ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಪುಣಜನೂರು ಅರಣ್ಯ ವ್ಯಾಪ್ತಿಯ ಬೇಡುಗೊಳಿ ಎಸ್ಟೇಟ್‌ನಲ್ಲಿ ತಾಯಿಯಿಂದ ಬೇರ್ಪಟ್ಟ ಮೂರು ಹುಲಿ ಮರಿಗಳು ಅಕ್ಟೋಬರ್ 15ರಂದು ಪತ್ತೆಯಾಗಿದ್ದವು. ಈ ವೇಳೆ ಒಂದು NGOಕ್ಕೆ ಸೇರಿದ ಕೆಲವರು ಹುಲಿ ಮರಿಗಳನ್ನು ಕೈಯಲ್ಲಿ ಹಿಡಿದು ಸ್ಪರ್ಶಿಸಿ, ವೀಡಿಯೋ ಚಿತ್ರೀಕರಿಸಿದ್ದರು. ಆ ದೃಶ್ಯವನ್ನು ಎನ್‌ಜಿಒ ಒಂದು ತನ್ನ ಗ್ರೂಪ್‌ನಲ್ಲಿ ಹಂಚಿಕೊಂಡಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ, ವನ್ಯಜೀವಿಗಳನ್ನು ಸ್ಪರ್ಶಿಸುವುದು ಹಾಗೂ ಅವರೊಂದಿಗೆ ಫೋಟೋ–ವೀಡಿಯೋ ಮಾಡುವುದು ಕಾನೂನುಬಾಹಿರ. ಮನುಷ್ಯ ಸ್ಪರ್ಶವಾದ ನಂತರ ತಾಯಿ ಹುಲಿ ಮರಿಗಳನ್ನು ಸೇರಿಸಿಕೊಳ್ಳುವುದಿಲ್ಲ ಎಂಬ ಕಾರಣವನ್ನು ಉಲ್ಲೇಖಿಸಿ, ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಳ್ಳಿ ಈ ಕಾನೂನು ಉಲ್ಲಂಘನೆ ಕುರಿತು ಅರಣ್ಯ ಸಚಿವರಿಗೆ ಇಮೇಲ್ ಮತ್ತು ಪತ್ರದ ಮೂಲಕ ದೂರು ನೀಡಿ, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
For More Updates Join our WhatsApp Group :
