ದಾವಣಗೆರೆ: ‘ಮೀಟಿಂಗ್ಗೆ ಬನ್ನಿ ಎಂದರೆ ಪ್ರಗ್ನೆಂಟ್ ಎಂದು ಹೇಳುತ್ತಾರೆ. ಆದರೆ ಮಾಮೂಲು ಪಡೆಯುವಾಗ, ಕಲೆಕ್ಷನ್ ಮಾಡುವಾಗ ಪ್ರಗ್ನೆಂಟ್ ಇರುವುದಿಲ್ಲವೇ?’ ಇದು ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಚನ್ನಗಿರಿ ವಲಯ ಅರಣ್ಯಾಧಿಕಾರಿ ಶ್ವೇತಾ ವಿರುದ್ದ ನೀಡಿದ ಅವಹೇಳನಕಾರಿ ಹೇಳಿಕೆ. ಚನ್ನಗಿರಿಯಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಹಿಳಾ ಅಧಿಕಾರಿ ಗೈರಾಗಿದ್ದರು. ಆಗ ಸಿಟ್ಟಿಗೆದ್ದ ಶಾಸಕರು, ಸಂಬಳದ ಜೊತೆಗೆ ಗಿಂಬಳ ತೆಗೆದುಕೊಳ್ಳುವಾಗ ಗರ್ಭಿಣಿಯಾಗಿರಲ್ಲ. ಆದರೆ ಸಭೆಗೆ ಬರಬೇಕೆಂದಾಗ ಮಾತ್ರ ಪ್ರೆಗ್ನೆಂಟ್ ಎನ್ನುತ್ತಾರೆ.
ಪ್ರತಿ ಬಾರಿ ಚಕಪ್ಗೆ ಹೋಗಿದ್ದೇನೆ, ಅಲ್ಲಿ ಇದ್ದೇನೆ ಇಲ್ಲಿ ಇದ್ದೇನೆ ಎನ್ನುತ್ತಾರೆ. ಗರ್ಭಿಣಿಯಾಗಿದ್ದರೆ ರಜೆ ತಗೋಳೋಕೆ ಹೇಳಿ. ನಾಚಿಕೆ ಅಗೋದಿಲ್ವಾ ಹಿಂಗೆಲ್ಲ ಹೇಳೋಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ, ಮಹಿಳಾ ಅಧಿಕಾರಿ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಶಾಸಕರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
For More Updates Join our WhatsApp Group :
