ನಮ್ಮ ನಾಯಕನಾದ ಮೋದಿಯಿಂದ ಕಲಿತ ಬೃಹತ್ ಪಾಠ!” – ಅಮಿತ್ ಶಾ ಭಾವನಾತ್ಮಕ ಹಂಚಿಕೆ.

ನಮ್ಮ ನಾಯಕನಾದ ಮೋದಿಯಿಂದ ಕಲಿತ ಬೃಹತ್ ಪಾಠ!" – ಅಮಿತ್ ಶಾ ಭಾವನಾತ್ಮಕ ಹಂಚಿಕೆ.

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 75ನೇ ವಯಸ್ಸಿನಲ್ಲಿ ಕಾಲಿಡುತ್ತಿದ್ದಂತೆ, ದೇಶಾದ್ಯಂತ ಪ್ರಧಾನಿ ಅವರ ನಡೆ, ನುಡಿಗಳ ಮೆಲುಕು ಚರ್ಚೆಗಿಳಿದಿದೆ. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮ ಮತ್ತು ಮೋದಿಯವರ ನಡುವಿನ ಆತ್ಮೀಯ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.

MyModiStory ಎಂಬ ಶೃಂಖಲೆಯ ಅಂಗವಾಗಿ ಎಕ್ಸ್ (ಹಿಂದಿನ ಟ್ವಿಟ್ಟರ್) ನಲ್ಲಿ ವಿಡಿಯೋ ಶೇರ್ ಮಾಡಿದ ಅಮಿತ್ ಶಾ, ಮೋದಿಯವರ ನಂಬಿಕೆ ಮತ್ತು ಸಮರ್ಪಣೆಯೆಂಬ ಪಾಠ ನನ್ನ ಜೀವನದ ದಿಕ್ಕೇ ಬದಲಾಯಿಸಿತು” ಎಂದು ತಿಳಿಸಿದ್ದಾರೆ.

ಅಹಮದಾಬಾದ್ರಾಜ್ಕೋಟ್ ನಡುವೆ ನಡೆದ ಸ್ಮರಣೀಯ ಕ್ಷಣ:

ಅಮಿತ್ ಶಾ ತಮ್ಮ ನೆನಪಿನಲ್ಲಿ ಹೀಗೆ ಹೇಳಿದ್ದಾರೆ:

“ಅಂದು ರಾತ್ರಿ 8.30ಕ್ಕೆ ನಾವು ಅಹಮದಾಬಾದ್‌ನಿಂದ ರಾಜ್ಕೋಟ್‌ಗೆ ಪ್ರಯಾಣದಲ್ಲಿದ್ದೆವು. ಸಹಜವಾಗಿ ನಾನು ಭಾವಿಸಿದಂತೆ, ಮೋದಿಯವರು ಹಸಿವಾಗಿದ್ದು ಡಾಬಾ ಬಳಿ ಕಾರು ನಿಲ್ಲಿಸಿರಬೇಕು. ಆದರೆ ನಾವು ಊಟ ಮಾಡುತ್ತಿದ್ದಾಗ ಅವರು ಕೇವಲ ಎರಡು ಹಣ್ಣು ತುಂಡುಗಳನ್ನು ಮಾತ್ರ ತಿಂದರು.”

“ನನಗೆ ಅಷ್ಟರಲ್ಲೇ ಅರ್ಥವಾಯ್ತು — ಅವರು ಕಾರು ನಿಲ್ಲಿಸಲು ಕೇಳಿದ್ದು ತಮ್ಮ ಹಸಿವಿಗಾಗಿ ಅಲ್ಲ, ಬದಲಾಗಿ ಕಾರಿನಲ್ಲಿ ಇರುವ ಕಾರ್ಯಕರ್ತರ ಹಸಿವಿಗಾಗಿ. ತಾವು ಕಾರ್ಯಕರ್ತನ ಮನೆಯಲ್ಲಿ ಊಟ ಮಾಡುವ ಮುನ್ನ, ಅವರೂ ತಿನ್ನಲಿ ಎಂದು ಯೋಚಿಸಿದ್ದರಂತೆ.”

ಕಾರ್ಯಕರ್ತರ ಬಗೆಗಿನ ನಂಬಿಕೆ, ಅವರಿಗೆ ನೀಡುವ ಗೌರವವೇ ಮೋದಿಯವರ ನಾಯಕತ್ವದ ತಳಹದಿ ಎಂದು ಅಮಿತ್ ಶಾ ತಿಳಿಸಿದಿದ್ದಾರೆ. ಅವರು ಇನ್ನೂ ಹೇಳಿದರು:

“ಈ ಘಟನೆ ನನ್ನ ಮನಸ್ಸಿನಲ್ಲಿ ಗಾಢವಾಗಿ ನೆಲೆಗೊಂಡಿದ್ದು, ನಾನು ಸಿದ್ದಪಡಿಸಿದ ಸಂಘಟನಾ ಶಕ್ತಿಯ ಹಿಂದಿನ ಬಲವೇ ಸಮರ್ಪಣೆ ಮತ್ತು ನಂಬಿಕೆ ಎಂಬುದನ್ನು ಮೊದಲು ಮೊದಲು ಮೋದಿಯವರಿಂದ ಕಲಿತೆ.”

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *