭವಿಸಿದ್ದು, ಎಲ್ಲೆಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ರಿಯಾಸಿಯಲ್ಲಿ ಮೇಘಸ್ಫೋಟದ ಬಳಿಕ ಎಲ್ಲೆಡೆ ಭೂಕುಸಿತ ಸಂಭವಿಸಿ ಇಡೀ ಮನೆಯೇ ಕುಸಿದು ಬಿದ್ದು ಒಂದೇ ಮನೆಯ 7 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಭೂಕುಸಿತ ಸಂಭವಿಸಿದಾಗ ಕುಟುಂಬವು ನಿದ್ರಿಸುತ್ತಿತ್ತು ಎಂದು ಮಹೋರ್ ಶಾಸಕ ಮೊಹಮ್ಮದ್ ಖುರ್ಷಿದ್ ಹೇಳಿದ್ದಾರೆ. ಇದರಿಂದಾಗಿ ಇಡೀ ಮನೆ ಕುಸಿದು ನಿವಾಸಿಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ.ಗ್ರಾಮಸ್ಥರು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಏಳು ಶವಗಳನ್ನು ಹೊರತೆಗೆದರು.
For More Updates Join our WhatsApp Group :