ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನ, ಮಹೇಶ್ ಬಾಬು ನಟನೆಯ ಹೊಸ ಸಿನಿಮಾ ವಿಶ್ವದ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. ಈವರೆಗೆ ಭಾರತದ ಅತಿ ದೊಡ್ಡ ಬಜೆಟ್ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಈಗ ಹೈದರಾಬಾದ್, ರಾಜಸ್ಥಾನಗಳ ನಂತರ ಕೀನ್ಯಾದ ನಿಜ ಅರಣ್ಯಗಳಲ್ಲಿ ಚಿತ್ರೀಕರಿಸಲಾಗಿದೆ. ಇತ್ತೀಚೆಗಷ್ಟೆ ರಾಜಮೌಳಿ ಅವರು ಕೀನ್ಯಾ ಅಧ್ಯಕ್ಷರನ್ನು ಸಹ ಭೇಟಿ ಮಾಡಿದ್ದರು.
ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ,ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವಾರು ಹಾಲಿವುಡ್ ನಟರೂ ಅಭಿನಯಿಸುತ್ತಿದ್ದು, ಅಂತರಾಷ್ಟ್ರೀಯ ತಂತ್ರಜ್ಞರೂ ಈ ಸಿನಿಮಾದ ಭಾಗವಾಗಿದ್ದಾರೆ. ಕೀನ್ಯಾದ ಶೂಟಿಂಗ್ ಶೆಡ್ಯೂಲ್ ಪೂರ್ಣಗೊಂಡಿದ್ದು, ತಂಡ ಇನ್ನೂ ಹೆಚ್ಚಿನ ಲೊಕೇಷನ್ಗಳಲ್ಲಿ ಚಿತ್ರೀಕರಣ ಮುಂದುವರೆಸಲಿದೆ.
ಪ್ಯಾನ್ ಇಂಡಿಯಾದಿಂದ ಪ್ಯಾನ್ ವರ್ಲ್ಡ್ಗೆ!
‘ಬಾಹುಬಲಿ’ ಮೂಲಕ ಪ್ಯಾನ್ ಇಂಡಿಯಾ ರೀಚ್ ಸಾಧಿಸಿದ್ದ ರಾಜಮೌಳಿ, ‘ಆರ್ಆರ್ಆರ್’ ಮೂಲಕ ಪ್ಯಾನ್ ವರ್ಲ್ಡ್ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಈಗ ಮಹೇಶ್ ಬಾಬು ಜೊತೆಗಿನ ಈ ಸಿನಿಮಾ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಒಂದೇ ಸಮಯದಲ್ಲಿ 120ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಲಿದೆ. ಇದು ಭಾರತೀಯ ಸಿನಿಮಾದ ವಿಶ್ವದ ಮಟ್ಟದ ಪ್ರಭಾವವನ್ನು ಇನ್ನಷ್ಟು ವಿಸ್ತರಿಸುವ ನಿರೀಕ್ಷೆ ಇದೆ.
ಕಥೆಯ ಹೈಲೈಟ್
ಸಿನಿಮಾ ಅಡ್ವೆಂಚರ್ ಆಕ್ಷನ್ ಥ್ರಿಲ್ಲರ್ ಜಾನರ್ನಲ್ಲಿದ್ದು, ‘ಇಂಡಿಯಾನಾ ಜೋನ್ಸ್’, ‘ಮಿಷನ್ ಇಂಪಾಸಿಬಲ್’ ಶೈಲಿಯ ಕಥಾಹಂದರ ಹೊಂದಿದೆ. ನಾಯಕ ಮಹೇಶ್ ಬಾಬು ವಿಭಿನ್ನ ದೇಶಗಳಿಗೆ ಮಿಷನ್ಗಾಗಿ ಪ್ರಯಾಣಿಸುತ್ತಾರೆ. ಅಲ್ಲಲ್ಲಿ ಎದುರಾಗುವ ಸವಾಲುಗಳನ್ನು ಬುದ್ಧಿ ಹಾಗೂ ಶೌರ್ಯದಿಂದ ಎದುರಿಸುವ ಕತೆ ಚಿತ್ರದ ಆಕರ್ಷಣೆಯಾಗಿದೆ.
For More Updates Join our WhatsApp Group :