ತಿಪಟೂರು ಅಮಾನಿಕೆರೆಯಲ್ಲಿ ಹಳ್ಳಿ–ನಗರ ಸಂಪರ್ಕಿಸಿದ ಜನ ಮನ ಗೆದ್ದ ಸೊಪ್ಪು ಮೇಳ.

ತಿಪಟೂರು ಅಮಾನಿಕೆರೆಯಲ್ಲಿ ಹಳ್ಳಿ–ನಗರ ಸಂಪರ್ಕಿಸಿದ ಜನ ಮನ ಗೆದ್ದ ಸೊಪ್ಪು ಮೇಳ.

ತಿಪಟೂರು: ಹಿರಿಯ ತಾಯಿಂದಿರು  ಗದ್ದೆ ತೋಟ ಕೆರೆ ಅಂಗಳದಲ್ಲಿ ಬೇಲಿ ಸಾಲಿನಲ್ಲಿ ಸಿಗುವ ಸೊಪ್ಪುಗಳನ್ನು ತಂದು ಅಡುಗೆ ತಯಾರಿಸುವಾಗ ಮನುಷ್ಯ ಆರೋಗ್ಯಕರವಾಗಿದ್ದರು, ಆಧುನಿಕತೆಯ ಸ್ವರ್ಶದಲ್ಲಿ ಬೇಗ ತಯಾರಿಸುವ ಆಹಾರ ಪದ್ದತಿಗೆ ಒಳಪಟ್ಟು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ ಆದ್ದರಿಂದ ನೈಸರ್ಗೀಕವಾಗಿ ಸಿಗುವ ನಮ್ಮ ಸುತ್ತಮುತ್ತಲಿನ ಸೊಪ್ಪುಗಳು ರಾಸಾಯನಿಕ ಮುಕ್ತವಾಗಿರುವುದರಿಂದ ದೇಹಕ್ಕೆ ಆರೋಗ್ಯಕರ ಎಂದು ಕೆರೆಗೋಡಿ ರಂಗಾಪುರದ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಸೊಗಡು ಜನಪದ ಹೆಜ್ಜೆ ಅಮಾನಿಕೆರೆ ಉದ್ಯಾನವನದಲ್ಲಿ ಆಯೋಜಿಸಿದ್ದ ಸೊಪ್ಪಿನ ಮೇಳದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಭೂಮಿಯು ಹಸಿರಾಗಿರಲಿ ಎಂಬ ಉದ್ದೇಶದಿಂದ ಭೂಗೋಳದ ಮೇಲೆ ಸೊಪ್ಪು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು..

ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ನಮ್ಮ ದೇಶದಲ್ಲಿ ಎಲ್ಲಾ ಸಂಪತ್ತು, ಸಂಪನ್ನರಿದ್ದಾರೆ ಅವುಗಳನ್ನು ಸರಿಯಾಗಿ ಸುದುಪಯೋಗ ಮಾಡಿಕೊಳ್ಳವುದರಲ್ಲಿ ವಿಫಲರಾಗಿದ್ದೇವೆ ಹಿತ್ತಲಗಿಡ ಮದ್ದಲ್ಲ ಎಂಬ ಔಧಾರ್ಯದ ಅರಿವು ಬೇಕಾಗಿದೆ. ಇಂದಿನ ಪೀಳಿಗೆಗೆ ಇದು ತುಂಬಾ ಅವಶ್ಯಕವಾಗಿದೆ.

ಉಪವಿಭಾಗಧಿಕಾರಿ ಸಪ್ತಶ್ರೀ ಮಾತನಾಡಿ ಅಣ್ಣೆ ಸೊಪ್ಪು ಕಣ್ಣಿಗೆ, ನುಗ್ಗೆ ದೇಹಕ್ಕೆ ಆರೋಗ್ಯಕರ ಎಂಬುದನ್ನು ಪದಗಳ ಕಟ್ಟಿಕೊಂಡು ಸೋಬಾನ ಗೀತೆಗಳು ಮೂಲಕ ನಮ್ಮ ಹಿರಿಯರು ತಿಳಿಸುತ್ತಿದ್ದರು ಸೊಪ್ಪು ಸಂಸ್ಕೃತಿ ಸಂಕೇತವಾಗಿದೆ. ನೈಸರ್ಗಿಕ ಸೊಪ್ಪುಗಳು ಯಾವುದೇ ರಾಸಾಯನಿಕತೆಯಿಂದ ಮಿಶ್ರಣಗೊಳ್ಳದೆ ಪ್ರಕೃತಿಯ ಉಡುಗೊರೆಯಾಗಿದ್ದು, ಒಂದು ಬಗೆಯ ಆಹಾರವಲ್ಲದೆ ಮನೆಯ ಮದ್ದಾಗಿದೆ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ರವಾನಿಸುವ ಕೆಲಸವನ್ನು ನಾವುಗಳು ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸಿರಿಗಂಧಗುರು ನಮ್ಮ ಸಂಸ್ಥೆ ವತಿಯಿಂದ ಕೆಸರುಗದ್ದೆ ಓಟ, ಹಲಸಿನ ಮೇಳ, ರಾಗಿಮೇಳ, ಸೇರಿದಂತೆ ಪ್ರತಿ ವರ್ಷ ಪರಿಸರ ಸ್ನೇಹಿ ಗಣಪತಿ ವಿಗ್ರಹ ತಯಾರಿಕಾ ಶಿಬಿರಗಳನ್ನು ಆಯೋಜನೆ ಮಾಡುತ್ತಾ ಬರುತ್ತಿದ್ದು ಈ ಬಾರಿ ಸೊಪ್ಪಿನ ಮೇಳಕ್ಕೆ ಸಾರ್ವಜನಿಕರು ತುಂಬಾ ಸಹಕರಿಸಿದ್ದಾರೆ.

ಸೊಪ್ಪುಮೇಳದಲ್ಲಿ ಚಕ್ರಮುನಿ ಸೊಪ್ಪು, ದೊಡ್ಡಪತ್ರೆ, ಕುಂಬಳಸೊಪ್ಪು, ಹೆಮ್ಮೆರೊಡ್ಡಿ ಸೊಪ್ಪು, ಬೆರೆಕೆ ಸೊಪ್ಪು, ಗಣಿಕೆ ಸೊಪ್ಪು, ಅನಗಾನೆ ಸೊಪ್ಪು, ಅಣ್ಣೆ ಸೊಪ್ಪು, ಅಕ್ಕಿಹೊರೆ ಸೊಪ್ಪು, ಉತ್ತರಾಣಿ ಸೊಪ್ಪು, ಚುರುಕೆ ಸೊಪ್ಪು, ಆಡಸೋಗೆ ಸೊಪ್ಪು, ಚಿತ್ರಮಲ್ಲಿ.  ಹಸಿರು ಬಸಳೆ, ನಂಜಬಟ್ಟಲು ಸೊಪ್ಪು, ಬಾಯಿಬಸಳೆ,ಬ್ರಾಹ್ಮಿ, ಮಳೆಕಾಳಿನ ಸೊಪ್ಪು, ತಂಗಡಿಸೊಪ್ಪು, ಉತ್ರಾಣಿ, ಗುಳಗಂಜಿ, ನುಗ್ಗೆ, ಅಗಸೆ, ಕೆರೆಸೊಪ್ಪು, ದೊಳ್ಯಸೊಪ್ಪು, ಸಂತೆ ಸೊಪ್ಪು, ಮುಣ್ಣೆಸೊಪ್ಪು, ಗೊರಿಕೆಗೆರೆ ಸೊಪ್ಪು, ಮಾಗಿಗೆ ಸೊಪ್ಪು, ಬಟಾಣಿ ಸೊಪ್ಪು, ಸೇರಿದಂತೆ ನೂರಕ್ಕೂ ಹೆಚ್ಚು ಸೊಪ್ಪುಗಳು ಮಾರಾಟ ಹಾಗೂ ಪ್ರದರ್ಶನಗೊಂಡು ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಸೊಪ್ಪಿನ ಮಾಹಿತಿಯನ್ನು ತಿಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿರಿಗಂಧಗುರು ವಹಿಸಿದ್ದು, ಸಮಾಜ ಸೇವಕ ನಮ್ರತಾಆಯಿಲ್ ಶಿವಪ್ರಸಾದ್, ಚೌಡೇಶ್ವರಿ ಸಂಘದ ಅಧ್ಯಕ್ಷ ಸೋಮಶೇಖರ್, ಪೌರಯುಕ್ತ ವಿಶ್ವೇಶ್ವರಬದರಗಡೆ, ತೋಟಗಾರಿಕೆ ಇಲಾಖೆಯ ಚಂದ್ರಶೇಖರ್, ಸಣ್ಣ ನೀರಾವರಿ ಇಲಾಖೆ ದೊಡ್ಡಯ್ಯ, ಸಂಘದ ಗೌರವಧ್ಯಕ್ಷ ಮುರಳೀಧರ್ ಗುಂಗರಮಳೆ, ನಿಜಗುಣ, ಮಂಜುಳತಿಮ್ಮೇಗೌಡ, ಸುರೇಶ್, ಆನಂದ್, ಡಾ.ಓಹಿಲಾಗಂಗಾಧರ್, ವೈದ್ಯರಾದ ಶ್ರೀಧರ್, ವಿವೇಚನ್, ಸೊಪ್ಪು ಗಣೇಶ, ತರಕಾರಿ ಗಂಗಾಧರ್, ತರಕಾರಿ ನಾಗರಾಜು ಸೇರಿದಂತೆ ಹಲವಾರು ಗಣ್ಯರು ಸಾವಿರಾರು ಸಾರ್ವಜನಿಕರು ಮೇಳದಲ್ಲಿ ಭಾಗವಹಿಸಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *