ನವದೆಹಲಿ :ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಮೂವರು ದಿನದ ಮಾನಿಟರಿ ಪಾಲಿಸಿ ಕಮಿಟಿ (MPC) ಸಭೆ ಇಂದು ಸೋಮವಾರದಿಂದ ಆರಂಭವಾಗಿದ್ದು, ಅಕ್ಟೋಬರ್ 1ರಂದು ಮಹತ್ವದ ಆರ್ಥಿಕ ತೀರ್ಮಾನ ಪ್ರಕಟವಾಗಲಿದೆ. ಈ ಬಾರಿ ಎಲ್ಲರ ಗಮನ ರಿಪೋ ದರದ ನಿರ್ಧಾರದತ್ತ ಹರಿದಿದೆ.
ರಿಪೋ ದರ ಇಳಿಕೆಯಾಗುತ್ತಾ? ಅಥವಾ ಯಥಾಸ್ಥಿತಿ ಮುಂದುವರೆಯುತ್ತಾ?
ಈವರೆಗೆ:
- ಫೆಬ್ರುವರಿ, ಏಪ್ರಿಲ್, ಜೂನ್: ಮೂರು ಬಾರಿ ರಿಪೋ ದರ ಇಳಿಕೆ
- ಶೇಕಡಾ 6.50% ರಿಂದ ಇಳಿಸಿ ಈಗ 5.50%
- ಆಗಸ್ಟ್ ಎಂಪಿಸಿ ಸಭೆಯಲ್ಲಿ ಬಡ್ಡಿದರ ಯಥಾಸ್ಥಿತಿ
ಈಗ ಅ.1 ರಂದು ಬಡ್ಡಿದರ ಇಳಿಸುತ್ತಾರಾ ಅಥವಾ ಇನ್ನೂ ಸ್ಥಿರವಿರಿಸುತ್ತಾರಾ ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.
ಬಡ್ಡಿದರ ಇಳಿಸಬೇಕೆಂದವರ ವಾದ
- ಜಾಗತಿಕ ಆರ್ಥಿಕ ಅನಿಶ್ಚಿತತೆ, ಅಮೆರಿಕದ ಸುಂಕದ ಹೊಡೆತ
- ಭಾರತೀಯ ಆರ್ಥಿಕತೆಯನ್ನು ಉತ್ತೇಜಿಸಲು ಬಡ್ಡಿದರ ಇಳಿಕೆ ಅಗತ್ಯ
- ಹಣದುಬ್ಬರ ಕಡಿಮೆಯೇ ಇದೆ (ಅಂದಾಜು ಶೇ. 2.1)
ಬಡ್ಡಿದರ ಯಥಾಸ್ಥಿತಿ ಉಳಿಸಬೇಕೆಂದವರ ವಾದ
- ಜಿಎಸ್ಟಿ ದರ ಇಳಿಕೆಗಳ ಪರಿಣಾಮ ಈಗಷ್ಟೇ ಜಾರಿ
- ಜಿಡಿಪಿ ಬೆಳವಣಿಗೆ ಉತ್ತಮ ದಿಕ್ಕಿನಲ್ಲಿ ಸಾಗುತ್ತಿದೆ
- ಹಣದುಬ್ಬರ ಜುಲೈ-ಆಗಸ್ಟ್‌ನಲ್ಲಿ ಸ್ವಲ್ಪ ಏರಿಕೆ ಕಂಡಿದೆ
- ಬಡ್ಡಿದರ ಇಳಿಕೆಯ ಅಗತ್ಯತೆ ಇಲ್ಲ
ಮಹತ್ವದ ದಿನಾಂಕ
- ಸೆ. 29: MPC ಸಭೆ ಪ್ರಾರಂಭ
- ಅ. 1 (ಬುಧವಾರ): ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸಭೆಯ ತೀರ್ಮಾನ ಪ್ರಕಟಿಸುತ್ತಾರೆ
For More Updates Join our WhatsApp Group :




