“ಮಹೇಶ್‌ ಬಾಬು – ರಾಜಮೌಳಿ ಚಿತ್ರದ ಮಂದಾಕಿನಿ ಪಾತ್ರಕ್ಕೆ ಐಶ್ವರ್ಯಾ ರೈಗೂ ಆಫರ್ ..

 “ಮಹೇಶ್‌ ಬಾಬು – ರಾಜಮೌಳಿ ಚಿತ್ರದ ಮಂದಾಕಿನಿ ಪಾತ್ರಕ್ಕೆ ಐಶ್ವರ್ಯಾ ರೈಗೂ ಆಫರ್ ..

ಮಹೇಶ್-ರಾಜಮೌಳಿ ಅವರ ಈ ಚಿತ್ರವು ಸದ್ಯಕ್ಕೆ ಚಿತ್ರಪ್ರೇಮಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಚಿತ್ರಗಳಲ್ಲಿ ಒಂದಾಗಿದೆ. ಗ್ಲೋಬ್‌ಟ್ರಾಟರ್ (ವರ್ಕಿಂಗ್ ಟೈಟಲ್) ಎಂಬ ಹೆಸರಿನ ಈ ಚಿತ್ರದ ಅಪ್​​ಡೇಟ್​ಗಳು ಬರುತ್ತಿವೆ. ಈ ಆ್ಯಕ್ಷನ್ ಸಾಹಸ ಚಿತ್ರದಿಂದ ಬಿಡುಗಡೆಯಾದ ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರ ಫಸ್ಟ್ ಲುಕ್ ಮತ್ತು ಸಂಚಾರಿ ಹಾಡು ಈಗಾಗಲೇ ಟ್ರೆಂಡಿಂಗ್‌ನಲ್ಲಿವೆ. ಈ ಚಿತ್ರದ ಈವೆಂಟ್ ಇಂದು (ನವೆಂಬರ್ 15 ) ನಡೆಯಲಿದೆ. ಈ ಸಿನಿಮಾದ ಹೀರೋಯಿನ್​ ಆಫರ್ ಮೊದಲು ಇಬ್ಬರು ನಟಿಯರಿಗೆ ಹೋಗಿತ್ತು ಎಂಬ ವಿಚಾರ ಈಗ ರಿವೀಲ್ ಆಗಿದೆ.

ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಅವರ ಮೊದಲ ಲುಕ್ ಬುಧವಾರ (ನವೆಂಬರ್ 12) ರಿವೀಲ್ ಆಗಿದೆ. ಈ ಪೋಸ್ಟರ್‌ನಲ್ಲಿ, ಪ್ರಿಯಾಂಕಾ ಚೋಪ್ರಾ.. ಸೀರೆಯಲ್ಲಿ.. ಹೀಲ್ಸ್ ಧರಿಸಿ.. ಕೈಯಲ್ಲಿ ಪಿಸ್ತೂಲ್ ಹಿಡಿದು, ಅವರು ತುಂಬಾ ಡೈನಾಮಿಕ್ ಹಾಗೂ ಪವರ್‌ಫುಲ್ ಆಗಿ ಕಾಣಿಸಿಕೊಡಿದ್ದಾರೆ. ಈ ಪೋಸ್ಟರ್ ಬಿಡುಗಡೆಯಾದ ಕ್ಷಣ, ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಂದಾಕಿನಿಯಾಗಿ ಪ್ರಿಯಾಂಕಾ ಅವರ ಲುಕ್ ಅದ್ಭುತವಾಗಿದೆ ಎಂಬ ಪ್ರಶಂಸೆಗಳು ಕೇಳಿಬರುತ್ತಿವೆ. ಚಿತ್ರದ ಮೇಲಿನ ನಿರೀಕ್ಷೆಗಳು ಹೆಚ್ಚಿವೆ.

ಈ ಚಿತ್ರದಲ್ಲಿ ಮಂದಾಕಿನಿ ಪಾತ್ರಕ್ಕಾಗಿ ಪ್ರಿಯಾಂಕಾ ಚೋಪ್ರಾಗಿಂತ ಮೊದಲು ಇಬ್ಬರು ನಾಯಕಿಯರನ್ನು ರಾಜಮೌಳಿ ಸಂಪರ್ಕಿಸಿದ್ದರು. ಅವರಲ್ಲಿ ಒಬ್ಬರು ಐಶ್ವರ್ಯಾ ರೈ. ಆರ್‌ಆರ್‌ಆರ್ ಚಿತ್ರೀಕರಣ ಮುಗಿದ ತಕ್ಷಣ, ರಾಜಮೌಳಿ ಮುಂಬೈಗೆ ಹೋಗಿ ಈ ಪಾತ್ರಕ್ಕಾಗಿ ಐಶ್ವರ್ಯಾ ಅವರನ್ನು ಸಂಪರ್ಕಿಸಿದರು. ಆದರೆ ಐಶ್ವರ್ಯಾ ಈ ಚಿತ್ರದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *