8 ತಿಂಗಳ ಗರ್ಭಿಣಿ ಭಾರತೀಯ ಮೂಲದ ಮಹಿಳೆ ಸ್ಥಳದಲ್ಲೇ ದುರ್ಮರಣ.

8 ತಿಂಗಳ ಗರ್ಭಿಣಿ ಭಾರತೀಯ ಮೂಲದ ಮಹಿಳೆ ಸ್ಥಳದಲ್ಲೇ ದುರ್ಮರಣ.

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಭಾರತ ಮೂಲದ ಮಹಿಳೆ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಕೆ ಮಗುವಿಗೆ ಜನ್ಮ ನೀಡಲು ಕೆಲವೇ ಕೆಲವು ವಾರಗಳು ಬಾಕಿ ಉಳಿದಿದ್ದವು. ಎಂಟು ತಿಂಗಳ ಗರ್ಭಿಣಿಯಾಗಿದ್ದ ಸಮನ್ವಿತಾ ಧಾರೇಶ್ವರ್ ತನ್ನ ಪತಿ ಮತ್ತು ಮೂರು ವರ್ಷದ ಮಗನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ 8 ಗಂಟೆಗೆ ಹಾರ್ನ್ಸ್‌ಬೈಯ ಜಾರ್ಜ್ ಸ್ಟ್ರೀಟ್‌ನಲ್ಲಿ ಧಾರೇಶ್ವರ್ ಮತ್ತು ಅವರ ಕುಟುಂಬವು ಪಾದಚಾರಿ ಮಾರ್ಗವನ್ನು ದಾಟಲು ಪ್ರಯತ್ನಿಸಿತ್ತು. ಆ ಸಮಯದಲ್ಲಿ ಕಿಯಾ ಕಾರ್ನಿವಲ್ ಕಾರು ಕಾರು ನಿಧಾನಗೊಳಿಸಿತ್ತು, ಆದರೆ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಆ ಡಿಕ್ಕಿ ಪರಿಣಾಮ ಕಿಯಾ ಕಾರು ಮುಂದಕ್ಕೆ ದೂಡಿದಂತಾಗಿ ಪಾರ್ಕ್​ ಕಡೆಗೆ ದಾಟುತ್ತಿದ್ದ ಮೂವರಿಗೂ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಸಮನ್ವಿತಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ವೆಸ್ಟ್‌ಮೀಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ದುಃಖಕರವೆಂದರೆ, ಅವರನ್ನು ಅಥವಾ ಅವರ ಗರ್ಭದಲ್ಲಿರುವ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು 19 ವರ್ಷದ ಪಿ-ಪ್ಲೇಟರ್ (ತಾತ್ಕಾಲಿಕ ಅಥವಾ ಪ್ರೊಬೇಷನರಿ ಪರವಾನಗಿ ಹೊಂದಿರುವ ಚಾಲಕ) ಆರನ್ ಪಾಪಜೋಗ್ಲು ಚಲಾಯಿಸುತ್ತಿದ್ದರು ಎಂದು ವರದಿಯಾಗಿದೆ. ಆದಾಗ್ಯೂ, ಬಿಎಂಡಬ್ಲ್ಯು ಮತ್ತು ಕಿಯಾ ಕಾರುಗಳ ಚಾಲಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಧಾರೇಶ್ವರ್ ಅವರ ಪತಿ ಮತ್ತು ಅವರ ಮೂರು ವರ್ಷದ ಮಗುವಿಗೆ ಯಾವ ಪ್ರಮಾಣದಲ್ಲಿ ಗಾಯಗಳಾಗಿವೆ ಎಂಬುದು ತಿಳಿದಿಲ್ಲ.ನಂತರ ಬಿಎಂಡಬ್ಲ್ಯೂ ಕಾರಿನ ಚಾಲಕನನ್ನು ವಹ್ರೂಂಗಾದ ಅವನ ಮನೆಯಲ್ಲಿ ಬಂಧಿಸಲಾಯಿತು.ಅವನ ಮೇಲೆ ಅಪಾಯಕಾರಿ ಚಾಲನೆ, ನಿರ್ಲಕ್ಷ್ಯದ ಚಾಲನೆ, ಸಾವಿಗೆ ಕಾರಣ ಮತ್ತು ಭ್ರೂಣದ ನಷ್ಟಕ್ಕೆ ಕಾರಣವಾದ ಆರೋಪ ಹೊರಿಸಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *