ಸ್ಲಿಮ್ ಆಗಲು ಬಯಸುತ್ತೀರಾ? ಪ್ರತಿದಿನ ಬೆಳಿಗ್ಗೆ ಈ ಪಾನೀಯ ಕುಡಿಯಿರಿ – ಸುಲಭ, ನೈಸರ್ಗಿಕ ಮತ್ತು ಪರಿಣಾಮಕಾರಿಯ ಮಾರ್ಗ! HEALTH TIPS.

ಸ್ಲಿಮ್ ಆಗಲು ಬಯಸುತ್ತೀರಾ? ಪ್ರತಿದಿನ ಬೆಳಿಗ್ಗೆ ಈ ಪಾನೀಯ ಕುಡಿಯಿರಿ – ಸುಲಭ, ನೈಸರ್ಗಿಕ ಮತ್ತು ಪರಿಣಾಮಕಾರಿಯ ಮಾರ್ಗ! HEALTH TIPS.

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಫಿಟ್ ಮತ್ತು ಸ್ಲಿಮ್ ಆಗಿರಬೇಕೆಂದು ಬಯಸುತ್ತಾರೆ. ಅದರಲ್ಲೂ ಹೆಂಗಳೆಯರು ಸ್ಲಿಮ್‌ ಆಗಿ ಕಾಣಲು  ಡಯಟ್, ಯೋಗ, ವ್ಯಾಯಾಮ, ಜಿಮ್‌ ವರ್ಕೌಟ್‌ ಅಂತೆಲ್ಲಾ ಹಲವು ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಇಷ್ಟೆಲ್ಲಾ ಕಸರತ್ತು ಮಾಡಿದರೂ ಬೊಜ್ಜು ಕಮ್ಮಿಯಾಗುವುದಿಲ್ಲ, ದೇಹ ತೂಕ ಇಳಿಕೆಯಾಗುವುದಿಲ್ಲ ಅಂತ ಹಲವರು ಹೇಳುತ್ತಾರೆ. ನೀವು ಕೂಡ ಎಷ್ಟೇ ಪ್ರಯತ್ನಪಟ್ಟರೂ ದೇಹ ತೂಕ ಕಮ್ಮಿ ಆಗ್ತಿಲ್ವಾ? ಹಾಗಿದ್ರೆ ಸ್ಲಿಮ್‌ ಆಗಲು ಈ ಒಂದು ಪಾನೀಯವನ್ನು ಪ್ರತಿನಿತ್ಯ ಬೆಳಗ್ಗೆ ಸೇವನೆ ಮಾಡಿ, ಈ ಒಂದು ಸರಳ ಅಭ್ಯಾಸ ತೂಕವನ್ನು ಇಳಿಸುವುದರ ಜೊತೆಗೆ ನಿಮ್ಮ ದೇಹವನ್ನು ಒಳಗಿನಿಂದ ಬಲಿಷ್ಠ ಮತ್ತು ಕ್ರಿಯಾಶೀಲವಾಗಿಸುತ್ತದೆ.

ಸ್ಲಿಮ್ ಆಗಿ ಕಾಣಲು ಬಯಸಿದರೆಬೆಳಿಗ್ಗೆ ಯಾವ ಪಾನೀಯವನ್ನು ಕುಡಿಯಬೇಕು?

ನೀವು ಸ್ಲಿಮ್ ಆಗಿ ಕಾಣಲು ಬಯಸಿದರೆ, ಬೆಳಿಗ್ಗೆ ಬೇಗನೆ ಪಿಂಕ್‌ ಸಾಲ್ಟ್ ನೀರನ್ನು ಕುಡಿಯಿರಿ. ಅನೇಕ ಬಾಲಿವುಡ್ ನಟಿಯರು ಮತ್ತು ಫಿಟ್ನೆಸ್ ತಜ್ಞರು ಈ ಅಭ್ಯಾಸವನ್ನು ತಮ್ಮ ಬೆಳಗಿನ ದಿನಚರಿಯಲ್ಲಿ ಪಾಲಿಸುತ್ತಾರೆ. ಪಿಂಕ್‌ ಸಾಲ್ಟ್‌ ಅಥವಾ ಹಿಮಾಲಯನ್ ಉಪ್ಪು ನಮ್ಮ ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಯ್ದುಕೊಳ್ಳುವ ಅನೇಕ ಅಗತ್ಯ ಖನಿಜಗಳನ್ನು ಹೊಂದಿದ್ದು, ಬೆಚ್ಚಗಿನ ನೀರಿನೊಂದಿಗೆ ಇದನ್ನು ಬೆರೆಸಿದಾಗ, ಇದು ದೇಹವನ್ನು ಪರಿಣಾಮಕಾರಿಯಾಗಿ ಹೈಡ್ರೇಟ್ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಮುಖ್ಯವಾಗಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಿಂಕ್‌ ಸಾಲ್ಟ್‌ ಬೆರೆಸಿದ ನೀರನ್ನು ಕುಡಿಯುವುದರಿಂದ ನೀವು ತೂಕ ಇಳಿಸಿಕೊಳ್ಳಬಹುದು.

ಪಿಂಕ್ಸಾಲ್ಟ್ನೀರನ್ನು ಹೇಗೆ ತಯಾರಿಸುವುದು?

  1. ಪಿಂಕ್ ಸಾಲ್ಟ್ನಿಂಬೆ ಮತ್ತು ಜೇನುತುಪ್ಪದ ಪಾನೀಯಇದಕ್ಕಾಗಿ ಮೊದಲು ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಪಿಂಕ್‌ ಸಾಲ್ಟ್‌ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ, ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ. ಬೇಕಾದರೆ, ನೀವು ಸ್ವಲ್ಪ ಕರಿಮೆಣಸನ್ನು ಕೂಡ ಸೇರಿಸಬಹುದು.
  2. ಪಿಂಕ್ಸಾಲ್ಟ್ಮತ್ತು ಆಪಲ್ ಸೈಡರ್ ವಿನೆಗರ್ ಪಾನೀಯಇದನ್ನು ತಯಾರಿಸಲು, ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ಪಿಂಕ್‌ ಸಾಲ್ಟ್‌ ಮತ್ತು ಆಪಲ್ ಸೈಡರ್ ವಿನೆಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ನಂತರ ಅದಕ್ಕೆ ನಿಂಬೆ ರಸವನ್ನು ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಗುಲಾಬಿ ಉಪ್ಪು ನೀರಿನ ಪಾನೀಯದ ಪ್ರಯೋಜನಗಳೇನು?

  • ತೂಕ ಇಳಿಕೆಗೆ ಸಹಕಾರಿಈ ಪಾನೀಯವು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ, ಇದು ಕೊಬ್ಬನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ.
  • ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆಬೆಳಿಗ್ಗೆ ಇದನ್ನು ಕುಡಿಯುವುದರಿಂದ ಹೊಟ್ಟೆ ಶುದ್ಧವಾಗುತ್ತದೆ ಮತ್ತು ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.
  • ಜಲಸಂಚಯನವನ್ನು ಹೆಚ್ಚಿಸುತ್ತದೆ: ಈ ಪಾನೀಯವನ್ನು ಕುಡಿಯುವುದರಿಂದದೇಹದಲ್ಲಿ ಸರಿಯಾದ ಪ್ರಮಾಣದ ನೀರಿನ ಅಂಶವನ್ನು  ಕಾಪಾಡಿಕೊಳ್ಳಬಹುದು. ಇದರಿಂದಾಗಿ ಚರ್ಮವು ಹೊಳೆಯಲು ಪ್ರಾರಂಭಿಸುತ್ತದೆ.
  • ವಿಷವನ್ನು ಹೊರಹಾಕುತ್ತದೆ: ಇದು ದೇಹದ ನಿರ್ವಿಷೀಕರಣಕ್ಕೂ ಸಹಾಯ ಮಾಡುತ್ತದೆ, ನಿಮ್ಮನ್ನು ಹಗುರ ಮತ್ತು ಶಕ್ತಿಯುತವಾಗಿರಿಸುತ್ತದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *