ನವದೆಹಲಿ: ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 6000ಕ್ಕೂ ಅಧಿಕ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡಿದ್ದಾರ.
“ಟಾರ್ಗೆಟ್ ಆಗಿದ್ದಾರೆ ಕಾಂಗ್ರೆಸ್ ಮತದಾರರು” – ರಾಹುಲ್ ಗಾಂಧಿ
- ಒಬಿಸಿ, ಆದಿವಾಸಿ ಹಾಗೂ ಕಾಂಗ್ರೆಸ್ ಬೆಂಬಲಿಗರ ಹೆಸರುಗಳೇ ಡಿಲೀಟ್ ಆಗಿವೆ
- ಪ್ರಜಾಪ್ರಭುತ್ವದ ಮೇಲೆ ಈ ಧಕ್ಕೆಯು ಜವಾಬ್ದಾರಿ ರಹಿತ ಆಡಳಿತದ ಚಿಹ್ನೆ ಎಂದಿದ್ದಾರೆ
- “ಮತದಾರರ ಹೆಸರನ್ನು ಕಳಚುವಲ್ಲಿ ಎಸ್ಎಂಎಸ್ ಒಟಿಪಿ ಎಲ್ಲಿ ಹೋದದ್ದು ಎಂಬುದೂ ಗೊತ್ತಾಗಿಲ್ಲ,” ಎಂದು ಪ್ರಶ್ನಿಸಿದ್ದಾರೆ
ಹೇಗೆ ಸಿಕ್ಕಿಬಿಟ್ಟೆ ಮತಗಳ್ಳತನ?
- ಆಳಂದ ಕ್ಷೇತ್ರದಲ್ಲಿ ಬಿಎಲ್ಒ ಅವರ ಸಂಬಂಧಿಯ ಹೆಸರೂ ಡಿಲೀಟ್ ಆಗಿದ್ದು, ಅದರಿಂದ ಈ ಪ್ರಕರಣ ಹೊರಬಂದಿತು
- ಅದರ ಪಕ್ಕದ ಮನೆಯವರು ಹೆಸರನ್ನು ತೆಗೆಸಿದ್ದಾರೆ ಎಂಬ ಅನುಮಾನ
- ವಿಚಾರಣೆ ನಡೆಸಿದಾಗ, ಯಾರೂ ನಮಗೆ ಅರ್ಜಿ ಕೊಟ್ಟಿಲ್ಲ ಎಂದರು
- ಒಬ್ಬ ವ್ಯಕ್ತಿಯ ಹೆಸರಿನಿಂದ ಬೇರೆಯ 12 ಜನರ ಹೆಸರುಗಳನ್ನೂ ತೆಗೆಸಲಾಗಿದೆ ಎಂಬ ಶಾಕ್ ಮಾಹಿತಿಯೂ ಬಹಿರಂಗವಾಯಿತು
ಒಟಿಪಿ ಗಳಿರುವ ಮಾಬೈಲ್ ಸಂಖ್ಯೆ ಯಾರು?
- ಎಲ್ಲ ಹೆಸರುಗಳನ್ನು ಡಿಲೀಟ್ ಮಾಡಲು ಬಳಸಿದ ಮೊಬೈಲ್ ನಂಬರ್ಗಳು ಕರ್ನಾಟಕದವೆಯೇ
- ಆದರೆ ಅವುಗಳ ಬಳಕೆದಾರರು ಯಾರು ಎಂಬ ಮಾಹಿತಿ ಇಲ್ಲ
- “ಹೆಸರು ತೆಗೆಸಿದ ಮೇಲೆ ಒಟಿಪಿ ಹೋಗಿರಬೇಕು; ಆಗ ಅದು ಯಾರು ಪಡೆದರು?” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ
ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ವಿರುದ್ಧ ನೇರ ದಾಳಿ
- “ಈ ಪ್ರಕರಣದ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ 18 ತಿಂಗಳಲ್ಲಿ 18 ಪತ್ರ ಬರೆದಿದ್ದೇವೆ“
- “ಸಿಐಡಿಗೂ ನಾವು ಪತ್ರ ಬರೆದಿದ್ದೇವೆ, ಎಫ್ಐಆರ್ ಕೂಡ ದಾಖಲಾಗಿದೆ (ಫೆಬ್ರವರಿ 23)“
- ಆದರೆ, ಯಾವುದೇ ಸ್ಪಷ್ಟ ಮಾಹಿತಿ ನೀಡದ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ನೇರವಾಗಿ ಬೆರಳೆತ್ತಿದ್ದಾರೆ
ಮತಗಳ್ಳತನ ಆರೋಪದ ಪಾರದರ್ಶಕ ತನಿಖೆಗೆ ಆಗ್ರಹ
ಈ ಎಲ್ಲಾ ಬೆಳವಣಿಗೆಗಳ ನಡುವಲ್ಲಿ, ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಪ್ರಜಾಪ್ರಭುತ್ವದ ಮೌಲ್ಯ ಉಳಿಸೋದು ನಮ್ಮ ಹೊಣೆಗಾರಿಕೆ,” ಎಂದು ಹೇಳಿದ್ದಾರೆ. ಮತದಾರರ ಹೆಸರನ್ನು ಡಿಲೀಟ್ ಮಾಡುವುದು, ನೀತಿ ಸಂಹಿತೆಗೂ ವಿರುದ್ಧ.ಆದರೆ ಚುನಾವಣಾ ಆಯೋಗದ ತಟಸ್ಥತೆಯೇ ಈಗ ಪ್ರಶ್ನೆಯಡಿ ಬಂದಿದೆ!
For More Updates Join our WhatsApp Group :
