ಚೆನ್ನೈ: ಇಂದಿನ ಕಾಲದಲ್ಲಿ ಬಹುತೇಕರು ಫಾಸ್ಟ್ ಫುಡ್ಗೆ ಅಡಿಕ್ಟ್ ಆಗಿದ್ದಾರೆ. ಊಟ ತಿಂಡಿಯಾದ್ರು ಬಿಡುತ್ತಾರೆ, ಆದರೆ ಫಾಸ್ಟ್ ಫುಡ್ ತಿನ್ನದೇ ಮಾತ್ರ ಇರಲಾರರು ಹೌದು, ಚಿಕನ್ ಫ್ರೈಡ್ ರೈಸ್ ಸೇರಿದಂತೆ ಫಾಸ್ಟ್ ಫುಡ್ನ್ನು ಬಾಯಿ ಚಪ್ಪರಿಸಿ ತಿನ್ನುವವರು ಈ ಸುದ್ದಿ ಓದಲೇಬೇಕು. ಹುಟ್ಟುಹಬ್ಬದ ದಿನ ವೇಳೆ ಚಿಕನ್ ಫ್ರೈಡ್ ರೈಸ್ ತಿಂದ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆಯೂ ಚೆನ್ನೈನಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸಂಜನಾ ಎಂದು ಗುರುತಿಸಲಾಗಿದೆ.
ಮಹೇಂದ್ರನ್ ಹಾಗೂ ಪಡುಮೆಗಲ ದಂಪತಿಯ ಮಗಳಾದ ಸಂಜನಾ ಖಾಸಗಿ ಶಾಲೆಯಲ್ಲಿ 1 ನೇ ತರಗತಿಯಲ್ಲಿ ಓದುತ್ತಿದ್ದಳು. ಸಂಜನಾ ಈರೋಡ್ನಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು. ಈ ಘಟನೆಯೂ ನಡೆಯುವುದಕ್ಕೆ ಎರಡು ದಿನಗಳ ಹಿಂದೆ ಸಂಜನಾಳ ಹುಟ್ಟುಹಬ್ಬವಿತ್ತು. ಹೀಗಾಗಿ ಹೆತ್ತವರನ್ನು ನೋಡಲು ಈರೋಡ್ನಿಂದ ಚೆನ್ನೈಗೆ ಬಂದು ವಡಪಳನಿಯಲ್ಲಿ ಬಂದಿದ್ದಾಳೆ. ಮಗಳ ಹುಟ್ಟುಹಬ್ಬದ ದಿನ ಕುಟುಂಬವೂ ಬೀಚ್ಗೆ ತೆರಳಿದ್ದು, ಅಲ್ಲಿ ಬಾಲಕಿ ಸಂಜನಾ ಚಿಕನ್ ಫ್ರೈಡ್ ರೈಸ್ ತಿಂದಿದ್ದಾಳೆ.
ಇದ್ದಕ್ಕಿದ್ದಂತೆ ಸಂಜನಾಳಿಗೆ ಜ್ವರ ಬಂದಿದೆ. ಮನೆಯಲ್ಲಿದ್ದ ಔಷಧಿ ಕೊಟ್ಟರೂ ಜ್ವರ ಕಡಿಮೆಯಾಗಲಿಲ್ಲ. ಮರುದಿನ ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗಾಗಲೇ ಬಾಲಕಿಯ ಬಾಯಿ ಮತ್ತು ಮೂಗಿನಿಂದ ರಕ್ತ ಬಂದಿದೆ. ಗಾಬರಿಗೊಂಡ ಹೆತ್ತವರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದು, ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ವಡಪಳನಿ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದು, ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೋಲಿಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. .
For More Updates Join our WhatsApp Group :




