ಚಳಿಗಾಲದಲ್ಲಿ ವಾಕಿಂಗ್ ಅಥವಾ ರನ್ನಿಂಗ್ ಮಾಡುವ ಮೊದಲು ಗಮನಿಸಬೇಕಾದ ಪ್ರಮುಖ ವಿಚಾರಗಳು!

ಚಳಿಗಾಲದಲ್ಲಿ ವಾಕಿಂಗ್ ಅಥವಾ ರನ್ನಿಂಗ್ ಮಾಡುವ ಮೊದಲು ಗಮನಿಸಬೇಕಾದ ಪ್ರಮುಖ ವಿಚಾರಗಳು!

ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲಾಗಿದೆ. ಹಾಗಾಗಿ ನಮ್ಮ ದೇಹವನ್ನು ಸದೃಢವಾಗಿಟ್ಟುಕೊಂಡು ಕಾಯಿಲೆಗಳಿಂದ ದೂರವಿರಲು ರನ್ನಿಂಗ್ ಮತ್ತು ವಾಕಿಂಗ್ ಮಾಡುವುದು ಒಳ್ಳೆಯ ಅಭ್ಯಾಸಗಳಲ್ಲಿ ಒಂದಾಗಿದೆ. ಮಾತ್ರವಲ್ಲ, ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ನಿಮಗೆ ತಿಳಿದಿರಬಹುದು, ಪ್ರತಿನಿತ್ಯ ಮಾಡುವ ವ್ಯಾಯಾಮವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದ್ದು ತೂಕವನ್ನು ನಿಯಂತ್ರಿಸುತ್ತದೆ. ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಅದರಲ್ಲಿಯೂ ಚಳಿಗಾಲದ ಬೆಳಗಿನ ತಾಜಾ ಗಾಳಿಯಲ್ಲಿ ನಡೆಯುವುದು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ. ಹೀಗೆ, ಬೆಳಗ್ಗಿನ ಸಮಯದಲ್ಲಿ ಓಡುವುದು ಅಥವಾ ನಡೆಯುವ ಅಭ್ಯಾಸ ದೇಹವನ್ನು ಸಕ್ರಿಯವಾಗಿ ಮತ್ತು ಆರೋಗ್ಯಕರವಾಗಿಡಲು ಅತ್ಯುತ್ತಮ ಮಾರ್ಗವಾಗಿದೆ ಎಂದರೆ ತಪ್ಪಾಗಲಾರದು. ಆದರೆ ಅದಕ್ಕೂ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಈ ಅಭ್ಯಾಸ ನಿಮಗೆ ಲಾಭಕ್ಕಿಂತ ಹಾನಿಯುಂಟುಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾದರೆ ರನ್ನಿಂಗ್ ಅಥವಾ ವಾಕಿಂಗ್ ಮಾಡುವ ಮೊದಲು ನಮ್ಮ ತಯಾರಿ ಹೇಗಿರಬೇಕು, ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ರೀತಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ?

ಸಾಮಾನ್ಯವಾಗಿ ರನ್ನಿಂಗ್ ಅಥವಾ ವಾಕಿಂಗ್ ಮಾಡುವುದು ದೇಹದಲ್ಲಿ ಹೆಚ್ಚಿದ ಆಮ್ಲಜನಕದ ಮಟ್ಟಗಳು ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಆದರೆ ಚಳಿಗಾಲದಲ್ಲಿ, ತಾಪಮಾನದಲ್ಲಿನ ಇಳಿಕೆ ಕಂಡುಬರುವುದರಿಂದ ದೇಹದ ಉಷ್ಣತೆಯನ್ನು ಕೂಡ ಕಡಿಮೆ ಮಾಡುತ್ತದೆ, ಇದು ಸ್ನಾಯುಗಳನ್ನು ಬಿಗಿಗೊಳಿಸುತ್ತದೆ ಮತ್ತು ನೋವು, ಸೆಳೆತದಂತಹ ಅಪಾಯವನ್ನು ಹೆಚ್ಚಿಸುತ್ತದೆ. ಇಂತಹ ಸಮಯದಲ್ಲಿ ಸರಿಯಾದ ಅಭ್ಯಾಸವಿಲ್ಲದೆ ಓಡುವುದು ಅಥವಾ ನಡೆಯುವುದು ಆರೋಗ್ಯಕ್ಕೆ ಬಹಳ ಹಾನಿಕಾರಕವಾಗಿದೆ. ಹೆಚ್ಚುವರಿಯಾಗಿ, ತಂಪಾದ ಗಾಳಿ ಮತ್ತು ವಾಯುಮಾಲಿನ್ಯವು ಉಸಿರಾಟದ ತೊಂದರೆಗೆ ಕಾರಣವಾಗಬಹುದು, ಅದರಲ್ಲಿಯೂ ಉಸಿರಾಟದ ಕಾಯಿಲೆಗಳು ಅಥವಾ ಅಲರ್ಜಿ ಇರುವವರಿಗೆ ಇದು ಹೆಚ್ಚಿನ ಅಪಾಯ ಉಂಟುಮಾಡಬಹುದು. ಇದಲ್ಲದೆ, ನಿಮಗೆ ಶೀತ ಅಥವಾ ಜ್ವರ ಇದ್ದರೆ, ತಂಪಾದ ಗಾಳಿಯಲ್ಲಿ ಹೊರಗೆ ಹೋಗುವುದು ರೋಗಲಕ್ಷಣಗಳನ್ನು ಇನ್ನಷ್ಟು ಹೆಚ್ಚಿಸಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *