ಕೇವಲ ₹30 ರೂ.ಗೆ ರಾಕೆಟ್ ಸರ್ವಿಸ್! ಚೆನ್ನೈ ಕಂಪನಿಯಿಂದ ‘ವಾಯುಪುತ್ರ’ ಮರುಬಳಕೆಯ ಎಲೆಕ್ಟ್ರಿಕ್ ರಾಕೆಟ್ ಆವಿಷ್ಕಾರ.

ಕೇವಲ ₹30 ರೂ.ಗೆ ರಾಕೆಟ್ ಸರ್ವಿಸ್! ಚೆನ್ನೈ ಕಂಪನಿಯಿಂದ ‘ವಾಯುಪುತ್ರ’ ಮರುಬಳಕೆಯ ಎಲೆಕ್ಟ್ರಿಕ್ ರಾಕೆಟ್ ಆವಿಷ್ಕಾರ.

ಚೆನ್ನೈ: ವಿಶ್ವದಲ್ಲೇ ಅತ್ಯಂತ ಹಗುರ ಸೆಟಿಲೈಟ್ ಎನಿಸಿದ ಕಲಾಮ್​ಸ್ಯಾಟ್ ಅನ್ನು ನಿರ್ಮಿಸಿದ ಸ್ಪೇಸ್ ಕಿಡ್ಸ್  ಎನ್ನುವ ಕಂಪನಿ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಎಲೆಕ್ಟ್ರಿಕ್ ರಾಕೆಟ್ ಆವಿಷ್ಕರಿಸಿದೆ. ಬಯೋಪ್ಲಾಸ್ಟಿಕ್, ಕಾರ್ಬನ್ ಫೈಬರ್​ನಿಂದ ಕೂಡಿದ ಈ ರಾಕೆಟ್ ಅನ್ನು 3ಡಿ ಪ್ರಿಂಟಿಂಗ್ ಟೆಕ್ನಾಲಜಿಯಿಂದ  ನಿರ್ಮಿಸಲಾಗಿದೆ. ಪರಿಸರಸ್ನೇಹಿಯಾದ ಈ ಎಲೆಕ್ಟ್ರಿಕ್ ರಾಕೆಟ್ ಅನ್ನು ಮರುಬಳಕೆ  ಕೂಡ ಮಾಡಬಹುದು.

ಈ ಸ್ಪೇಸ್ ಕಿಡ್ಸ್ ಕಂಪನಿಯ ಹಿಂದಿನ ಶಕ್ತಿ ಡಾ. ಶ್ರೀಮತಿ ಕೇಶನ್ ಬಹಳ ಚಿಕ್ಕ ವಯಸ್ಸಿನ ಉದ್ಯೋಗಿಗಳ ಪಡೆ ಇವರೆ ಕಂಪನಿಯಲ್ಲಿದೆ. ಬಹಳ ನಾವೀನ್ಯತಾ ಆಲೋಚನೆಯ ಹುಡುಗರು ತಮ್ಮಲ್ಲಿದ್ದಾರೆ ಎಂದು ಶ್ರೀಮತಿ ಹೇಳುತ್ತಾರೆ. ಇವರ ಕಂಪನಿ ಆವಿಷ್ಕರಿಸಿದ ರಾಕೆಟ್ ಬಹಳ ಕಡಿಮೆ ವೆಚ್ಚದಲ್ಲಿ ಪೇಲೋಡ್​ಗಳನ್ನು ಆಕಾಶಕ್ಕೆ ತೆಗೆದುಕೊಂಡು ಹೋಗಬಲ್ಲುದು.

 ‘ಈ ಒಂದು ಉದ್ಯಮವು ಭಾರತವನ್ನು ಸೂಪರ್​ಪವರ್ ಮಾಡಬಲ್ಲುದು’ ಎಂದು ಶ್ರೀಮತಿ ಕೇಸನ್ ಹೇಳುತ್ತಾರೆ.

ಸ್ಪೇಸ್ ಕಿಡ್ಸ್ ಆವಿಷ್ಕರಿಸಿದ ರಾಕೆಟ್​ನಲ್ಲಿ 4-5 ಕಿಮೀ ಎತ್ತರದಲ್ಲಿ ಸಣ್ಣ ಪೇಲೋಡ್​ಗಳನ್ನು ಸಾಗಿಸಬಹುದು. ಈ ರಾಕೆಟ್​ನಿಂದ ಪೇಲೋಡ್ ಕಳುಹಿಸಲು ಕೇವಲ 30 ರೂ ಮಾತ್ರವೇ ವೆಚ್ಚವಾಗುತ್ತದೆ. ಹೀಗಾಗಿ, ವಿದ್ಯಾರ್ಥಿಗಳ ಸಂಶೋಧನೆಗೆ ಇದು ಬಹಳ ವರದಾನವಾಗುತ್ತದೆ ಎನ್ನಲಾಗಿದೆ. ಅಂದಹಾಗೆ ಈ ರಾಕೆಟ್​ನ ಹೆಸರನ್ನು ವಾಯುಪುತ್ರ ಎಂದಿಡಲಾಗಿದೆ.

ವಿದ್ಯಾರ್ಥಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಯೋಗಗಳನ್ನು ನಡೆಸಲು ನಿರ್ಮಿಸುವ ಈ ರಾಕೆಟ್ ಅನ್ನು ಬಳಸಿಕೊಳ್ಳಬಹುದು. ಏರ್ ಕ್ವಾಲಿಟಿ ಸೆನ್ಸಾರ್​ಗಳು, ಗಾಳಿ ಚಲನೆ ಸಂವೇದಕಗಳು, ಮಾಲಿನ್ಯ ಅಧ್ಯಯನ ಇತ್ಯಾದಿ ಕಾರ್ಯಗಳಿಗೆ ಸೀಮಿತವಾದ ಪುಟ್ಟ ಯಂತ್ರಗಳನ್ನು ಪೇಲೋಡ್​ಗಳಾಗಿ ಕಳುಹಿಸಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *