ಎರ್‌ಪಾಡ್ ಕಳೆದುಕೊಂಡ ಯುವತಿಗೆ ಸಹಾಯ ಮಾಡಿದ ಆಟೋ ಚಾಲಕ ದರ್ಶನ್ – ನಿಜವಾದ ಹೀರೋ!

ಎರ್‌ಪಾಡ್ ಕಳೆದುಕೊಂಡ ಯುವತಿಗೆ ಸಹಾಯ ಮಾಡಿದ ಆಟೋ ಚಾಲಕ ದರ್ಶನ್ – ನಿಜವಾದ ಹೀರೋ!


ಈಗಿನ ಸ್ವಾರ್ಥಪೂರ್ಣ ಯುಗದಲ್ಲೂ ಮಾನವೀಯತೆ ಬದುಕಿದೆ ಎಂಬುದಕ್ಕೆ ಸಾಕ್ಷಿಯಾದ touching ಘಟನೆಯೊಂದು ಬೆಂಗಳೂರು ನಗರದಲ್ಲಿಯೇ ನಡೆದಿದೆ. ಯುವತಿಯೊಬ್ಬಳು ಕಳೆದುಕೊಂಡ ತನ್ನ ಎರ್‌ಪಾಡ್ ಅನ್ನು ಹುಡುಕುವಲ್ಲಿ ಆಟೋ ಚಾಲಕರೊಬ್ಬರು ಮಾಡಿದ ಸಹಾಯವಿಲ್ಲದೇ ಅದು ಸಾಧ್ಯವಿರಲಿಲ್ಲ. ಇದೀಗ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನಿಜವಾದ ನಾಯಕತ್ವದ ರೂಪದಲ್ಲಿ ಎದ್ದು ಕಾಣುತ್ತಿರುವ ಆಟೋ ಡ್ರೈವರ್ ದರ್ಶನ್ ಅವರಿಗೆ ನೆಟ್ಟಿಗರು ಶ್ಲಾಘನೆ ಸಲ್ಲಿಸುತ್ತಿದ್ದಾರೆ.

ಪಾಲಕ್ ಮಲ್ಹೋತ್ರಾ ಎಂಬ ಯುವತಿ ಒಂದು ಆಟೋದಲ್ಲಿ ಪ್ರಯಾಣಿಸಿದ್ದಾಗ ತನ್ನ ಎರ್‌ಪಾಡ್‌ ಅನ್ನು ಅದೇ ಆಟೋದಲ್ಲಿ ಬಿಟ್ಟು ಹೋಗುತ್ತಾಳೆ. ಇದಾದ ನಂತರ ಆಕೆಗೆ ಸಹಾಯ ಮಾಡಿದವನು ಇನ್ನೊಬ್ಬ ಆಟೋ ಚಾಲಕ – ದರ್ಶನ್. ಯುವತಿ ದರ್ಶನ್ ಬಳಿ ವಿಚಾರಿಸಿದಾಗ, ಅವರು ತಮ್ಮ ಕೆಲಸ ಬದಿಗಿಟ್ಟು ಸತತ 1.5 ಗಂಟೆಗಳ ಕಾಲ ಆ ಎರ್‌ಪಾಡ್ ಹುಡುಕಾಟದಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರಾರಂಭದಲ್ಲಿ ಪಾಲಕ್, ಆಟೋ ಚಾಲಕರೇ ಎರ್‌ಪಾಡ್ ತೆಗೆದುಕೊಂಡಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದರೂ, ನಂತರ ಅದು ಮತ್ತೊಬ್ಬ ಪ್ರಯಾಣಿಕನಿಂದ ತಪ್ಪದೇ ಆಕೆಗೆ ಸಿಕ್ಕಿತು – ಅದೂ ದರ್ಶನ್ ಅವರ ಸಹಾಯದಿಂದ!

ಪಾಲಕ್ ಈ ಘಟನೆಯ ವಿವರವನ್ನು ತನ್ನ X ಖಾತೆಯಲ್ಲಿ ಹಂಚಿಕೊಂಡು, “ಕನ್ನಡ ಬರದಿದ್ದರೆ ಆಟೋ ಡ್ರೈವರ್‌ಗಳು ಅಸಭ್ಯರಾಗಿರುತ್ತಾರೆ ಎಂಬಂತಿದ್ದ ನನ್ನ ಊಹೆಗೆ ಸಂಪೂರ್ಣ ವಿರುದ್ಧವಾಗಿ, ಕನ್ನಡ ಮಾತಾಡದ ನನಗೆ ಸಹಾಯ ಮಾಡಿದ ದರ್ಶನ್ ಅವರ ಮಾನವೀಯತೆ ಮನತುಂಬಿಸಿತು” ಎಂದು ಬರೆದುಕೊಂಡಿದ್ದಾಳೆ.

ಬಿ.ಕಾಂ ಪದವಿದಾರರಾಗಿರುವ ದರ್ಶನ್, ತಮ್ಮ ತಂದೆಯ ಆಟೋವನ್ನು ಓಡಿಸುತ್ತಾ, ಇತ್ತMBA ಓದುವುದಕ್ಕೆ ಸಿದ್ಧತೆ ಮಾಡುತ್ತಿದ್ದಾರೆ. “ಎಲ್ಲಾ ಹೀರೋಗಳು ಕ್ಯಾಪ್ ಧರಿಸಬೇಕು ಅನ್ನೋಹಾಗಿಲ್ಲ” ಎಂಬ ಸಾಲುಹೇಳುವ ಪಾಲಕ್, ದರ್ಶನ್ ಅವರ ಪ್ರಾಮಾಣಿಕತೆ ಮತ್ತು ಸಹಾಯ ಮನೋಭಾವಕ್ಕೆ ನಮನ ಸಲ್ಲಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *