KEA Notification: Allied Health Science, M.Pharm, Pharm-D ಪ್ರವೇಶ ಪರೀಕ್ಷೆ ವಿವರಗಳು | Education News

KEA Notification: Allied Health Science, M.Pharm, Pharm-D Entrance Exam Details | Education News

ಬೆಂಗಳೂರು: ಸ್ನಾತಕೋತ್ತರ ಅಲೈಡ್ ಹೆಲ್ತ್ ಸೈನ್ಸ್ (PG Allied Health Science) ಸ್ನಾತಕೋತ್ತರ ಕೋರ್ಸುಗಳು ಸೇರಿದಂತೆ ವಿವಿಧ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ಬಯಸುವವರಿಗೆ ಸೆ.3ರಿಂದ 14ರವರೆಗೆ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೋಮವಾರ ಸೂಚಿಸಿದೆ.

ಎಂ.ಎಸ್.ಸಿ ನರ್ಸಿಂಗ್, ಎಂ.ಪಿ.ಟಿ, ಎಂ.ಎಸ್.ಸಿ, ಅಲೈಡ್ ಹೆಲ್ತ್ ಸೈನ್ಸ್ ಸ್ನಾತಕೋತ್ತರ ಕೋರ್ಸ್ ಗಳು ಮತ್ತು ಎಂ.ಫಾರ್ಮ ಮತ್ತು ಫಾರ್ಮ-ಡಿ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea ಮೂಲಕ ಸೆ. 3ರಿಂದ (ಬೆಳಿಗ್ಗೆ 11) 14ರೊಳಗೆ (ರಾತ್ರಿ 11:59) ನೋಂದಾಯಿಸಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಬಹುದು ಎಂದ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಿದ್ದಾರೆ

ಅಭ್ಯರ್ಥಿಗಳು ಕರ್ನಾಟಕ ಸಂಜಾತರಾಗಿದ್ದು, ಆಯಾ ಕೋರ್ಸುಗಳಲ್ಲಿ ಪದವಿ ಪಡೆದು ಅರ್ಹರಿದ್ದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯಾ ಕೋರ್ಸುಗಳಿಗೆ ವಿವಿಧ ಇಲಾಖೆಯವರು ನಿಗದಿಪಡಿಸಿರುವ ಅರ್ಹತಾ ವಿವರಗಳನ್ನು ಹಾಗೂ ಅಗತ್ಯ ಇರುವ ದಾಖಲೆಗಳು ಇತರೆ ಮಾಹಿತಿಯನ್ನು ಒಳಗೊಂಡ ಮಾಹಿತಿ ಪುಸ್ತಕವನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುವುದು. ಪರೀಕ್ಷೆಯ ದಿನಾಂಕವನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಪ್ರಕಟಣೆ ಹೇಳಿದೆ.

Leave a Reply

Your email address will not be published. Required fields are marked *