ಸದ್ಯದ ದುಡಿಮೆಯ ಜೀವನಶೈಲಿ, ತಪ್ಪು ಆಹಾರ ಪದ್ಧತಿ ಹಾಗೂ ಕೂರೋ ಜೀವನದಿಂದಾಗಿ ಹೊಟ್ಟೆ ಮತ್ತು ಸೊಂಟದ ಕೊಬ್ಬು ಹೆಚ್ಚುವುದು ಸಾಮಾನ್ಯ ಸಮಸ್ಯೆಯಾಗಿದ್ದು, ಇದನ್ನು ಕಡಿಮೆ ಮಾಡಲು ಜನರು ಹಲವಾರು ಡೈಟ್, ವ್ಯಾಯಾಮ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಆದರೆ ಎಲ್ಲವೂ ಫಲಕಾರಿಯಾಗದೆ ಕುಂಠಿತಗೊಳ್ಳುತ್ತಿದ್ದಾರೆ.
ಇಂಥವರಿಗೆ ಉತ್ತಮ ಆಯ್ಕೆ ಎಂದರೆ ಚೀನೀಯರ ಪ್ರಾಚೀನ, ಸರಳ ಮತ್ತು ಪರಿಣಾಮಕಾರಿ ವ್ಯಾಯಾಮ ವಿಧಾನಗಳು.
ಯಾವುವು ಈ ಚೀನೀ ವ್ಯಾಯಾಮಗಳು?
ಇವು ದಿನನಿತ್ಯದ ಚಟುವಟಿಕೆಯಲ್ಲಿ ಸೇರಿಸಬಹುದಾದ ಸರಳ ಪದ್ಧತಿಗಳು. ಕೊಬ್ಬು ಕರಗಿಸುವುದಲ್ಲದೆ ದೇಹದ ಚುರುಕನ್ನು ಕೂಡ ಹೆಚ್ಚಿಸುತ್ತವೆ. ಇಲ್ಲಿವೆ 5 ಪ್ರಮುಖ ಚೀನೀ ವ್ಯಾಯಾಮಗಳು
1. ಸೊಂಟ ತಿರುಗಿಸುವ ವ್ಯಾಯಾಮ
- ಇದು ಸೊಂಟದ ಭಾಗದ ಕೊಬ್ಬುಗಳನ್ನು ಕರಗಿಸುತ್ತೆ.
- 3-5 ಸೆಟ್, ಪ್ರತಿ ಸೆಟ್ನಲ್ಲಿ 10 ಬಾರಿ ಪುನರಾವರ್ತನೆ ಮಾಡಬೇಕು.
2. ಚೆಸ್ಟ್ ಓಪನಿಂಗ್ ಪಾಮ್ ಸ್ಟ್ರೈಕ್ಸ್
- ಹೊಟ್ಟೆ ಹಾಗೂ ತೋಳಿನಲ್ಲಿ ಜಮಾದ ಕೊಬ್ಬುಗಳಿಗೆ ಗುಡ್‌ಬೈ.
- ಮೇಲ್ಭಾಗದ ದೇಹದ ತೂಕ ನಿಯಂತ್ರಣಕ್ಕೆ ಸಹಾಯಕ.
3. ಕೈಗಳನ್ನು ಮೇಲ್ಮೆಳಕ್ಕೆ ಹೊಡೆಯುವ ವ್ಯಾಯಾಮ
- ಇದು ಕಿಬ್ಬೊಟ್ಟೆಯ ಸ್ನಾಯುಗಳನ್ನು ಆಳವಾಗಿ ಎಕ್ಸರ್ಸೈಸ್ ಮಾಡುತ್ತದೆ.
- ನಿತ್ಯ ಈ ಚಟುವಟಿಕೆ ಮಾಡಿ, ವೇಗವಾಗಿ ತೂಕ ಕಡಿಮೆಯಾದರೆ ಆಶ್ಚರ್ಯವಾಗಬೇಡಿ!
4. ನೀರಿನಲ್ಲಿ ಆಡುವ ಚಿನ್ನದ ಆಮೆ ತಂತ್ರ
- ಕಾಲುಗಳನ್ನು ಬಲಪಡಿಸುವ ಈ ಚಟುವಟಿಕೆ ಹೊಟ್ಟೆ ಕೊಬ್ಬಿಗೂ ಶತ್ರು!
- ದೇಹದ ಎಲ್ಲಾ ಭಾಗದ ಸ್ನಾಯುಗಳನ್ನು ಸಕ್ರಿಯಗೊಳಿಸುತ್ತದೆ.
5. ರೈಸಿಂಗ್ ಸನ್ ಅಪ್
- ತೊಡೆಯ ಹಾಗೂ ಕಾಲು ಭಾಗದಲ್ಲಿ ಜಮಾದ ಕೊಬ್ಬನ್ನು ಕರಗಿಸಲು ಸೂಕ್ತ.
- ಶಕ್ತಿಯನ್ನು ಹೆಚ್ಚಿಸಿ ದೈನಂದಿನ ಚಟುವಟಿಕೆಗಳಲ್ಲಿ ಚುರುಕು ತರುತ್ತದೆ.
ದೈನಂದಿನ ವ್ಯಾಯಾಮದಲ್ಲಿ ಸೇರಿಸಿ
ಇವುಗಳಲ್ಲಿ ಯಾವುದಾದರೂ 15-20 ನಿಮಿಷಗಳನ್ನು ಮೀಸಲಿಟ್ಟರೆ ಸಾಕು, ದೈನಂದಿನ ದೇಹದ ಬದಲಾವಣೆಗಳನ್ನು ನೀವು ಅನುಭವಿಸುತ್ತೀರಿ. ಇದರ ಜೊತೆಗೆ ಸಮತೋಲನದ ಆಹಾರ ಪದ್ಧತಿಯನ್ನು ಅನುಸರಿಸಿದರೆ ಕೊಬ್ಬು ಕರಗುವುದು ಖಚಿತ.
For More Updates Join our WhatsApp Group :

